»   » 61 ವರ್ಷದ ಹಿಂದಿನ ಸೀರೆ ತೊಟ್ಟು ಪ್ರಶಸ್ತಿ ಪಡೆದ ರಶ್ಮಿಕಾ: ಏನಿದರ ಗುಟ್ಟು.?

61 ವರ್ಷದ ಹಿಂದಿನ ಸೀರೆ ತೊಟ್ಟು ಪ್ರಶಸ್ತಿ ಪಡೆದ ರಶ್ಮಿಕಾ: ಏನಿದರ ಗುಟ್ಟು.?

Posted By:
Subscribe to Filmibeat Kannada
ರಶ್ಮಿಕಾ ಧರಿಸಿದ ಈ ಸೀರೆಯ ಹಿಂದೆ ಒಂದು ಅದ್ಭುತ ಕಥೆ ಇದೆ | Filmibeat Kannada

'ಕಿರಿಕ್ ಪಾರ್ಟಿ' ಚೆಲುವೆ, 'ಅಂಜನಿಪುತ್ರ'ನ ರಾಣಿ, 'ಚಮಕ್' ಹುಡುಗಿ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಬೆಂಗಳೂರು ಟೈಮ್ಸ್ ನ 'ಮೋಸ್ಟ್ ಡಿಸೈರಬಲ್ ವುಮೆನ್' ಪ್ರಶಸ್ತಿ ಪಡೆದುಕೊಂಡಿದ್ದರು. ಅದರ ಬೆನ್ನಲ್ಲೇ ಜೀ ಕನ್ನಡದ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಕೂಡ ತೆಗೆದುಕೊಂಡರು.

ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪಡೆಯಲು ಕಾರ್ಯಕ್ರಮಕ್ಕೆ ಹೋಗಿದ್ದ ರಶ್ಮಿಕಾ ಕೆಂಪು ಬಣ್ಣದ ಚೆಂದದ ಸೀರೆಯನ್ನ ಕೊಡವ ಶೈಲಿಯಲ್ಲಿ ತೊಟ್ಟು ಹೋಗಿದ್ದರು. ಇದು ನೋಡಗರ ಕಣ್ಣು ಕುಕ್ಕುತ್ತಿತ್ತು.

ಆದ್ರೆ, ಅವಾರ್ಡ್ ಕಾರ್ಯಕ್ರಮದಲ್ಲಿ ರಶ್ಮಿಕಾ ಧರಿಸಿದ್ದ ಸೀರೆಯ ಹಿಂದೆ ಒಂದು ಇತಿಹಾಸವಿದೆ. ಈ ಸೀರೆ ನಿನ್ನೆ ಮೊನ್ನೆ ಕೊಂಡುಕೊಂಡಿರುವುದಲ್ಲ. ಇದು ಸುಮಾರು 61 ವರ್ಷಗಳ ಹಳೆಯ ಸೀರೆ. ಏನಿದು ಸೀರೆಯ ಕಹಾನಿ. ಮುಂದೆ ಓದಿ....

ಸೀರೆಯಲ್ಲಿ ಮಿಂಚಿದ ಕೊಡಗಿನ ಕುವರಿ

ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭದಲ್ಲಿ ಮಿರ ಮಿರ ಮಿಂಚಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕೊಡವ ಶೈಲಿಯಲ್ಲಿ ಸೀರೆಯುಟ್ಟು ಕಂಗೊಳಿಸಿದ್ದರು.

'ಚಲೋ' ಚಿತ್ರದಲ್ಲಿ ರಶ್ಮಿಕಾ ಮೋಡಿಗೆ ತೆಲುಗು ಪ್ರೇಕ್ಷಕರು ಬೌಲ್ಡ್

ಇದು ಅಜ್ಜಿಯ ಸೀರೆ

ರಶ್ಮಿಕಾ ಮಂದಣ್ಣ ಧರಿಸಿದ್ದ ಕೆಂಪು ಬಣ್ಣದ ಸೀರೆ ಅವರ ಅಜ್ಜಿಯದ್ದು. ಈ ವಿಷ್ಯವನ್ನ ಸ್ವತಃ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.

ಭಾವಿ ಪತಿ ರಕ್ಷಿತ್ ಬಗ್ಗೆ 4 ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ರಶ್ಮಿಕಾ

ಈ ಸೀರೆ ಮೇಲೆ ಸೆಂಟಿಮೆಂಟ್ ಹೆಚ್ಚಿದೆ

ಇದು ಸುಮಾರು 61 ವರ್ಷಗಳ ಹಿಂದಿನ ಸೀರೆ. ಅವರ ಅಜ್ಜಿ ನಂತರ ಅಮ್ಮನಿಗೆ ಕೊಟ್ಟಿದ್ದರು. ಈಗ ಅವರ ಅಮ್ಮ ಮಗಳಿಗೆ ಕೊಟ್ಟಿದ್ದಾರೆ. ಹೀಗಾಗಿ, ಮೂರು ತಲೆಮಾರನ್ನ ಈ ಸೀರೆ ಕಂಡಿದೆ.

ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು

''ನಾನು ಬೆಳೆದದ್ದು ಅಜ್ಜಿ ಬಳಿಯೇ. ನಾನು ಜೀವನದಲ್ಲಿ 'ಏನೋ ಒಂದು ಆಗುವೆ' ಎಂದು ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಅವರು ನಮ್ಮನ್ನು ಬಿಟ್ಟು ಹೋದಾಗ ನನಗೆ ಕೋಪ ಬಂದಿತ್ತು. ನಾವರನ್ನು ತುಂಬಾ ಮಿಸ್‌ ಮಾಡುತ್ತಿರುವೆ. ಈಗ ಅಜ್ಜಿ ನನ್ನ ನೋಡಿ ಹೆಮ್ಮೆ ಪಡುತ್ತಿರಬಹುದು. ಆಕೆಯ ಸೀರೆ ಧರಿಸಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯಾಗಿದೆ. ನನಗೆ ಸಿಕ್ಕಿರುವುದು ನನ್ನ ಮುಂದಿನ ಪೀಳಿಗೆಗೂ ಹೋಗಬೇಕಾಗಿದೆ, ಆದ್ದರಿಂದ ಇದರ ಬಗ್ಗೆ ನನಗೆ ತುಂಬಾ ಸೆಂಟಿಮೆಂಟ್'' ಎಂದು ತಮ್ಮ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

English summary
Kannada Actress Rashmika Mandanna recieved 'Hemmeya Kannadiga' award from zee kannada channel. she has come wearing a beautiful saree of her grandmother. ಕನ್ನಡ ನಟಿ ರಶ್ಮಿಕಾ ಮಂದಣ್ಣ ಜೀ ಕನ್ನಡ ಆಯೋಜಿಸಿದ್ದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪಡೆದುಕೊಂಡರು. ಈ ಕಾರ್ಯಕ್ರಮಕ್ಕೆ ಸೀರೆಯುಟ್ಟು ಬಂದಿದ್ದು ಗಮನ ಸೆಳೆಯಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada