ನಟ ಮಹೇಶ್ ಬಾಬುಗೆ ಕೂರ್ಗ್ ನಿಂದ ವಿಶೇಷ ಉಡುಗೊರೆ ಕಳುಹಿಸಿಕೊಟ್ಟ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ತೆಲುಗಿನ ಸೂಪರ್ ಸ್ಟಾರ್ಸ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ ಕೊನೆಯದಾಗಿ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

Recommended Video

Darshan to Dub For Chirus Rajamarthanda:ಚಿರು ಸರ್ಜಾಗೆ ಧನಿಯಾಗಲು ಮುಂದೆ ಬಂದ ದಾಸ ದರ್ಶನ್|Filmibeat Kannada

ಈ ಸಿನಿಮಾ ರಶ್ಮಿಕಾಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿದೆ. ಈ ಸಿನಿಮಾ ಮೂಲಕ ರಶ್ಮಿಕಾ ಮಹೇಶ್ ಬಾಬು ಜೊತೆ ಮೊದಲ ಬಾರಿಗೆ ತೆರೆಹಂಚಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಮಹೇಶ್ ಬಾಬು ಕುಟಂಬದ ಜೊತ ಉತ್ತಮ ಸ್ನೇಹ ಇಟ್ಟುಕೊಂಡಿದ್ದ ರಶ್ಮಿಕಾ ಸಿನಿಮಾ ನಂತರವೂ ಇದೇ ಬಾಂದವ್ಯ ಮುಂದುವರೆಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದರೆ ರಶ್ಮಿಕಾ ಇತ್ತೀಚಿಗೆ ಮಹೇಶ್ ಬಾಬು ಕುಟುಂಬಕ್ಕೆ ವಿಶೇಷವಾದ ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ. ಮುಂದೆ ಓದಿ..

ರಶ್ಮಿಕಾ ಕಳುಹಿಸಿದ ವಿಶೇಷ ಗಿಫ್ಟ್

ರಶ್ಮಿಕಾ ಕಳುಹಿಸಿದ ವಿಶೇಷ ಗಿಫ್ಟ್

ಆಪ್ತರ ಕುಟುಂಬಕ್ಕೆ ವಿಶೇಷವಾದ ಉಡುಗೊರೆಗಳನ್ನು ಕಳುಹಿಸಿಕೊಡುವುದು ಸಾಮಾನ್ಯ. ತಮ್ಮದೆ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಅಥವಾ ವಿಶೇಷವಾದ ತಿನಿಸುಗಳನ್ನು ಗಿಫ್ಟಾಗಿ ನೀಡುತ್ತಾರೆ. ಈಗ ಅದೆ ಕೆಲಸವನ್ನು ರಶ್ಮಿಕಾ ಕೂಡ ಮಾಡಿದ್ದಾರೆ. ಲಾಕ್ ಡೌನ್ ನಲ್ಲಿ ರಶ್ಮಿಕಾ ಬೆಂಗಳೂರು ಮತ್ತು ಕೂರ್ಗ್ ನಲ್ಲಿ ಹೆಚ್ಚಾಗಿ ಸಮಯ ಕಳೆದಿದ್ದಾರೆ. ಈ ಸಮಯದಲ್ಲಿ ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಗಿಫ್ಟಾಗಿಯೂ ಕಳುಹಿಸಿಕಟ್ಟಿದ್ದಾರೆ.

ಕೂರ್ಗ್ ಗಿಂದ ಪ್ರಿನ್ಸ್ ಮನೆಗೆ ಬಂತು ಉಡುಗೊರೆ

ಕೂರ್ಗ್ ಗಿಂದ ಪ್ರಿನ್ಸ್ ಮನೆಗೆ ಬಂತು ಉಡುಗೊರೆ

ಮಹೇಶ್ ಬಾಬು ಕುಟುಂಬಕ್ಕೆ ರಶ್ಮಿಕಾ ಕೂರ್ಗ್ ನ ತಮ್ಮ ತೋಟದಲ್ಲಿ ಬೆಳೆದ ತಾಜಾ ಮಾವಿನ ಕಾಯಿಗಳನ್ನು ಮತ್ತು ಒಂದಿಷ್ಟು ರುಚಿಕರವಾದ ತಿನಿಸುಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ರಶ್ಮಿಕಾ ಮನೆಯಿಂದ ಬಂದ ಈ ವಿಶೇಷ ಗಿಫ್ಟ್ ನೋಡಿ ಮಹೇಶ್ ಬಾಬು ಕುಟುಂಬ ಫುಲ್ ಖುಷ್ ಆಗಿದ್ದಾರೆ. ಉಡುಗೊರೆಯ ಫೋಟೋ ಕ್ಲಿಕ್ಕಿಸಿ ಮಹೇಶ್ ಬಾಬು ಪತ್ನಿ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಮಹೇಶ್ ಬಾಬು ಪತ್ನಿ ಪ್ರತಿಕ್ರಿಯೆ

ಮಹೇಶ್ ಬಾಬು ಪತ್ನಿ ಪ್ರತಿಕ್ರಿಯೆ

"ಈ ಎಲ್ಲಾ ರುಚಿಕರವಾದ ತಿನಿಸುಗಳನ್ನು ಕಳುಹಿಸಿಕೊಟ್ಟ ರಶ್ಮಿಕಾಗೆ ಧನ್ಯವಾದಗಳು. ಇದೆಲ್ಲ ಕೂರ್ಗ್ ಇಂದ ಬಂದಿದೆ. ಕೊರೊನಾ ಸಮಯದಲ್ಲಿ ನಮ್ಮ ಮೊದಲ ಉಡುಗೊರೆ. ಹ್ಯಾಪಿ ಮಳೆಗಾಲ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಗಿಫ್ಟ್ ಜೊತೆ ರಶ್ಮಿಕಾ ಬರೆದಿರುವ ಒಂದು ಪತ್ರ ಕೂಡ ಇದೆ.

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ

ರಶ್ಮಿಕಾ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡುಕೊಳ್ಳುತ್ತಿರುವ ರಶ್ಮಿಕಾ ರಾಯಲಸೀಮಾ ಭಾಷೆ ಕಲಿಯುತ್ತಿದ್ದಾರಂತೆ. ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ತೆರೆಗೆ ಬರುತ್ತಿದೆ.

More from Filmibeat

English summary
Actress Rashmika Mandanna sends Delicious goodies and Handwritten note to Mahesh Babu family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X