ಇಷ್ಟು ದಿನ ಪುನೀತ್ ರಾಜ್‌ಕುಮಾರ್‌ ಮೇಲೆ ತಾತ್ಸಾರ ತೋರಿದ್ದ ರಶ್ಮಿಕಾ:ಈಗ ಫೊಟೋ ಶೇರ್ ಮಾಡಿ ತೇಪೆಹಚ್ಚಲು ಪ್ರಯತ್ನ!

ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಟ್ರೋಲ್ ಮತ್ತು ಸಿನಿಮಾ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗುತ್ತಿರುವ ನಟಿ ಅಂದರೇ ಅದು ರಶ್ಮಿಕಾ ಮಂದಣ್ಣ. ಒಂದಲ್ಲಾ ಒಂದು ವಿಚಾರಕ್ಕೆ ಪ್ರತೀ ಬಾರಿ ಸದ್ದು ಮಾಡುವ ರಶ್ಮಿಕಾ ಸಿನಿಮಾ ವಿಚಾರಕ್ಕಿಂತಲೂ ಒಂದಷ್ಟು ಕಿರಿಕ್‌ಗಳಿಂದಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ ಟ್ರೋಲ್ ಆಗುತ್ತಾರೆ.

ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಡಿ ಗ್ಲಾಮ್ ಲುಕ್‌‍ನಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲೂ ರಶ್ಮಿಕಾ ಮಂದಣ್ಣ ಸಾಕಷ್ಟು ಟ್ರೋಲ್ ಆಗಿದ್ದರು. ಕನ್ನಡ ಸರಿ ಮಾತನಾಡದ ವಿಚಾರದಿಂದ ಹಿಡಿದು, ಪುಷ್ಪ ಸಿನಿಮಾದ ಕನ್ನಡ ಅವತರಣಿಗೆಗೆ ರಶ್ಮಿಕಾ ಡಬ್ ಮಾಡದ ವಿಚಾರದವರೆಗೂ ಸಖತ್ ಸುದ್ದಿ ಯಾಗಿದ್ದರು.

ಇನ್ನು ರಶ್ಮಿಕಾ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಕಿರಿಕ್ ಪಾರ್ಟಿ ಸಿನಿಮಾದ ಮೂಲಕವೇ ಕರ್ನಾಟಕದ ಕ್ರಶ್ ಎಂದು ಹೆಸರು ಪಡೆದ ರಶ್ಮಿಕಾ ಈಗ ನ್ಯಾಷನಲ್ ಕ್ರಷ್ ಆಗಿ ಬೆಳೆದಿದ್ದಾರೆ. ಆದರೇ ಕನ್ನಡದ ಬೇರನ್ನೆ ಮರೆತು ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಅನ್ನುವ ವಿಚಾರಕ್ಕು ಪದೇ ಪದೇ ಸುದ್ದಿ ಯಾಗ್ತಾರೆ ಈ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಕಡೆಗೂ ಸಾಕಷ್ಟು ವರ್ಷಗಳ ನಂತರ ರಶ್ಮಿಕಾ ಕನ್ನಡಿಗರಿಗೆ ಖುಷಿ ನೀಡುವ ವಿಚಾರವೊಂದನ್ನು ಶೇರ್ ಮಾಡಿದ್ದಾರೆ ಅದೇನೂ ಅಂತ ಮುಂದೆ ನೋಡಿ.

ಪುನೀತ್ ವಿಚಾರದಲ್ಲಿ ರಶ್ಮಿಕಾ ಈಗ ಮಾಡಿರೋದು ಏನು?

ಪುನೀತ್ ವಿಚಾರದಲ್ಲಿ ರಶ್ಮಿಕಾ ಈಗ ಮಾಡಿರೋದು ಏನು?

ರಶ್ಮಿಕಾ ಮಂದಣ್ಣ ಯೋಚನೆಗಳು, ಮಾಡುವ ಕೆಲಸಗಳು ಯಾವ ಮನಸ್ಥಿತಿಯ ಮೇಲೆ ಅಡಗಿರುತ್ತೆ ಅಂತ ಗೊತ್ತಾಗೊದು ಸ್ವಲ್ಪ ಕಷ್ಟನೇ ಸರಿ. ಯಾಕೆಂದರೆ ಈಗ ರಶ್ಮಿಕಾ ಮಂದಣ್ಣ ಮಾಡಿರೋದನ್ನು ನೋಡಿದರೆ ಹಾಗೆ ಅನಿಸುತ್ತಿದೆ. ನೀವೆಲ್ಲ ಗಮನಿಸಿರ ಬಹುದು ಅಕ್ಟೋಬರ್ 29ರಂದು ಕರ್ನಾಟಕದ ಯುವರತ್ನ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಈಡಿ ಜಗತ್ತೇ ಶೂನ್ಯವಾಗಿತ್ತು. ಪುನೀತ್ ನಮ್ಮನ್ನೆಲ್ಲ ಅಗಲಿದ ದಿನದಿಂದ ಇಲ್ಲಿಯವರೆಗೂ ಸಿನಿಮಾ ಇಂಡಸ್ಟ್ರಿ ಆಗಿರಬಹುದು , ಅಭಿಮಾನಿಗಳು, ಕುಟುಂಬ ಸದಸ್ಯರು ಈಗಲೂ ನೆನೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೇ ಇಲ್ಲಿಯ ವರೆಗೂ ಪುನೀತ್ ಬಗ್ಗೆ ಒಂದೇ ಒಂದೇ ತುಣುಕು, ಫೋಟೊವನ್ನು ಶೇರ್ ಮಾಡಿ ಸಂತಾಪ ಸೂಚಿಸದ ರಶ್ಮಿಕಾಗೆ ಈಗ ಅದೆಲ್ಲಿಂದಲೋ ಜ್ಞಾನೋದಯ ಆದಂತೆ ಕಂಡು ಬರುತ್ತಿದೆ.

ನಿಧನರಾಗಿ ತಿಂಗಳಾದ ಬಳಿಕ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಪುಗೆ ಜಾಗ

ನಿಧನರಾಗಿ ತಿಂಗಳಾದ ಬಳಿಕ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಪುಗೆ ಜಾಗ

ಹೌದು. ಪುನೀತ್ ನಮ್ಮನ್ನೆಲ್ಲ ಅಗಲಿ ತಿಂಗಳುಗಳು ಕಳೆದಿವೆ. ಜನರು ಇನ್ನು ಕೂಡ ಆ ನೋವಿನಲ್ಲೆ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಬೇರೆ ಬೇರೆ ಚಿತ್ರರಂಗದ ಅದೆಷ್ಟೋ ಹಿರಿಯ, ಕಿರಿಯ ಚಿತ್ರ ನಟ ನಟಿಯರು ಪುನೀತ್‌ ಅಂತಿಮ ದರ್ಶನ ಪಡೆದಿದ್ದು ಅಲ್ಲದೇ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದಾರೆ. ಕೆಲವರಂತು ಅಪ್ಪು ಫೊಟೋವನ್ನೆ ಡಿಪಿ ಯಾಗಿ ಬಳಸಿಕೊಂಡಿದ್ದಾರೆ. ಆದರೇ ಇಷ್ಟು ದಿನ ಏನೂ ಆಗಲೇ ಇಲ್ಲ ಎಂಬತೇ ಇದ್ದ ರಶ್ಮಿಕಾ ಮಂದಣ್ಣಗೆ ಪುನೀತ್ ನೆನಪು ಈಗ ಆಗಿದೆ ಅನ್ನಿಸುತ್ತೆ. ಅದಕ್ಕೆ ಕಾರಣ ಪುನೀತ್ ಫೋಟೋ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿರೋದು.

ಅಂಜನಿ ಪುತ್ರ ಚಿತ್ರದ ತುಣುಕು ಶೇರ್ ಮಾಡಿದ ರಶ್ಮಿಕಾ

ಅಂಜನಿ ಪುತ್ರ ಚಿತ್ರದ ತುಣುಕು ಶೇರ್ ಮಾಡಿದ ರಶ್ಮಿಕಾ

ಪುನೀತ್‌ ರಾಜ್‌ಕುಮಾರ್ ಜೊತೆ ಅಂಜನಿಪುತ್ರ ಚಿತ್ರದಲ್ಲಿ ನಟಿಸಿದರು ರಶ್ಮಿಕಾ ಇಲ್ಲಿವರೆಗೂ ಒಂದೇ ಒಂದು ಫೊಟೋ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರಲ್ಲಿಲ್ಲ. ಕಡೆ ಪಕ್ಷ ಪುನೀತ್‌ರಾಜ್‌ಕುಮಾರ್‌ಗೆ ನಮನವನ್ನು ಸಲ್ಲಿಸಿರಲಿಲ್ಲಾ. ಇದೇ ಕಾರಣಕ್ಕೆ ಕನ್ನಡಿಗರು ಹಲವು ಸಂದರ್ಭದಲ್ಲಿ ಪ್ರಶ್ನೆ ಮಾಡಿದರೂ ಕೂಡ ತಲೆಕೆಡಿಸಿಕೊಂಡಿರದ ರಶ್ಮಿಕಾಗೆ ಇವತ್ತು ಅದೆಲ್ಲಿಂದ ಮನಸ್ಸು ಬಂತೋ ಏನೋ, ದಿಡೀರ್ ಅಂತ ಅಂಜನಿಪುತ್ರ ಚಿತ್ರದ ಶೂಟಿಂಗ್ ಸ್ಟಿಲ್ ಆಗಿರುವ ಪುನೀತ್ ರಶ್ಮಿಕಾ ಅವರನ್ನು ಅಪ್ಪಿಕೊಂಡಿರುವ ಫೊಟೋವನ್ನು ಶೇರ್ ಮಾಡಿರೋದು ಅಲ್ಲದೇ ಅದಕ್ಕೊಂದು ಬಿಳಿ ಬಣ್ಣದ ಹಾರ್ಟ್ ಸಿಂಬಲ್ ಕೂಡ ಹಾಕಿಕೊಂಡಿದ್ದಾರೆ.

ಕಡೆಗೂ ಪುನೀತ್ ಮೇಲಿನ ಪ್ರೀತಿಯನ್ನು ಶೇರ್ ಮಾಡಿಕೊಂಡ ರಶ್ಮಿಕಾ

ಕಡೆಗೂ ಪುನೀತ್ ಮೇಲಿನ ಪ್ರೀತಿಯನ್ನು ಶೇರ್ ಮಾಡಿಕೊಂಡ ರಶ್ಮಿಕಾ

ರಶ್ಮಿಕಾ ಮಂದಣ್ಣ ಹೀಗೆ ತನ್ನಿಷ್ಟಕ್ಕೆ ತಾನು ಏನೋ ಮಾಡಿಕೊಂಡು, ಟ್ರೋಲ್‌ಗಳನ್ನು ಲೆಕ್ಕಿಸದೇ, ತನ್ನ ಬಗ್ಗೆ ಆಗುವ ಟೀಕೆಗಳನ್ನು ಕೇರ್ ಮಾಡದೇ ಇರುವ ಒಬ್ಬ ನಟಿ. ತನ್ನ ಸಿನಿಮಾ ಆಯ್ತು, ತಾನಾಯ್ತು ಅಂತಲೇ ದಿನಕಳೆಯುವ ರಶ್ಮಿಕಾ ಸದ್ಯ ಕನ್ನಡ ಒಂದನ್ನು ಬಿಟ್ಟು ಬೇರೆಲ್ಲಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಿಂದಲೇ ಬೆಳೆದು, ಕನ್ನಡ ಮಣ್ಣಲ್ಲೆ ಹುಟ್ಟಿರುವ ರಶ್ಮಿಕಾ ಮಾತ್ರ ಕನ್ನಡ ಅಂತ ಬಂದ್ರೆ ಮೂಗು ಮುರಿಯೋ ರೀತಿ ವರ್ತಿಸುತ್ತಿದ್ದಾರೆ. ಪುನೀತ್ ವಿಚಾರದಲ್ಲೂ ಹೀಗೆ ಮಾಡಿದ್ದ ರಶ್ಮಿಕಾ ಸದ್ಯ ಕೊನೆಗೂ ಒಂದಾದರೂ ಫೊಟೋ ಶೇರ್ ಮಾಡಿರೊದು ಖುಷಿಯ ವಿಚಾರ.

More from Filmibeat

English summary
Rashmika Mandanna shared puneeth rajkumar photo on her social media for the first time ofter his death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X