ಅಮ್ಮ ಸೆರೆಹಿಡಿದ ಅಪರೂಪದ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಹೆಸರು. ರಶ್ಮಿಕಾ ಏನೆ ಮಾಡಿದರು ದೊಡ್ಡ ಸುದ್ದಿಯಾಗುತ್ತೆ. ಸಿನಿಮಾಗಳ ಜೊತೆಗೆ ವಿವಾದಗಳನ್ನೆ ಹೆಚ್ಚು ಮೈ ಮೇಲೆ ಎಳೆದುಕೊಳ್ಳುವ ನಟಿ ರಶ್ಮಿಕಾ. ಸದಾ ಕಿರಿಕ್ ಮಾಡಿಕೊಳ್ಳುವ ಮೂಲಕ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿರುವ ರಶ್ಮಿಕಾ ಈಗ ವಿಶೇಷವಾದ ಫೊಟೋವೊಂದನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾರನ್ನು ತೆಗಳುವವರು ಎಷ್ಟು ಮಂದಿ ಇದ್ದಾರೋ ಇಷ್ಟಪಡುವವರು ಅಷ್ಟೆ ಮಂದಿ ಇದ್ದಾರೆ. ಸಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಾಕಿದರೆ ಸಾಕು ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತೆ. ಜೊತೆಗೆ ರಶ್ಮಿಕಾರನ್ನು ಕಾಲೆಳೆಯುವವರ ಸಂಖ್ಯೆಯು ಅಷ್ಟೆ ಇದ್ದಾರೆ. ಆದ್ರೀಗ ರಶ್ಮಿಕಾ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಮ್ಮ ಕ್ಲಿಕ್ಕಿಸಿದ ಫೋಟೋ
ರಶ್ಮಿಕಾ ಮಂದಣ್ಣ ಮತ್ತು ಸಹೋದರಿ ಶಿಮಾನ್ ಮಂದಣ್ಣ ಒಟ್ಟಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇಬ್ಬರು ಬಿಳಿ ಬಣ್ಣದ ಕಾಸ್ಟ್ಯೂಮ್ ಧರಿಸಿ ಬೀಚ್ ನಲ್ಲಿ ಆಟವಾಡುತ್ತಿರುವ ಫೋಟೋವನ್ನು ರಶ್ಮಿಕಾ ತಾಯಿ ಸುಮನ್ ಮಂದಣ್ಣ ಸೆರೆಹಿಡಿದಿದ್ದಾರೆ. ಬ್ಲ್ಯಾಕ್ ಅಂಡ್ ವೈಟ್ ಡ್ರೆಸ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮತ್ತು ಸಹೋದರಿಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಪರೂಪದ ಫೋಟೋದಲ್ಲಿ ಶಿಮಾನ್ ಮಂದಣ್ಣ
ರಶ್ಮಿಕಾಗೆ ಒಬ್ಬಳು ಪುಟ್ಟ ಸಹೋದರಿ ಇದ್ದಾರೆ. ಆಕೆಯ ಹೆಸರು ಶಿಮಾನ್ ಮಂದಣ್ಣ. ರಶ್ಮಿಕಾ ಸಹೋದರಿ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ತೀರ ಅಪರೂಪ. ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ತಂಗಿಯ ಜೊತೆ ಆಟವಾಡುತ್ತಿರುವ ಫೊಟೋವನ್ನು ಶೇರ್ ಮಾಡಿ "ನಾನು ನನ್ನ ಸಹೋದರಿ ಇಬ್ಬರು ಒಂದೆ ಕಾಸ್ಟ್ಯೂಮ್ ಧರಿಸಿದಾಗ, ಅಮ್ಮ ಸೆರೆಹಿಡಿದಿರುವ ಫೋಟೋ" ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ ರಶ್ಮಿಕಾ.

ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ
ರಶ್ಮಿಕಾ ಸದ್ಯ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು ಮತ್ತು ನಿತಿನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲು ಮಿಂಚುತ್ತಿರುವ ರಶ್ಮಿಕಾ ನಟ ಕಾರ್ತಿ ಜೊತೆ ಸುಲ್ತಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ತಮಿಳು ಚಿತ್ರರಂಗದಲ್ಲು ಮಿಂಚಲು ಸಜ್ಜಾಗಿದ್ದಾರೆ.

ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಕಿರಿಕ್ ಬೆಡಗಿ ಈಗ ಬಾಲಿವುಡ್ ಗೆ ಹಾರಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಾಲಿವುಡ್ ನಟ ಶಾಹಿದ್ ಕಪೂರ್ ಜೊತೆ ರಶ್ಮಿಕಾ ತೆರೆಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಟ ನಾನಿ ಅಭಿನಯದ ಜರ್ಸಿ ಚಿತ್ರದ ರಿಮೇಕ್ ನಲ್ಲಿ ಶಾಹಿದ್ ಕಪೂರ್ ಬಣ್ಣ ಹಚ್ಚುತ್ತಿದ್ದಾರೆ. ಆ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.


Click it and Unblock the Notifications











