Rashmika Mandanna: ಈ ಚಿತ್ರ ನಿಮಗೆ ಇಷ್ಟವಾಗದೇ ಇರಬಹುದು ಎಂದ ರಶ್ಮಿಕಾ, ಯಾಕೆ ನೋಡಿ!
ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ನಟನೆ ಮೂಲಕ ಉತ್ತುಂಗದಲ್ಲಿ ಇರುವ ನಟಿ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಸಾಕಷ್ಟು ಬ್ಯುಸಿಯಾಗಿರುವ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಹೆಸರು ಜಾಗತಿಕ ಮಟ್ಟದಲ್ಲಿ ಹೆಚ್ಚು ಹೆಸರುವಾಸಿ ಯಾಗಿದೆ. ಹೀಗಾಗಿ ರಶ್ಮಿಕಾ ಮಂದಣ್ಣ ಸಿನಿಮಾ ನಟನೆ ಜೊತೆ ಜೊತೆಗೆ ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆಯುತ್ತಿದ್ದಾರೆ.
ರಶ್ಮಿಕಾ ಹೆಸರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಹಿನ್ನೆಲೆ ರಶ್ಮಿಕಾ ಅವರನ್ನು ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್ ಗಳು , ದೊಡ್ಡ ದೊಡ್ಡ ಕಂಪೆನಿಗಳು ರಶ್ಮಿಕಾ ಹೆಸರನ್ನು ಬಳಸಿಕೊಂಡು ತಮ್ಮ ಬ್ರ್ಯಾಂಡ ಅನ್ನು ವೃದ್ಧಿ ಪಡಿಸಲು ಮುಂದಾಗಿವೆ. ಇನ್ನು ರಶ್ಮಿಕಾ ಮಂದಣ್ಣ ತನ್ನ ಫಿಟ್‌ನೆಸ್ ಕಾಯ್ದುಕೊಳ್ಳವಲ್ಲಿ ಎತ್ತಿದ ಕೈ. ಸದಾ ಜಿಮ್‌ನಲ್ಲಿ ಕಸರತ್ತು ಮಾಡುವ ರಶ್ಮಿಕಾ ಹೆಲ್ದಿ ಲೈಫ್ ಸ್ಟೈಲ್ ಲೀಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕೂಡ ಫಿಟ್ ನೆಸ್ ರಿಲೇಟೆಡ್ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.
ಈ ಫೋಟೊದಲ್ಲಿ ಹೀಗೆ ಬರೆದುಕೊಂಡಿರುವ ರಶ್ಮಿಕಾ "ಈ ಫೋಟೋವನ್ನು ನಾನು ಪೋಸ್ಟ್ ಮಾಡಬಹುದೋ ಇಲ್ಲವೋ ಗೊತ್ತಿಲ್ಲ. ನಿಮ್ಮಲ್ಲಿ ತುಂಬ ಜನರು ಇದನ್ನು ಇಷ್ಟಪಡುವುದಿಲ್ಲ. ನಿರಂತರ ಪ್ರಯತ್ನವೇ ನಿಮ್ಮ ಫಿಟ್ನೆಸ್ ಗೋಲ್ಗೆ ತುಂಬ ಮುಖ್ಯವಾದ ಅಂಶ. ವರ್ಕೌಟ್, ಡಯೆಟ್, ಆಲೋಚನೆಗಳು ಮತ್ತು ಜರ್ನಿ ನಿರಂತರವಾಗಿ ಇರಲಿ ಹಾಗೂ ಅದನ್ನು ಎಂಜಾಯ್ ಮಾಡಿ. ಸ್ವಲ್ಪ ಸಮಯದವರೆಗೆ ಅದು ಖುಷಿ ನೀಡದೇ ಇರಬಹುದು. ಆದರೆ ಅಭ್ಯಾಸವಾದ ಬಳಿಕ ನಿಮಗೆ ಅರ್ಥವಾಗುತ್ತದೆ" ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮುಂಬೈ ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಕ್ಯಾಮರಾ ಮುಂದೆ ಸೆರೆ ಸಿಕ್ಕಿದ್ದರು. ಈ ವೇಳೆ 'ಪುಷ್ಪ' ಸಿಗ್ನೇಚರ್ ಸ್ಟೈಲ್ ಮಾಡಿ ಅಂತ ಓರ್ವ ಕ್ಯಾಮರಾಮ್ಯಾನ್ ಕೇಳಿಕೊಂಡರು. ಕೂಡಲೆ ರಶ್ಮಿಕಾ ಮಂದಣ್ಣ ಸಿಗ್ನೇಚರ್ ಸ್ಟೈಲ್ ಮಾಡಿ ತೋರಿಸಿದರು. ಅಂದ್ಹಾಗೆ, 'ಪುಷ್ಪ 2' ಸಿನಿಮಾದ ಚಿತ್ರೀಕರಣದಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಬಿಜಿಯಾಗಿದ್ದಾರೆ. ಇದೇ ವರ್ಷ 'ಪುಷ್ಪ: ದಿ ರೂಲ್' ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











