Rashmika Mandanna Workout Video : ಬೇಜಾನ್ ವೈರಲ್ ಆಗ್ತಿದೆ ರಶ್ಮಿಕಾ ಮಂದಣ್ಣರ ಈ ವರ್ಕ್‌ಔಟ್ ವಿಡಿಯೋ!
ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ನಾಲ್ಕು ಭಾಷೆಯಲ್ಲಿ ಉತ್ತುಂಗುದಲ್ಲಿರುವ ನಟಿ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಸಾಕಷ್ಟು ಬ್ಯುಸಿಯಾಗಿರುವ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಹೆಸರು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ತನ್ನ ಫಿಟ್‌ನೆಸ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ಸದಾ ಜಿಮ್‌ನಲ್ಲಿ ಕಸರತ್ತು ಮಾಡುವ ರಶ್ಮಿಕಾ ಆರೋಗ್ಯಕರ ಲೈಫ್ ಸ್ಟೈಲ್ ಲೀಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕೂಡ ಫಿಟ್ ನೆಸ್ ರಿಲೇಟೆಡ್ ವೀಡಿಯೊ ಒಂದನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ರಶ್ಮಿಕಾ ಫಿಟ್‌ನೆಸ್‌ಗಾಗಿ ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ.

ದಿನದಿಂದ ದಿನಕ್ಕೆ ರಶ್ಮಿಕಾ ಮಿಂಚಿಂಗ್
'ಪುಷ್ಪ' ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ. ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಈಗ ಕೇವಲ ಬಹುಭಾಷಾ ನಟಿ ಮಾತ್ರವೇ ಅಲ್ಲದೇ ಬಹುಬೇಡಿಕೆಯ ನಟಿ ಕೂಡ ಹೌದು. ರಶ್ಮಿಕಾ ಮಂದಣ್ಣ ಎಲ್ಲೇ ಇದ್ದರೂ ಸುದ್ದಿಯಾಗುತ್ತಾರೆ. ಹಾಗೇ ಅವರ ಸೌಂದರ್ಯ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಶ್ಮಿಕಾ ಸಿನಿಮಾ ವಿಷಯಗಳಿಗೆ ಮಾತ್ರವೇ ಅಲ್ಲದೆ ಅವರ ವೈಯಕ್ತಿಕ ಜೀವನದ ಕುರಿತಾಗಿಯೂ ಸಹಾ ಸುದ್ದಿ ಆಗುವುದುಂಟು.
ರಶ್ಮಿಕಾ ಫಿಟ್ನೆಸ್ ಹೇಗಿರುತ್ತೆ?
ರಶ್ಮಿಕಾ ಫಿಟ್ನೆಸ್‌ಗೆ ಮೊದಲ ಆದ್ಯತೆ ನೀಡುತ್ತಾರೆ. ಅವರ ಫಿಟ್ನೆಸ್ ಕುರಿತಾಗಿ ಆಗಾಗ ಚರ್ಚೆಗಳು ನಡೆಯುತ್ತವೆ. ರಶ್ಮಿಕಾ ಫಿಟ್ನೆಸ್‌ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎನ್ನುವುದನ್ನು ತೋರಿಸುವ ಹೊಸದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಿಮ್‌ನಲ್ಲಿ ರಶ್ಮಿಕಾ ವರ್ಕೌಟ್ ಮಾಡುತ್ತಿರುವ ವಿಡಿಯೋ ಫ್ಯಾನ್ಸ್‌ಗೆ ಅಚ್ಚರಿಯನ್ನು ಮೂಡಿಸಿದೆ.

ರಶ್ಮಿಕಾ ವರ್ಕ್‌ಔಟ್ ವಿಡಿಯೋ ವೈರಲ್
ಜಿಮ್‌ನಲ್ಲಿ ರಶ್ಮಿಕಾ ನಡೆಸುತ್ತಿರುವ ಕಸರತ್ತಿನ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಶೇರ್ ಮಾಡಿಕೊಂಡಿದ್ದರು ರಶ್ಮಿಕಾ ಶೇರ್ ಮಾಡಿದ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷಿ ಯಾಗಿದ್ದಾರೆ. ಇನ್ನು ರಶ್ಮಿಕಾ ತಮ್ಮ ಯಾವ ಹೊಸ ಸಿನಿಮಾಕ್ಕಾಗಿ ಎಷ್ಟೆಲ್ಲಾ ಶ್ರಮ ಪಡುತ್ತಿದ್ದಾರೆ ಎನ್ನುವುದು ಮಾತ್ರ ತಿಳಿದಿಲ್ಲ. ರಶ್ಮಿಕಾ ಶೇರ್ ಮಾಡಿಕೊಂಡಿರುವ ಕೆಲವೇ ಸೆಕೆಂಡುಗಳ ವಿಡಿಯೋದಲ್ಲಿ ವಿವಿಧ ಬಗೆಯ ವರ್ಕ್‌ಔಟ್ ಅನ್ನು ಮಾಡಿದ್ದಾರೆ.

ಸಾವಿರಕ್ಕಿಂತಲೂ ಅಧಿಕ ಜನರಿಂದ ಕಾಮೆಂಟ್
ವಿಡಿಯೋ ಶೇರ್ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ವೀಡಿಯೊ ವೀವ್ಸ್ ಕಂಡಿದೆ. ಆರು ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್‌ಗಳನ್ನು ಮಾಡುವ ಮೂಲಕ ರಶ್ಮಿಕಾ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ವಿಡಿಯೋ ಶೇರ್ ಮಾಡಿಕೊಂಡ ರಶ್ಮಿಕಾ, ನಿಮಗೆ ಈ ವರ್ಕೌಟ್ ಇಷ್ಟವಾದರೆ ಬೈಸೆಪ್ಸ್ ಇಮೋಜಿ ಮೂಲಕ ಕಾಮೆಂಟ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಅವರು ಹೇಳಿದಂತೆ ಅಭಿಮಾನಿಗಳು ಕೂಡ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











