For Quick Alerts
  ALLOW NOTIFICATIONS  
  For Daily Alerts

  ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು

  |

  ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಹಿಜಾಬ್ ವಿಚಾರ ರಾಷ್ಟ್ರ ಮಟ್ಟದಲ್ಲೂ ಸಖತ್ ಸುದ್ದಿಯಾಗಿತ್ತು. ಕಳೆದ ಕೆಲ ತಿಂಗಳ ಹಿಂದೆ ಹಿಜಾಬ್ ಕುರಿತಾದ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಪರ ವಿರೋಧದ ಚರ್ಚೆಗಳಿಗೆ ಕಾರಣವಾಗಿತ್ತು. ಆದರೆ, ಈವರೆಗೂ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

  ಈಗ ಪ್ರಸ್ತುತ ಹಿಜಾಬ್ ವಿವಾದದ ಬೆನ್ನಲ್ಲೇ ಹಲವು ಸಿನಿಮಾಗಳಲ್ಲಿ ನಟಿಯರು ಹಿಜಾಬ್ ಧರಿಸಿ ಪಾತ್ರ ಮಾಡುತ್ತಿರುವುದು ಹೆಚ್ಚಾಗಿದೆ. ಅದರಲ್ಲೂ ಸ್ಟಾರ್ ನಟಿಯರೇ ಹಿಜಾಬ್ ಧರಿಸಿ ನಟಿಸುತ್ತಿದ್ದಾರೆ. ಈಗಿನ ಪ್ರಸ್ತುತ ಸನ್ನಿವೇಶಕ್ಕೆ ಈ ಪಾತ್ರಗಳು ಹೆಚ್ಚಿನ ಪ್ರಾಮುಖ್ಯತೆ ವಹಿಸಬಹುದು ಎಂಬ ಯೋಚನೆಯಿಂದ ಹಲವು ನಟಿಯರು ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಅದ್ಧೂರಿಯಾಗಿ ನಡೆದ ನಿಕ್ಕಿ-ಆದಿ ಅರತಕ್ಷತೆ: ಪೋಟೋಗಳು ವೈರಲ್ಅದ್ಧೂರಿಯಾಗಿ ನಡೆದ ನಿಕ್ಕಿ-ಆದಿ ಅರತಕ್ಷತೆ: ಪೋಟೋಗಳು ವೈರಲ್

  ಕನ್ನಡದ ಕೆಲವು ನಟಿಯರು ಕೂಡ ಮುಸ್ಲಿಂ ಮಹಿಳೆಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ಟ್ರೇಡಿಂಗ್ ಟಾಪಿಕ್ ಆಗಿರುವ ಹಿಜಾಬ್‌ನನ್ನೇ ಸಿನಿಮಾ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ, ಕೆಲವರು ಪ್ರಸ್ತುತ ವಿವಾದಕ್ಕೆ ಈ ಪಾತ್ರಗಳ ಮೂಲಕ ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಅಷ್ಟೇ ಅಂತ ವಾದಿಸಲಾಗುತ್ತಿದೆ. ಒಟ್ಟಿನಲ್ಲಿ ಸ್ಟಾರ್ ನಟಿಯರು ಹಿಜಾಬ್ ಧರಿಸಿ ಪಾತ್ರ ನಿರ್ವಹಿಸುತ್ತಿರುವುದು ಕುತೂಹಲ ಮೂಡಿಸುತ್ತಿದೆ. ಯಾವ ಯಾವ ನಟಿಯರು ಹಿಜಾಬ್ ಧರಿಸಿ ನಟಿಸಿದ್ದಾರೆ ಎಂಬ ವಿವರ ಇಲ್ಲಿದೆ.

  Recommended Video

  KGF2 ಸಿನಿಮಾದ ದಾಖಲೆಗಳನ್ನೆಲ್ಲ ಹಿಂದಿಕ್ಕಲಿದ್ಯ ದರ್ಶನ್ ಸಿನಿಮಾ | Rajendra Singh Babu
   ರಶ್ಮಿಕಾ ಹಿಜಾಬ್ ಧರಿಸಿದ್ದ ಪೋಸ್ಟರ್ ವೈರಲ್

  ರಶ್ಮಿಕಾ ಹಿಜಾಬ್ ಧರಿಸಿದ್ದ ಪೋಸ್ಟರ್ ವೈರಲ್

  ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಏಪ್ರಿಲ್ 5 ರಂದು ರಶ್ಮಿಕಾ ಹುಟ್ಟುಹಬ್ಬದ ಪ್ರಯುಕ್ತ 'ಸೀತಾ ರಾಮ್' ಸಿನಿಮಾದ ಹೊಸದೊಂದು ಪೋಸ್ಟರ್‌ ರಿಲೀಸ್ ಮಾಡಲಾಗಿತ್ತು. ಈ ಚಿತ್ರದಲ್ಲಿ ರಶ್ಮಿಕಾ, ಆಫ್ರೀನ್ ಎಂಬ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಹಿಜಾಬ್ ಧರಿಸಿರುವ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಮಾಡುವ ಮೂಲಕ ಸಿನಿಮಾ ತಂಡ ಪ್ರೇಕ್ಷಕರಿಗೆ ಸಿನಿಮಾ ಮೇಲೆ ಕುತೂಹಲ ಮೂಡಿಸಿತ್ತು. ಇದೇ ಮೊದಲ ಬಾರಿಗೆ ರಶ್ಮಿಕಾ ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆ ಪಾತ್ರ ಮಾಡುತ್ತಿದ್ದು, ಸಿನಿಮಾದಲ್ಲಿ ರಶ್ಮಿಕಾ ನಟನೆ ಹೇಗೆ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

  ಐಶ್ವರ್ಯಾ ರೈ ಪಡೆದ ಮೊದಲ ಸಂಬಳ ಎಷ್ಟು?ಐಶ್ವರ್ಯಾ ರೈ ಪಡೆದ ಮೊದಲ ಸಂಬಳ ಎಷ್ಟು?

   'ಸಾರಾ ವಜ್ರ' ಚಿತ್ರದಲ್ಲಿ ಹಿಜಾಬ್ ಧರಿಸಿದ ಅನು ಪ್ರಭಾಕರ್

  'ಸಾರಾ ವಜ್ರ' ಚಿತ್ರದಲ್ಲಿ ಹಿಜಾಬ್ ಧರಿಸಿದ ಅನು ಪ್ರಭಾಕರ್

  ಪ್ರಸ್ತುತ ಹಿಜಾಬ್ ವಿವಾದದ ನಡುವೆಯೇ ಸಿನಿಮಾದಲ್ಲೂ ಇದೇ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹಲವರು ಮುಂದಾಗಿದ್ದಾರೆ. ಅದರಲ್ಲಿ ನಟಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ ಸಿನಿಮ 'ಸಾರಾ ವಜ್ರ' ಕೂಡ ಮುಸ್ಲಿಂ ಮಹಿಳೆಯ ಜೀವನ ಅನಾವರಣ ಮಾಡುವ ಚಿತ್ರವಾಗಿದೆ. ಈ ಚಿತ್ರದಲ್ಲಿ ನಟಿ ಅನುಪ್ರಭಾಕರ್ ಮೊದಲ ಬಾರಿಗೆ ಆಫೀಸಾ ಎಂಬ ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದಾರೆ. ಈ ಚಿತ್ರ ಈಗಾಗಲೇ ರಿಲೀಸ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ.

   ಹೊಸ ಸಿನಿಮಾದಲ್ಲಿ ಮುಸ್ಲಿಂ ಮಹಿಳೆ ಪಾತ್ರದಲ್ಲಿ ಶ್ರುತಿ

  ಹೊಸ ಸಿನಿಮಾದಲ್ಲಿ ಮುಸ್ಲಿಂ ಮಹಿಳೆ ಪಾತ್ರದಲ್ಲಿ ಶ್ರುತಿ

  ಇತ್ತೀಚಿಗಷ್ಟೇ ನಟಿ ಶ್ರುತಿ ಅಭಿನಯಿಸುತ್ತಿರುವ 'ನಂಬರ್ 13' ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿ ಶ್ರುತಿ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಾಯಿರಾಬಾನುವಾಗಿ ಕಾಣಿಸಿಕೊಳ್ಳುವ ಮೂಲಕ ಮುಸ್ಲಿಂ ಮಹಿಳೆಯ ಜೀವನದ ಬಗ್ಗೆ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಹಿಜಾಬ್‌ ಅನ್ನೇ ಚಿತ್ರೋತ್ಯದ್ಯಮದ ಲಾಭವಾಗಿ ಬಳಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ.

  <br />ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಗಣಪನ ದರ್ಶನ ಪಡೆದ ರಶ್ಮಿಕಾ ಮಂದಣ್ಣ!
  ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಗಣಪನ ದರ್ಶನ ಪಡೆದ ರಶ್ಮಿಕಾ ಮಂದಣ್ಣ!

   ಹಿಜಾಬ್ ತೊಟ್ಟ ಆದಿತಿ

  ಹಿಜಾಬ್ ತೊಟ್ಟ ಆದಿತಿ

  ಕನ್ನಡದ ಬೇಡಿಕೆ ನಟಿಯಾಗಿರುವ ನಟಿ ಆದಿತಿ ಪ್ರಭುದೇವ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾದಲ್ಲಿ ಮೊದಲ ಬಾರಿಗೆ ಆದಿತಿ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ , ಹಾಡು, ಟ್ರೈಲರ್ ಮೂಲಕ ಜನರ ಗಮನ ಸೆಳೆದಿದ್ದು, ಸಿನಿಮಾ ರಿಲೀಸ್‌ ಆಗುವುದೊಂದೆ ಬಾಕಿ ಉಳಿದಿದೆ.

  English summary
  Rashmika Mandanna, Shruti, Anu Prabhakar, Indian Star Actors who Wear Hijab
  Thursday, May 26, 2022, 10:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X