ಪುನೀತ್, ದರ್ಶನ್, ಸುದೀಪ್ ಬಗ್ಗೆ ನಟಿ ರಶ್ಮಿಕಾ 'ಹೀಗೆ' ಹೇಳಿದರು.!

By Harshitha

Recommended Video

ಫ್ಯಾನ್ಸ್ ಕೇಳಿದ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ..! Filmibeat Kannada

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿಯೂ ಸಿಕ್ಕಾಪಟ್ಟೆ ಫೇಮಸ್.

'ಚಲೋ' ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ತೆಲುಗು ಸಿನಿ ಅಂಗಳದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ರಶ್ಮಿಕಾ ಮಂದಣ್ಣಗೆ ಅಲ್ಲೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಟಾಲಿವುಡ್ ನಲ್ಲಿಯೂ ಬಹು ಬೇಡಿಕೆ ಕಂಡುಕೊಂಡಿರುವ ರಶ್ಮಿಕಾಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳಿಗೇನೂ ಕೊರತೆ ಇಲ್ಲ. ಅಭಿಮಾನಿಗಳ ಮೆಚ್ಚಿನ 'ಸಾನ್ವಿ'ಯನ್ನ ಸ್ಟಾರ್ ನಟರ ಜೊತೆಗೆ ಬೆಳ್ಳಿತೆರೆ ಮೇಲೆ ನೋಡಬೇಕು ಅನ್ನೋದು ಕನ್ನಡ ಸಿನಿಪ್ರಿಯರ ಬಯಕೆ.

ಇದಕ್ಕೆ ನೋಡಿ, ನಿನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಫೇಸ್ ಬುಕ್ ಲೈವ್ ಗೆ ಬಂದಿದ್ದಾಗ, ''ಸುದೀಪ್ ಜೊತೆ ನಟಿಸಿ, ಪುನೀತ್ ಜೊತೆ ಇನ್ನೊಂದು ಸಿನಿಮಾ ಮಾಡಿ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿ ಬಂದವು.

ಅಷ್ಟಕ್ಕೂ, ಫೇಸ್ ಬುಕ್ ಲೈವ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಏನು ಹೇಳಿದರು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಸುದೀಪ್ ಜೊತೆ ನಟಿಸ್ತಾರಾ.?

ಸುದೀಪ್ ಜೊತೆ ನಟಿಸ್ತಾರಾ.?

''ನಿಮಗೆ ಸುದೀಪ್ ಜೊತೆ ನಟಿಸುವುದು ಇಷ್ಟನಾ.?'' ಅಂತ ಅಭಿಮಾನಿಯೊಬ್ಬರು ಫೇಸ್ ಬುಕ್ ಲೈವ್ ನಲ್ಲಿ ರಶ್ಮಿಕಾ ಮಂದಣ್ಣ ರನ್ನ ಕೇಳಿದರು. ಅದಕ್ಕೆ ಆಕೆ ಕೊಟ್ಟ ಉತ್ತರ - ''ಖಂಡಿತ ಇಷ್ಟ. ಆದಷ್ಟು ಬೇಗ ಅಂತಹ ಅವಕಾಶ ಸಿಗಲಿ ಎನ್ನುವುದು ನನ್ನ ಬಯಕೆ''

ದರ್ಶನ್ ಬಗ್ಗೆ ಹೇಳಿದ್ದೇನು.?

ದರ್ಶನ್ ಬಗ್ಗೆ ಹೇಳಿದ್ದೇನು.?

''ಡಿ-ಬಾಸ್ ದರ್ಶನ್ ಬಗ್ಗೆ ಏನಾದರೂ ಹೇಳಿ..'' ಎಂದು ಓರ್ವ ಫ್ಯಾನ್ ಕೇಳಿದಕ್ಕೆ, ''He is amazing human being'' ಅಂತ ಉತ್ತರಿಸಿದರು ನಟಿ ರಶ್ಮಿಕಾ ಮಂದಣ್ಣ.

ಅಪ್ಪು ಬಗ್ಗೆ ರಶ್ಮಿಕಾ ಏನಂದರು.?

ಅಪ್ಪು ಬಗ್ಗೆ ರಶ್ಮಿಕಾ ಏನಂದರು.?

''ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಹೇಳಿ...'' ಎಂದು ಅಭಿಮಾನಿಯೊಬ್ಬರು ಕೇಳಿದಾಗ, ''I'm glad that i know ಪುನೀತ್ ಸರ್ ಪರ್ಸನಲಿ. ಇನ್ನೊಮ್ಮೆ ಚಾನ್ಸ್ ಸಿಕ್ಕರೆ, ಖಂಡಿತ ಅವರ ಜೊತೆ ಆಕ್ಟ್ ಮಾಡುವೆ'' ಎಂದರು ನಟಿ ರಶ್ಮಿಕಾ.

ಧ್ರುವ ಸರ್ಜಾ ಬಗ್ಗೆ ರಶ್ಮಿಕಾ ಹೇಳಿದಿಷ್ಟು...

ಧ್ರುವ ಸರ್ಜಾ ಬಗ್ಗೆ ರಶ್ಮಿಕಾ ಹೇಳಿದಿಷ್ಟು...

''ಧ್ರುವ ಸರ್ಜಾ ಜೊತೆ ಸಿನಿಮಾ ಮಾಡ್ತೀರಾ.?'' ಅಂತ ಸಿನಿ ಪ್ರಿಯರು ಕೇಳಿದಕ್ಕೆ, ''ಖಂಡಿತ. ಎಲ್ಲರ ಜೊತೆಗೂ ಸಿನಿಮಾ ಮಾಡುವ ಇಷ್ಟ ಇದೆ'' ಅಂತ ರಶ್ಮಿಕಾ ಹೇಳಿದರು.

ಪರಭಾಷೆಗೆ ಹಾರುವ ಬಗ್ಗೆ...

ಪರಭಾಷೆಗೆ ಹಾರುವ ಬಗ್ಗೆ...

''ಬಾಲಿವುಡ್ ನಲ್ಲಿ ಆಕ್ಟ್ ಮಾಡ್ತೀರಾ.?'', ''ಮಲಯಾಳಂ ಚಿತ್ರರಂಗದಲ್ಲಿ ಯಾವಾಗ ನಿಮ್ಮನ್ನ ನೋಡಬಹುದು'' ಎಂಬ ಪ್ರಶ್ನೆಗಳು ಕೂಡ ತೂರಿಬಂದವು. ಅದಕ್ಕೆ ''ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ, ನಟಿಸುವೆ. ನನಗೆ ಸ್ಕ್ರಿಪ್ಟ್ ಮುಖ್ಯ'' ಎಂದ ರಶ್ಮಿಕಾಗೆ ಮಲಯಾಳಂ ಭಾಷೆ ತುಂಬಾ ಕಷ್ಟವಂತೆ.

ತೆಲುಗಿನಲ್ಲೂ ಅಷ್ಟೇ.!

ತೆಲುಗಿನಲ್ಲೂ ಅಷ್ಟೇ.!

ತೆಲುಗು ಸಿನಿ ಪ್ರಿಯರು ಕೂಡ ರಶ್ಮಿಕಾ ರನ್ನ ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಜೊತೆಗೆ ನೋಡಲು ಇಷ್ಟ ಪಡ್ತಿದ್ದಾರೆ. ಇವರೆಲ್ಲ ಜೊತೆ ನಟಿಸುವ ಆಸೆ ರಶ್ಮಿಕಾಗೂ ಇದೆ. ಆದ್ರೆ, ಅವಕಾಶ ಸಿಗಬೇಕು ಅಷ್ಟೇ.

ಬೇಗ ಮದುವೆ ಆಗಿ

ಬೇಗ ಮದುವೆ ಆಗಿ

ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಇಚ್ಛೆ ವ್ಯಕ್ತ ಪಡಿಸಿದ ರಶ್ಮಿಕಾಗೆ ''ಬೇಗ ಮದುವೆ ಆಗ್ಬಿಡಿ...'' ಎಂಬ ಸಲಹೆ ಕೂಡ ಫೇಸ್ ಬುಕ್ ಲೈವ್ ನಲ್ಲಿ ಸಿಕ್ತು. ನಗುನಗುತ್ತಲೇ, ''ಖಂಡಿತ ಮದುವೆ ಆಗುವೆ'' ಎಂದ ರಶ್ಮಿಕಾ, ರಕ್ಷಿತ್ ಶೆಟ್ಟಿ ಜೊತೆಗೆ ಹೊಸ ಜೀವನಕ್ಕೆ ಕಾಲಿಡುವುದು ಯಾವಾಗ ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

More from Filmibeat

English summary
Kannada Actress Rashmika Mandanna speaks about Puneeth Rajkumar, Darshan and Sudeep in Facebook Live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X