»   » ಸ್ಟಾರ್ ಡೈರೆಕ್ಷರ್ ತ್ರಿವಿಕ್ರಮ್ ರನ್ನ ಇಂಪ್ರೆಸ್ ಮಾಡಿದ ರಶ್ಮಿಕಾ.!

ಸ್ಟಾರ್ ಡೈರೆಕ್ಷರ್ ತ್ರಿವಿಕ್ರಮ್ ರನ್ನ ಇಂಪ್ರೆಸ್ ಮಾಡಿದ ರಶ್ಮಿಕಾ.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಸಾನ್ವಿ' ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಪ್ರೇಕ್ಷಕರನ್ನ ಕ್ಲೀನ್ ಬೌಲ್ಡ್ ಮಾಡಿದ್ರು. ಒಂದೇ ಒಂದು ಹಾಡಿನಿಂದ ಯುವಕರೆಲ್ಲಾ 'ಸಾನ್ವಿ' ಅಂತ ಕನವರಿಸುವಂತೆ ಮಾಡಿದ್ರು. ಇದೇ ಸಾನ್ವಿ ಇದೀಗ ಟಾಲಿವುಡ್ ನಲ್ಲೂ ಮೋಡಿ ಮಾಡುತ್ತಿದ್ದಾರೆ.

ಸದ್ಯ ಸ್ವೀಟ್ ನ್ಯೂಸ್ ಏನು ಅಂದ್ರೆ ರಶ್ಮಿಕಾ ಮಂದಣ್ಣ ರ ಕ್ಯೂಟ್ ನೆಸ್ ನೋಡಿ ಟಾಲಿವುಡ್ ನ ಸ್ಟಾರ್ ಡೈರೆಕ್ಷರ್ ತ್ರಿವಿಕ್ರಮ್ ಶ್ರೀನಿವಾಸ್ ಇಂಪ್ರೆಸ್ ಆಗಿದ್ದಾರೆ. ಅದು ಹೇಗೆ ಅಂದ್ರಾ.? ಮುಂದೆ ಓದಿ....

ಟಾಲಿವುಡ್ ನಲ್ಲೂ ರಶ್ಮಿಕಾ ಮ್ಯಾಜಿಕ್

ಇತ್ತೀಚಿಗಷ್ಟೆ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ 'ಚಲೋ' ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕೆ ಸ್ಟಾರ್ ಡೈರೆಕ್ಟರ್ 'ತ್ರಿವಿಕ್ರಮ್ ಶ್ರೀನಿವಾಸ್' ಗೆಸ್ಟ್ ಆಗಿ ಬಂದಿದ್ರು. ಸ್ಟೇಜ್ ಮೇಲೆ ರಶ್ಮಿಕಾ ರ ಮಾತು ಕೇಳಿ ತ್ರಿವಿಕ್ರಮ್ ಇಂಪ್ರೆಸ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಮಾತನಾಡಿರೋ ವಿಡಿಯೋ ಸೋಷಿಯಲ್ ನೆಟ್ವರ್ಕ್ ನಲ್ಲಿ ವೈರಲ್ ಆಗಿದೆ.

ಸಾನ್ವಿ ಬಾಯಲ್ಲಿ 'ತೆಲುಗು ಸ್ಪೀಚ್'

ಕಿರಿಕ್ ಪಾರ್ಟಿ ಸಿನಿಮಾದಿಂದ ಖ್ಯಾತಿ ಪಡೆದುಕೊಂಡ ರಶ್ಮಿಕಾ ಮಂದಣ್ಣ 'ಚಲೋ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಮೊದಲ ತೆಲುಗು ಚಿತ್ರ ಇದಾಗಿದ್ದು ರಶ್ಮಿಕಾ ಈಗಾಗಲೇ ತೆಲುಗು ಮಾತನಾಡೋದನ್ನ ಕಲಿತಿದ್ದಾರೆ.

ಅದೇ ಲುಕ್ ಫೀಲ್ ಮಾತ್ರ ಚೇಂಜ್

'ಚಲೋ' ಸಿನಿಮಾದ ಫಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ರಶ್ಮಿಕಾ ತೆಲುಗು ಇಂಡಸ್ಟ್ರಿಯಲ್ಲೂ ಸಾನ್ವಿ ಲುಕ್ ನಲ್ಲೇ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿರೋ ರಶ್ಮಿಕಾ ನ ನೋಡಿದ್ರೆ 'ಕಿರಿಕ್ ಪಾರ್ಟಿ'ಯ ಸಾನ್ವಿ ಒಮ್ಮೆ ಕಣ್ಣು ಮುಂದೆ ಬಂದು ಹೋಗ್ತಾರೆ.

ಡಿಸೆಂಬರ್ ಅಂತ್ಯಕ್ಕೆ ಮತ್ತೆ ಸಾನ್ವಿ ಪ್ರತ್ಯಕ್ಷ

'ಚಲೋ' ಚಿತ್ರ ಈ ವರ್ಷದ ಅಂತ್ಯಕ್ಕೆ ತೆರೆಗೆ ಬರ್ತಿದೆ. ಡಿಸೆಂಬರ್ 29ಕ್ಕೆ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಕಳೆದ ವರ್ಷ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ಇಯರ್ ಎಂಡ್ ನಲ್ಲಿ ರಿಲೀಸ್ ಆಗಿ ಸಖತ್ ಸುದ್ದಿ ಮಾಡಿತ್ತು. 'ಚಲೋ' ಚಿತ್ರವೂ ರಶ್ಮಿಕಾ ರಿಗೆ ಒಳ್ಳೆ ಸಕ್ಸಸ್ ತಂದು ಕೊಡುವ ಸಾಧ್ಯತೆಗಳಿವೆ.

English summary
rashmika mandanna speaks in telugu at her upcoming tollywood movie chalo teaser launch program
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada