ಲವ್, ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಹೊಸ ಹೇಳಿಕೆ!

ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಭಾರತೀಯ ಸಿನಿಮಾರಂಗದ ನಾಯಕಿ ಆಗಿ ಗುರುತಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಅವರ ಸಿನಿಮಾ ವಿಚಾರಗಳು ಎಷ್ಟು ಸುದ್ದಿ ಆಗುತ್ತವೆಯೋ ಅಷ್ಟೇ ರಶ್ಮಿಕಾ ಅವರ ವೈಯಕ್ತಿಕ ಬದುಕಿನ ವಿಚಾರಗಳು ಕೂಡ ಸುದ್ದಿ ಅಗುತ್ತಲೇ ಇರುತ್ತವೆ.

ಅದರಲ್ಲೂ ಹೆಚ್ಚಾಗಿ ರಶ್ಮಿಕಾ ಅವರ ಮದುವೆ ಮತ್ತು ಲವ್ ಲೈಫ್ ಬಗ್ಗೆ ಆಗಾಗ ಹೆಚ್ಚು ಸುದ್ದಿಗಳು ಹರಿದಾಡುತ್ತೇ ಇರುತ್ತವೆ. ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಬ್ರೇಕಪ್ ಮಾಡಿಕೊಂಡಿರುವ ಕಾರಣ ಅವರು ಆಗಾಗ ಮದುವೆ, ಪ್ರೀತಿ ವಿಚಾರದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಈಗಲೂ ರಶ್ಮಿಕಾ ಅದೇ ಕಾರಣಕ್ಕೆ ಸುದ್ದಿ ಆಗಿದ್ದಾರೆ.

ಸದ್ಯ ರಶ್ಮಿಕಾ ಮದುವೆ, ಲವ್ ಬಗ್ಗೆ ಮಾತನಾಡಲು ಕಾರಣ ಸ್ವತಃ ಅವರೇ, ಹಾಗಂತ ರಶ್ಮಿಕಾ ಮದುವೆಗೆ ಮುಂದಾಗಿಲ್ಲ. ಆದರೆ ಮದುವೆ ಮತ್ತು ಪ್ರೀತಿಯ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ರಶ್ಮಿಕಾ ಏನ್ ಹೇಳಿದ್ದಾರೆ ಮುಂದೆ ಓದಿ...

'ಪ್ರೀತಿ' ಭಾವನೆಗಳಿಗೆ ಸಂಬಂಧಪಟ್ಟ ವಿಚಾರ: ರಶ್ಮಿಕಾ ಮಂದಣ್ಣ!

'ಪ್ರೀತಿ' ಭಾವನೆಗಳಿಗೆ ಸಂಬಂಧಪಟ್ಟ ವಿಚಾರ: ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ ಸಂದರ್ಶನ ಒಂದರಲ್ಲಿ ಪ್ರೀತಿ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ಪ್ರೀತಿ ಎಂದರೆ ರಶ್ಮಿಕಾಗೆ ಏನು ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ರಶ್ಮಿಕಾ ಉತ್ತರಿಸಿದ್ದಾರೆ. "ಪ್ರೀತಿ ಎಂದರೆ ಒಬ್ಬರಿಗೊಬ್ಬರು ಗೌರವ ನೀಡುವುದು, ಸಮಯ ಕೊಡುವುದು ಮತ್ತು ಒಬ್ಬರ ಜೊತೆ ಇರುವಾಗ ಸುರಕ್ಷಿತ ಎನ್ನುವ ಭಾವನೆ ಬರುವುದು. ಪ್ರೀತಿಯನ್ನು ವರ್ಣಿಸುವುದು ಕಷ್ಟ. ಯಾಕೆಂದರೆ ಅದು ಭಾವನೆಗಳಿಗೆ ಸಂಬಂಧ ಪಟ್ಟ ವಿಚಾರ. ಅಲ್ಲದೇ ಪ್ರೀತಿ ಯಾವಾಗಲೂ ಎರಡೂ ಕಡೆಯಿಂದ ಇದ್ದರೆ ಮಾತ್ರ ಸಾಧ್ಯ, ಒಂದು ಕಡೆ ಮಾತ್ರ ಅಲ್ಲ." ಎಂದಿದ್ದಾರೆ.

ಮದುವೆ ಬಗ್ಗೆ ಮಾತನಾಡಲು ರಶ್ಮಿಕಾ ಚಿಕ್ಕವರಂತೆ!

ಮದುವೆ ಬಗ್ಗೆ ಮಾತನಾಡಲು ರಶ್ಮಿಕಾ ಚಿಕ್ಕವರಂತೆ!

ಇನ್ನು ಇದೇ ಸಂದರ್ಭದಲ್ಲಿ ರಶ್ಮಿಕಾ ಅವರು ಮದುವೆ ಬಗ್ಗೆಯೂ ಮಾತನಾಡಿದ್ದಾರೆ. "ಮದುವೆ ಬ್ಗಗೆ ಏನು ಯೋಚಿಸ ಬೇಕು ಎಂದು ನನಗೆ ತಿಳಿಯುತ್ತಿಲ್ಲ. ಯಾಕೆಂದರೆ ಈ ಬಗ್ಗೆ ಮಾತನಾಡಲು, ಯೋಚಿಸಲು ನಾನು ತುಂಬಾ ಚಿಕ್ಕವಳು. ಹಾಗಂತ ಸುಮ್ಮನೇ ಇರಲ್ಲ. ಮದುವೆ ಬಗ್ಗೆ ಹೇಳಬೇಕು ಅಂದರೆ ನಮಗೆ ಸರಿಹೊಂದುವವರ ಜೊತೆಗೆ ಇರುವುದೇ ಮದುವೆ." ಎಂದು ಹೇಳಿಕೆ ನೀಡಿದ್ದಾರೆ ರಶ್ಮಿಕಾ ಮಂದಣ್ಣ.

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು!

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು!

ನಟಿ ರಶ್ಮಿಕಾ ಮಂದಣ್ಣ ಹೆಸರು ನಟ ವಿಜಯ್ ದೇವರಕೊಂಡ ಜೊತೆಗೆ ಕೇಳಿ ಬಂದಿದೆ. ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎನ್ನುವ ವಿಚಾರ ಆಗಾಗ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಾ ಇರುತ್ತೆ. ಅದಕ್ಕೆ ತಕ್ಕಂತೆ ರಶ್ಮಿಕಾ ಮತ್ತು ವಿಜಯ್ ಹಂಚಿಕೊಳ್ಳುವ ಹಲವು ಫೊಟೋಗಳು ಕೂಡ ಸಾಕ್ಷಿ ಅಗಿವೆ. ಅದರೆ ಈ ಜೋಡಿ ಮಾತ್ರ ತಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಳ್ಳುತ್ತದೆ.

ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಬ್ರೇಕಪ್!

ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಬ್ರೇಕಪ್!

ನಟ ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಸಿ, ಮದುವೆ ಅಗಲು ಸಜ್ಜಾಗಿದ್ದರು. ಮದುವೆ ಆಗಲು ಮುಂದಾದ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಆದರೆ ವೈಯಕ್ತಿಕ ಕಾರಣಗಳಿಗೆ ಈ ಜೋಡಿ ನಿಶ್ಚಿತಾರ್ಥ ಮುರಿದು ಕೊಂಡು, ಬ್ರೇಕಪ್ ಮಾಡಿಕೊಂಡು ದೂರ ಆಯಿತು. ಆ ಬಳಿಕ ರಶ್ಮಿಕಾ ಕನ್ನಡದಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡಿ, ನಂತರ ತೆಲುಗಿನಲ್ಲಿ ಸಾಲು ಸಾಲು ಸಿನಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

More from Filmibeat

English summary
Rashmika Mandanna Say's Love Is All About Feeling,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X