ನನ್ನ ಮೇಲೆ ಆದ ಟ್ರೋಲ್‌ಗಳನ್ನು ನೋಡಿ ಸಿನಿಮಾ ಇಂಡಸ್ಟ್ರಿ ಬಿಡಲು ತೀರ್ಮಾನಿಸಿದ್ದೆ: ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ. ಹುಟ್ಟಿ ಬೆಳೆದಿದ್ದು ಎಲ್ಲವೂ ಕರ್ನಾಟಕದಲ್ಲಿ. ತನ್ನ ಸಿನಿಮಾ ಕೆರಿಯರ್ ಆರಂಭಿಸಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿ ಒಂದೇ ಸಿನಿಮಾದಿಂದ ಹೆಸರುವಾಸಿಯಾದ ಇವರು, ನಂತರ ಕರ್ನಾಟಕ ಕ್ರಶ್ ಅಂತಲೂ ಫೇಮಸ್ ಆದರು. ನಂತರ ಕನ್ನಡದ ಚಮಕ್, ಅಂಜನಿಪುತ್ರ, ಯಜಮಾನ ಸಿನಿಮಾದಲ್ಲಿ ನಟಿಸಿ ಪರಭಾಷೆಗೆ ಹಾರಿದ ರಶ್ಮಿಕಾ ಜನಪ್ರೀಯತೆ ಪಡೆಯುವ ಜೊತೆಗೆ ಹೆಚ್ಚಾಗಿ ಟ್ರೋಲ್ ಆಗಿ ಸುದ್ದಿಯಾಗುತ್ತಿದ್ದಾರೆ.
ಕನ್ನಡಿಗರಿಂದಲೇ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತಿರುವ ರಶ್ಮಿಕಾ ಅದ್ಯಾವುದಕ್ಕು ತಲೆಕೆಡಿಸಿಕೊಂಡಿಲ್ಲದಂತೆ ಕಾಣುತ್ತಾರೆ. ಆದರೇ ಟ್ರೋಲ್‌ನಿಂದಾಗಿ ನಾನು ನಡುಗಿ ಹೋಗಿದ್ದೇನೆ ಎಂದು ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತು ಹಂಚಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಬೇಸರ ಕೂಡ ವ್ಯಕ್ತಪಡಿಸಿರುವ ರಶ್ಮಿಕಾ ನಾನು ಎಲ್ಲರ ಮುಂದೆ ಏನು ಆಗಿಲ್ಲ ಎಂಬಂತೆ ಇರುತ್ತೇನೆ. ಆದರೇ ನನಗೂ ಮನಸ್ಸಿದೆ, ನೋವಾಗುತ್ತೆ, ಯಾರಿಗೂ ಗೊತ್ತಿಲ್ಲದೇ ಅತ್ತಿರುವ ದಿನವೂ ಇದೆ ಎಂದು ಹೇಳಿಕೆ ನೀಡಿದ್ದಾರೆ.
ಹಾಗೇ ತನ್ನ ಸಿನಿ ಕೆರಿಯರ್ ಆರಂಭದ ಬಗ್ಗೆ ಮಾತನಾಡಿರುವ ರಶ್ಮಿಕಾ, ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆಯೂ ಬಾಲಿವುಡ್ ಮೂಲದ ಖಾಸಗೀ ಸಂದರ್ಶನದಲ್ಲಿ ಮಾತು ಹಂಚಿಕೊಂಡಿದ್ದಾರೆ. ಹಾಗೇ ಎಲ್ಲರೂ ನನ್ನನ್ನು ನೆಗೆಟಿವ್ ಆಗಿ ನಿಂದಿಸಿದ್ದಾರೆ. ಟ್ರೋಲ್ ಮಾಡಿದ್ದಾರೆ, ಬಾಡಿ ಶೇಮಿಂಗ್, ಏಜ್ ಶೇಮಿಂಗ್, ಎಲ್ಲವನ್ನು ನಾನು ಅನುಭವಿಸುತ್ತಲೇ ಇದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ರಶ್ಮಿಕಾ ಯಾವೆಲ್ಲಾ ವಿಚಾರದ ಬಗ್ಗೆ ಮಾತಾಡಿದ್ದಾರೆ ಮುಂದೆ ನೋಡಿ.

ಸಿನಿಮಾ ಇಂಡಸ್ಟ್ರಿ ನನ್ನ ಆಯ್ಕೆ ಆಗಿರಲಿಲ್ಲ ಎಂದ ರಶ್ಮಿಕಾ !
ನಾನು ಡಿಗ್ರಿ ಓದಲೆಂದು ಬೆಂಗಳೂರಿಗೆ ಬಂದಿದ್ದು. 2014ರಿಂದಲೇ ನಾನು ಮಾಡೆಲಿಂಗ್ ಕೆರಿಯರ್ ಆರಂಭಿಸಿದ್ದೆ. ಮಾಡೆಲ್ ಆಗಿದ್ದಾಗ ನಾನು ತುಂಬ ಆಕ್ಟಿವ್ ಆಗಿ ಇರುತ್ತಿದ್ದೆ. ಈ ಸಂದರ್ಭದಲ್ಲಿ ಸಾಕಷ್ಟು ಸಿನಿಮಾಗಳಿಂದ ಆಫರ್ ಬಂದರೂ ಕಥೆ ಇಷ್ಟ ಆಗಿರಲಿಲ್ಲ. ಸ್ವಲ್ಪ ಸಮಯದ ನಂತರ ನನಗೆ ಕಿರಿಕ್ ಪಾರ್ಟಿ ಚಿತ್ರ ತಂಡದಿಂದ ಅವಕಾಶ ಬಂತು. ಕಥೆ ಕೇಳಿದೆ ಅದು ನನಗೆ ತುಂಬ ಇಷ್ಟ ಆಯ್ತು. ಯಾಕೆಂದರೇ ನಾನು ಕೂಡ ಆಗ ಕಾಲೇಜ್ ಹೋಗುತ್ತಿದ್ದೆ, ಕಿರಿಕ್ ಪಾರ್ಟಿ ಚಿತ್ರದಲ್ಲೂ ಅಂತದ್ದೇ ಕ್ಯಾರೆಕ್ಟರ್ ಇತ್ತು ಹೀಗಾಗಿ ಒಪ್ಪಿಕೊಂಡು ಮಾಡಿದೆ. ಆ ಸಿನಿಮಾ ಇವತ್ತು ನನ್ನ ಇಲ್ಲಿವರೆಗೂ ಕರೆದುಕೊಂಡು ಬಂದಿದೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ನನ್ನ ಕುಟುಂಬ ಆಗ ನನಗೆ ಧೈರ್ಯ ನೀಡಿದ್ದರು !
ಸಿನಿಮಾ ಇಂಡಸ್ಟ್ರಿಗೆ ಬಂದ ನಂತರ ನನ್ನ ಬಗ್ಗೆ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಮೊದ ಮೊದಲು ನನ್ನ ಬಗ್ಗೆ ಟ್ರೋಲ್ ಆದಾಗ ಕಮರಿ ಹೋಗಿದೆ. ಟ್ರೋಲ್‌ಗಳು ನನಗೆ ಸುನಾಮಿಯಂತೆ ಬಂದು ಅಪ್ಪಳಿಸುತ್ತಿತ್ತು. ಆಗ ನಾನು ಈ ಬಗ್ಗೆ ತುಂಬ ತಲೆ ಕೆಡಿಸಿಕೊಂಡಿದ್ದೆ. ನೆಗೆಟಿವ್ ಆಗಿ ಯೋಚನೆ ಮಾಡಲು ಆರಂಭಿಸಿದ್ದೆ. ಹೇಳಬೇಕು ಎಂದರೇ ನಾನು ಸಿನಿಮಾ ಇಂಡಸ್ಟ್ರಿಯನ್ನೇ ಬಿಡಲು ತೀರ್ಮಾನಿಸಿದ್ದೆ ಎಂದಿದ್ದಾರೆ ರಶ್ಮಿಕಾ. ಈ ಸಂದರ್ಭದಲ್ಲಿ ನನಗೆ ನನ್ನ ಕುಟುಂಬ ಧೈರ್ಯ ತುಂಬಿತ್ತು . ಹೀಗಾಗಿ ಮತ್ತೆ ನನ್ನ ಕೆರಿಯರ್ ಸಿನಿಮಾ ದಿಂದಲೇ ಆರಂಭಿಸಿದ್ದೇನೆ ಎಂದಿದ್ದಾರೆ.

ನನಗೆ ಇಷ್ಟ ಬಂದ ಹಾಗೆ ನಾನು ಮಾತನಾಡುತ್ತೇನೆ ಎಂದ ರಶ್ಮಿಕಾ !
ನಾನು ಎಲ್ಲೇ ಹೋಗಲಿ ತುಂಬ ಟ್ರೋಲ್ ಆಗೋದು ಭಾಷೆಯ ವಿಚಾರಕ್ಕೆ. ನಿಜ ಹೇಳಬೇಕು ಅಂದರೇ ನನಗೆ ಈಗಲೂ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ. ಹೊಸ ಹೊಸ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಎಲ್ಲವೂ ಮಿಕ್ಸ್ ಆಗಿ ಕಷ್ಟ ಪಟ್ಟು ಮಾತನಾಡುತ್ತೇನೆ ಅಷ್ಟೆ. ಹಾಗಂತ ನನಗೆ ಭಾಷೆ ಮೇಲೆ ಪ್ರೀತಿ ಇಲ್ಲ ಅಂತ ಆಗೋದಿಲ್ಲ. ಮತ್ತು ನಾನು ಮಾತನಾಡುವಾಗ ಆಗುವಂತಹ ತಪ್ಪುಗಳನ್ನೆ ಹಲವರು ಟಾರ್ಗೆಟ್ ಮಾಡುತ್ತಾರೆ. ಅದನ್ನೆ ಟ್ರೋಲ್ ಮಾಡುತ್ತಾರೆ. ಇದೆಲ್ಲಾ ನೋಡುತ್ತಿದ್ದರೇ ಬೇಸರ ಆಗುತ್ತೆ . ಆದರೇ ನಾನು ಯಾವುದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ನನ್ನಿಂದ ಎಷ್ಟು ಆಗುತ್ತೆ ಅಷ್ಟು ಪ್ರೀತಿ ಹಂಚಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಕೆಟ್ಟ ಪದಗಳ ಅರ್ಥವನ್ನು ನಾನು ಅಮ್ಮನ ಬಳಿ ಕೇಳುತ್ತೇನೆ !
ಕೆಲವರು ಟ್ರೋಲ್ ಮಾಡುವ ಬರದಲ್ಲಿ ಏನೇನೋ ಟ್ರೋಲ್ ಮಾಡುತ್ತಾರೆ. ಕೆಟ್ಟ ಕೆಟ್ಟ ಪದಗಳನ್ನು ಬಳಸಿ ನನ್ನನ್ನು ಆ ಪೋಸ್ಟ್‌ಗೆ ಟ್ಯಾಗ್ ಮಾಡುತ್ತಾರೆ. ಆ ಪದಗಳ ಅರ್ಥವೇ ನನಗೆ ಗೊತ್ತಿರೋದಿಲ್ಲ. ಆಗ ನಾನು ಅಮ್ಮನ ಬಳಿ ಕೇಳುತ್ತೇನೆ. ಅಮ್ಮ ಅದನ್ನು ಬಿಟ್ಟು ಬಿಡು ಅನ್ನುತ್ತಾರೆ. ಆಗ ಸ್ನೇಹಿತರ ಬಳಿ ಅದನ್ನು ಕೇಳುತ್ತೇನೆ. ಅವರು ಅದರ ಅರ್ಥ ಹೇಳಿದಾಗ ಎದೆಯೇ ಒಡೆದುಹೋದ ಅನುಭವ ಆಗಿದೆ ನನಗೆ. ಇಷ್ಟೊಂದು ನೆಗೆಟಿವಿಟಿ ಯಾಕೆ ಹರಡುತ್ತಿದ್ದಾರೆ ಎಂದು ಬೇಸರ ಆಗುತ್ತೆ. ಆದರೆ ಅದಕ್ಕೆಲ್ಲ ನನ್ನ ಉತ್ತರ ಬರೀ ನಗುವಷ್ಟೆ. ಸಾಕಷ್ಟು ಮಂದಿ ನನ್ನ ಬಾಡಿ ಶೇಮಿಂಗ್ ಮಾಡಿದ್ದಾರೆ. ನನ್ನ ಕುಟುಂಬದ ಬಗ್ಗೆ, ನನ್ನ ಶಾಲೆಯ ಬಗ್ಗೆ, ನನ್ನ ಖಾಸಗೀ ಜೀವನದ ಬಗ್ಗೆಯೂ ಮಾತಾಡಿದ್ದಾರೆ. ಇದರಿಂದ ಅವರಿಗೆಲ್ಲಾ ಏನು ಸಿಗುತ್ತೆ ಎಂದು ಖಾಸಗೀ ಸಂದರ್ಶನದಲ್ಲಿ ರಶ್ಮಿಕಾ ಮಾತು ಹಂಚಿಕೊಂಡಿದ್ದಾರೆ.

ನನ್ನನ್ನು ಅರ್ಥಮಾಡಿಕೊಳ್ಳಲಾಗದೇ ನನ್ನಿಂದ ದೂರ ಆಗಿದ್ದಾರೆ
ಮಾತು ಮುಂದುವರೆಸಿ ತನ್ನ ಮತ್ತು ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಬಗ್ಗೆಯೂ ಇನ್‌ಡೈರೆಕ್ಟ್ ಆಗಿ ಮಾತನಾಡಿರುವ ರಶ್ಮಿಕಾ ನಾನು ಎಲ್ಲರನ್ನೂ ನಂಬುತ್ತೇನೆ, ಪ್ರೀತಿ ಮಾಡುತ್ತೇನೆ, ಹಾಗೇ ನನ್ನ ಹೃದಯವನ್ನು ಕೊಡುತ್ತೇನೆ. ಆದರೇ ಕೆಲವರು ಅದನ್ನು ಅರ್ಥ ಮಾಡಿಕೊಳ್ಳೊದಿಲ್ಲಾ. ನನ್ನನ್ನು ತಾನಾಗಿಯೇ ಇರಲು ಬಿಡಲಿಲ್ಲ. ಈ ರೀತಿಯಾಗಿಯೇ ನನ್ನನ್ನು ಕಳೆದುಕೊಂಡಿದ್ದಾರೆ. ಇದರಿಂದ ನಾನು ಕುಗ್ಗಿಲ್ಲ. ಖುಷಿ ಆಗಿಯೇ ಇದ್ದೇನೆ. ಇದರಿಂದ ನನಗೆ ನೋವಾಗಿರೋದು ನಿಜ. ಆದರೇ ಯಾರ ಮುಂದೆಯೂ ಅದನ್ನು ನಾನು ತೋರಿಸಿಕೊಂಡಿಲ್ಲ. ವರ್ಷದಲ್ಲಿ ಸಾಕಷ್ಟು ದಿನ ನಾನು ಕಣ್ಣೀರು ಹಾಕಿಯೇ ಮಲಗೋದು. ನಿದ್ರೆ ಇಲ್ಲದೇ ರಾತ್ರಿಗಳನ್ನು ನಾನು ಕಳೆದಿದ್ದೇನೆ? ಇದನ್ನೆಲ್ಲಾ ಕುಟುಂಬದವರ ಜೊತೆ ಹೇಳಿಕೊಳ್ಳಲು ಆಗುತ್ತಾ? ಹೀಗಾಗಿ ನನ್ನ ನೋವು ನನ್ನಲ್ಲಿಯೇ ಇರುತ್ತೆ ಎಂದು ರಶ್ಮಿಕಾ ಮಾತನಾಡಿದ್ದಾರೆ.

ಕೆಲಸ ಇಲ್ಲದೇ ಬರೀ ಟ್ರೋಲ್ ಮಾಡಿಕೊಂಡೇ ಜೀವನ ನಡೆಸುತ್ತೀರಾ ಎಂದು ಪ್ರಶ್ನೆ
ಟ್ರೋಲರ್‌ಗಳ ಟ್ರೋಲ್‌ಗಳಿಗೆ ಬೇಸರ ಇಲ್ಲ. ಆದರೇ ಒಬ್ಬ ಹೆಣ್ಣು ಮಗಳನ್ನು ಕೆಟ್ಟದಾಗಿ ಟ್ರೋಲ್ ಮಾಡಬೇಡಿ. ಅಲ್ಲಾ ನಿಮಗೆಲ್ಲ ಟ್ರೋಲ್ ಮಾಡೋಕೆ ಎಲ್ಲಿಂದ ಸಮಯ ಸಿಗುತ್ತೆ? ನನಗೆ ಇದನ್ನು ಯೋಚಿಸಿದ್ರೇನೆ ಹೇಗೆ ಇದೆಲ್ಲಾ ಮಾಡುತ್ತಾರೆ ಅಂತ ಅನ್ನಿಸುತ್ತೆ. ಬೇರೆ ಕೆಲಸಾನು ಮಾಡಿ, ಸ್ವಲ್ಪ ಹಣ ಸಂಪಾದಿಸಿ, ಟ್ರೋಲ್ ಮಾಡಿಕೊಂಡೆ ಸಮಯ ವ್ಯರ್ಥ ಮಾಡಬೇಡಿ ಎಂದು ಕಿವಿಮಾತು ನೀಡಿದ್ದಾರೆ ರಶ್ಮಿಕಾ.


Click it and Unblock the Notifications











