ರಶ್ಮಿಕಾ ಮಂದಣ್ಣ ಕೊಡವ ಮಾತುಗಳನ್ನು ಕೇಳಿ ಪರಭಾಷಾ ಫ್ಯಾನ್ಸ್ ಕನ್ಫ್ಯೂಸ್

ಟಾಲಿವುಡ್‌, ಬಾಲಿವುಡ್, ಕಾಲಿವುಡ್ ಅಂತ ಅತ್ತಿಂದ ಇತ್ತ ಇತ್ತಿಂದ ಅತ್ತ ಫ್ಲೈಟ್ ಏರಿ ಸುತ್ತಾಡುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹುಟ್ಟೂರಿಗೆ ಬಂದಿದ್ದರು. ತನ್ನ ಸ್ನೇಹಿತೆ ಯಾತ್ರಾ ದೇಚಮ್ಮಳ ವಿವಾಹ ಮಹೋತ್ಸವದಲ್ಲಿ ಭಾಗಿ ಆಗಿದ್ದರು. ಈ ವೇಳೆ ಕೊಡವ ಭಾಷೆಯಲ್ಲಿ ಮಾತನಾಡಿರುವ ವೀಡಿಯೋ ಹಂಚಿಕೊಂಡಿದ್ದಾರೆ.

"ಎಲ್ಲರಿಕ್ಕೂ ನಲ್ಲಮೆ (ಎಲ್ಲರಿಗೂ ನಲ್ಮೆಯ ನಮಸ್ಕಾರ), ನಾನು ಕೊಡಗಿನಲ್ಲಿದ್ದೇನೆ. ಗೆಳತಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಡಗಿಗೆ ಬಂದಿದ್ದೇನೆ. ಇಲ್ಲಿಯವರೆಗೆ ನನಗೆ ನಿಮ್ಮ ಆಶೀರ್ವಾದ ದೊರಕಿದೆ. ಮುಂದೆಯೂ ನಿಮ್ಮ ಆಶೀರ್ವಾದ ದೊರಕಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಇಕ್ಕಂಜಸ... ಇಲ್ಲಿಯವರೆಗೆ ನನಗೆ ಕಾವೇರಮ್ಮ, ಇಗ್ಗುತ್ತಪ್ಪ ಸ್ವಾಮಿಯ ಆಶೀರ್ವಾದ ದೊರಕಿದೆ. ನೀವೆಲ್ಲರೂ ನನಗೆ ಯಾವಾಗಲೂ ಬೆಂಬಲ ನೀಡುತ್ತ ಇದ್ದೀರಿ. ಮುಂದೆಯೂ ಇದೇ ರೀತಿ ಬೆಂಬಲ ನೀಡುತ್ತಿರಿ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

RAshmika Mandanna talks about her mother tongue kovada

"ನಾನು ಎಲ್ಲಿಂದ ಬಂದವಳು. ನನ್ನ ಮೂಲ ಎಲ್ಲಿ ಎಂದು ಎಲ್ಲರಿಗೂ ತಿಳಿಯಲಿ ಎಂದು ಉದ್ದೇಶಪೂರ್ವಕವಾಗಿ ನಾನು ನನ್ನ ಕೊಡವ ಭಾಷೆಯಲ್ಲಿ ಮಾತನಾಡಿದ್ದೇನೆ" ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಸಾಕಷ್ಟು ಅಭಿಮಾನಿಗಳು ರೋಶ್ ವೀಡಿಯೋಗೆ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೊಡಗಿನ ಮೂಲಕ ಹರ್ಷಿಕಾ ಪೂಣಚ್ಚ ಕೂಡ ಪ್ರತಿಕ್ರಿಯಿಸಿದ್ದಾರೆ.

"ಎಷ್ಟೇ ಬೆಳೆದರೂ ಮೂಲ ಮರೆಯಲಿಲ್ಲವಲ್ಲ" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಸದ್ಯ ರಶ್ಮಿಕಾ ಕಾಮೆಂಟ್ ಸೆನ್ಷನ್ ಆಫ್ ಮಾಡಿದ್ದಾರೆ. ಪರಭಾಷಾ ಅಭಿಮಾನಿಗಳಿಗೂ ರಶ್ಮಿಕಾ ಮಾತುಗಳು ಇಷ್ಟವಾಗಿದೆ. ಆದರೆ ಏನು ಹೇಳಿದ್ದಾರೆ ಎಂದು ಅರ್ಥವಾಗದೇ ತಲೆಕಡೆಸಿಕೊಂಡಿದ್ದಾರೆ. ದಯವಿಷ್ಟು ಆಕೆ ಏನು ಹೇಳುತ್ತಿದ್ದಾಳೆ ಟ್ರಾನ್ಸ್‌ಲೇಟ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಕೆಲವರು ಆಕೆ ಮಾತನಾಡಿರುವುದು ಕನ್ನಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಸಿನಿಮಾಗಳ ವಿಚಾರಕ್ಕ ಬಂದರೆ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪುಷ್ಪ'-2 ರಿಲೀಸ್ ತಡವಾಗುತ್ತಿದೆ. ಆಗಸ್ಟ್ 15ಕ್ಕೆ ಬರಬೇಕಿದ್ದ ಸಿನಿಮಾ ಡಿಸೆಂಬರ್‌ಗೆ ಪೋಸ್ಟ್‌ಪೋನ್ ಆಗಿದೆ. ಇನ್ನುಳಿದಂತೆ ತಮಿಳುನ 'ಕುಬೇರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಟೀಸರ್ ಬರಲಿದೆ.

'ದಿ ಗರ್ಲ್ ಫ್ರೆಂಡ್' ಹಾಗೂ 'ರೈಬೋ' ಎನ್ನುವ ಎರಡು ಮಹಿಳಾ ಪ್ರಧಾನ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ. ಶೀಘ್ರದಲ್ಲೇ ಮತ್ತೊಂದು ತಮಿಳು ಚಿತ್ರದಲ್ಲಿ ನಟಿಸೋ ಗುಸುಗುಸು ಶುರುವಾಗಿದೆ. ಶಿವ ಕಾರ್ತಿಕೇಯನ್ ಜೋಡಿಯಾಗಿ ಕೊಡಗಿನ ಕುವರಿ ನಟಿಸುತ್ತಾರೆ ಎನ್ನಲಾಗ್ತಿದೆ.

'ಅನಿಮಲ್' ಸಿನಿಮಾ ಸಕ್ಸಸ್‌ನಿಂದ ಬಾಲಿವುಡ್‌ನಲ್ಲಿ ಕೂಡ ರಶ್ಮಿಕಾ ಮಂದಣ್ಣ ಕ್ರೇಜ್ ಹೆಚ್ಚಾಗಿದೆ. ಈಗಾಗಲೇ 'ಚಾವ' ಎನ್ನುವ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಯೆಸುಬಾಯ್ ಬೊನ್ಸಲೆ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

More from Filmibeat

English summary
Actress Rashmika Mandanna Thanks Kodava Community, video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X