For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ' ಸಿನಿಮಾದವರು ನನ್ನ ಹಿಂದೆ ಬಿದ್ದಿದ್ದರು: ರಶ್ಮಿಕಾ ಮಂದಣ್ಣ

  |

  ನಟಿ ರಶ್ಮಿಕಾ ಮಂದಣ್ಣ ಈಗ ಚಥುರ್ಭಾಷಾ ನಟಿಯಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಹು ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಮಲಯಾಳಂಗೂ ಕಾಲಿಡಲಿದ್ದಾರೆ ಈ ನಟಿ.

  ತೆಲುಗು, ತಮಿಳಿನಲ್ಲಿ ಹಿಟ್ ಆದ ಬಳಿಕ ಇದೀಗ ಬಾಲಿವುಡ್‌ನತ್ತ ಮುಖ ಮಾಡಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿಯೇ ನೆಲೆ ನಿಲ್ಲುವ ಯೋಜನೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಖಾಸಗಿ ತರಬೇತುದಾರರನ್ನು ಇರಿಸಿಕೊಂಡು ಹಿಂದಿ ಕಲಿಯುತ್ತಿದ್ದಾರೆ, ಜೊತೆಗೆ ಹಲವು ಹಿಂದಿ ಚಾನೆಲ್‌ಗಳಿಗೆ, ಯೂಟ್ಯೂಬ್‌ ಚಾನೆಲ್‌ಗಳಿಗೆ ಸಂದರ್ಶನಗಳನ್ನು ಸಹ ನೀಡುತ್ತಿದ್ದಾರೆ.

  ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಸತ್ಯಾಂಶ ಬಿಚ್ಚಿಟ್ಟ ಕರಣ್ ಜೋಹರ್! ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಸತ್ಯಾಂಶ ಬಿಚ್ಚಿಟ್ಟ ಕರಣ್ ಜೋಹರ್!

  ಇದೀಗ ಜನಪ್ರಿಯ ಹಿಂದಿ ಯೂಟ್ಯೂಬ್ ಚಾನೆಲ್‌ ಆಗಿರುವ 'ಮಾಷೆಬಲ್ ಇಂಡಿಯಾ'ಗಾಗಿ ರಶ್ಮಿಕಾ ಮಂದಣ್ಣ ಸಂದರ್ಶನ ನೀಡಿದ್ದು, ತಮ್ಮ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ' ಬಗ್ಗೆ ಮಾತನಾಡಿದ್ದಾರೆ. ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು, ನಾನೇ ಅವಾಯ್ಡ್ ಮಾಡುತ್ತಿದ್ದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

  ನಂಬರ್ ಬ್ಲಾಕ್ ಮಾಡಿದ್ದೆ: ರಶ್ಮಿಕಾ ಮಂದಣ್ಣ

  ನಂಬರ್ ಬ್ಲಾಕ್ ಮಾಡಿದ್ದೆ: ರಶ್ಮಿಕಾ ಮಂದಣ್ಣ

  'ನಾನು ಆಗಷ್ಟೆ 'ಫ್ರೆಶ್ ಫೇಸ್' ಕಾಂಟೆಸ್ಟ್ ಗೆದ್ದಿದ್ದೆ. ನನ್ನ ಒಂದು ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಬಹಳ ಕೆಟ್ಟದಾಗಿ ನಾನು ಕಾಣುತ್ತಿದೆ. ಅದೇ ಸಮಯಕ್ಕೆ 'ಕಿರಿಕ್ ಪಾರ್ಟಿ' ತಂಡದವರು ನಾಯಕಿಗಾಗಿ ಹುಡುಕುತ್ತಿದ್ದರು. ಅವರಿಗೆ ಸಣ್ಣ ವಯಸ್ಸಿನ ಆದರೆ ಮೆಚ್ಯೂರ್ಡ್ ಮುಖದ ನಟಿ ಬೇಕಾಗಿದ್ದರು. ಅವರು ನನ್ನ ಫೋಟೊ ನೋಡಿ ನನಗೆ ಕರೆ ಮಾಡಿದರು. ಆದರೆ ಅದೊಂದು ಫ್ರಾಂಕ್ ಕಾಲ್ ಎಂದುಕೊಂಡು ನನಗೆ ನಟಿಸುವುದು ಇಷ್ಟವಿಲ್ಲ ಎಂದು ಹೇಳಿ ಕಟ್ ಮಾಡಿ ನಂಬರ್ 'ಅವನನ್ನು' (?!) ಬ್ಲಾಕ್ ಮಾಡಿಬಿಟ್ಟೆ'' ಎಂದಿದ್ದಾರೆ.

  ನನ್ನ ಟೀಚರ್ ಅನ್ನು ಸಹ ಅವರು ಭೇಟಿಯಾಗಿದ್ದರು: ರಶ್ಮಿಕಾ

  ನನ್ನ ಟೀಚರ್ ಅನ್ನು ಸಹ ಅವರು ಭೇಟಿಯಾಗಿದ್ದರು: ರಶ್ಮಿಕಾ

  ಆ ಬಳಿಕ ಅವರು ನನ್ನ ಗೆಳೆಯರನ್ನೆಲ್ಲ ಸಂಪರ್ಕಿಸಿದರು. ಆಕೆಯೊಂದಿಗೆ ಮಾತನಾಡಿಸಿ ಎಂದು ಕೇಳಿದರು. ಕೊನೆಗೆ ಅವರು ನನ್ನ ಟೀಚರ್ ಅನ್ನು ಸಹ ಭೇಟಿ ಮಾಡಿದರು. ನಾವು ರಶ್ಮಿಕಾ ಅನ್ನು ಹುಡುಕಿದ್ದೇವೆ, ಆಕೆ ನಿಮ್ಮದೇ ಕಾಲೇಜಿನ ಹುಡುಗಿ ಎಂಬುದು ಗೊತ್ತು ಆಕೆಗೆ ನಮ್ಮನ್ನು ಒಮ್ಮೆ ಭೇಟಿ ಮಾಡುವಂತೆ ಹೇಳಿ ಎಂದು ಕೇಳಿಕೊಂಡರು ಎಂದಿದ್ದರು. ಟೀಚರ್ ನನ್ನನ್ನು ಕರೆಸಿ, ಯಾಕೆ ಹೀಗೆ ಅವರನ್ನು ಕಾಡಿಸುತ್ತಿದ್ದೀಯ, ಒಮ್ಮೆ ಭೇಟಿ ಮಾಡು ಅದರಲ್ಲಿ ಕಳೆದುಕೊಳ್ಳುವುದೇನು? ಎಂದರು. ನಾನೂ ಸಹ ನನ್ನ ಟೀಚರ್‌ ಮಾತಿನ ಮೇಲಿನ ಗೌರವಕ್ಕೆ ನಿರ್ದೇಶಕರನ್ನು ಹಾಗೂ ನಿರ್ಮಾಪಕರನ್ನು ಭೇಟಿಯಾದೆ'' ಎಂದಿದ್ದಾರೆ ರಶ್ಮಿಕಾ.

  ನಿರ್ದೇಶಕ, ನಿರ್ಮಾಪಕರನ್ನು ಭೇಟಿಯಾದೆ: ರಶ್ಮಿಕಾ

  ನಿರ್ದೇಶಕ, ನಿರ್ಮಾಪಕರನ್ನು ಭೇಟಿಯಾದೆ: ರಶ್ಮಿಕಾ

  ನಿರ್ದೇಶಕ ಹಾಗೂ ನಿರ್ಮಾಪಕರನ್ನು (ರಕ್ಷಿತ್ ಶೆಟ್ಟಿ, ರಿಷಬ್ ಹೆಸರು ಹೇಳಲಿಲ್ಲ ರಶ್ಮಿಕಾ) ಭೇಟಿಯಾದಾಗಿ, ಆದರೆ ಅವರು ಸಹಜವಾಗಿಯೇ ನನ್ನೊಟ್ಟಿಗೆ ಮಾತನಾಡಿದರು. ಆದರೆ ಅಲ್ಲಿ ಕ್ಯಾಮೆರಾ ಒಂದನ್ನು ಇಟ್ಟಿದ್ದರು. ಮಾತುಕತೆ ಆದ ಮೇಲೆ ಆ ವಿಡಿಯೋವನ್ನು ನೋಡಿ ಈಕೆ ಸರಿಯಾಗಿ ಸೂಟ್ ಆಗುತ್ತಾಳೆ ಎಂದುಕೊಂಡರು. ಬಳಿಕ ಸಿನಿಮಾದ ಡೈಲಾಗ್‌ಗಳನ್ನು ನೀಡಿ ಓದಲು ಹೇಳಿದರು. ಅಂತೆಯೇ ನಾನು ಸಹಜವಾಗಿ ಓದಿದೆ. ಇದೇ ನಮಗೆ ಬೇಕಾಗಿರುವುದು ಎಂದರು. ಸರಿ ಎಂದು ನಾನೂ ಸಹ ಒಪ್ಪಿಕೊಂಡೆ ಹಾಗೆಯೇ ಸಿನಿಮಾ ಸಹ ಮುಗಿದು ಹೋಯಿತು. ಆದರೆ ಸಿನಿಮಾ ಬಿಡುಗಡೆ ಆದಾಗ ಸೂಪರ್ ಡೂಪರ್ ಹಿಟ್ ಆಯಿತು. ಜನ ನನ್ನನ್ನು ಗುರುತಿಸಿದರು. ಆಕೆ ಇನ್ನೂ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದು ಕೇಳಿದರು. ಹಾಗೆಯೇ ನಾನೂ ನಟಿಸುತ್ತಾ ಹೋದೆ'' ಎಂದಿದ್ದಾರೆ ರಶ್ಮಿಕಾ.

  ವೃತ್ತಿ ಜೀವನದ ಮುಖ್ಯ ಸಿನಿಮಾಗಳ್ಯಾವುವು?

  ವೃತ್ತಿ ಜೀವನದ ಮುಖ್ಯ ಸಿನಿಮಾಗಳ್ಯಾವುವು?

  ''ಕಿರಿಕ್ ಪಾರ್ಟಿ' ಬಳಿಕ ನಾನು ಪುನೀತ್ ರಾಜ್‌ಕುಮಾರ್ ಸರ್ ಜೊತೆಗೆ ಒಂದು ಸಿನಿಮಾ ಮಾಡಿದೆ ಅದಾದ ಬಳಿಕ ಗಣೇಶ್ ಅವರ ಜೊತೆಗೆ ಒಂದು ಸಿನಿಮಾ ಮಾಡಿದೆ. ಆ ನಂತರ ತೆಲುಗಿನಲ್ಲಿ ಚಲೋ ಸಿನಿಮಾ ಮಾಡಿದೆ. ಬಳಿಕ 'ಗೀತಾ ಗೋವಿಂದಂ' ಮಾಡಿದೆ ಆ ಬಳಿಕ ನಾನು ಹುಟ್ಟಿರುವುದೇ ನಟಿಸಲು ಎಂದುಕೊಂಡು ಬಿಟ್ಟೆ'' ಎಂದಿದ್ದಾರೆ ರಶ್ಮಿಕಾ. ತಮ್ಮ ಜೀವನದಲ್ಲಿ ಮುಖ್ಯವಾದ ಸಿನಿಮಾಗಳ ಬಗ್ಗೆಯೂ ಮಾತನಾಡಿರುವ ರಶ್ಮಿಕಾ, 'ಕಿರಿಕ್ ಪಾರ್ಟಿ', 'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್' ಹಾಗೂ 'ಪುಷ್ಪ' ಸಿನಿಮಾಗಳು ನನ್ನ ವೃತ್ತಿ ಜೀವನದ ಬಹುಮುಖ್ಯ ಸಿನಿಮಾಗಳು ಎಂದಿದ್ದಾರೆ.

  English summary
  Rashmika Mandanna talks about how she got her first movie Kirik Party. She said Kirik Party team desperate to cast her into the movie.
  Friday, September 30, 2022, 18:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X