ವಿಜಯ್ ದೇವರಕೊಂಡಗೆ ಕಿಸ್‌ ಮಾಡಿ ಬಹಳ ಕಷ್ಟ ಅನುಭವಿಸಿದೆ: ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಗ್ಗೆ ಹರಿದಾಷ್ಟು ಗಾಸಿಪ್ ದಕ್ಷಿಣ ಭಾರತದ ಇನ್ಯಾವುದೇ ಯುವ ತಾರಾ ಜೋಡಿಯ ಬಗ್ಗೆ ಹರಿದಾಡಿಲ್ಲ. ಹೀಗೆ ಗಾಸಿಪ್‌ ಹರಿದಾಡಲು ಕಾರಣಗಳೂ ಇವೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೆಡ್' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಎರಡೂ ಸಿನಿಮಾಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು.

ಅದರಲ್ಲಿಯೂ ಆವರೆಗೆ ತೆರೆ ಮೇಲೆ ಇನ್ಯಾವ ನಟರೊಟ್ಟಿಗೂ ಲಿಪ್‌ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆ ಹಾಟ್-ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡರು. ಹಾಗಾಗಿ ಈ ಇಬ್ಬರ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಗುಸು-ಗುಸು ಸುದ್ದಿ ಹರಿದಾಡಲು ಆರಂಭವಾಯ್ತು.

'ಗೀತಾ ಗೋವಿಂದಂ' ಹಾಗೂ ಡಿಯರ್ ಕಾಮ್ರೆಡ್ ಎರಡೂ ಸಿನಿಮಾಗಳಲ್ಲಿಯೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪರಸ್ಪರ ಚುಂಬಿಸುವ ದೃಶ್ಯಗಳಿದ್ದವು. ಇದು ರಶ್ಮಿಕಾ ಅಭಿಮಾನಿಗಳಿಗೆ ಆಶ್ಚರ್ಯ ಉಂಟು ಮಾಡಿತ್ತು. ಆದರೆ ಈ ದೃಶ್ಯಗಳಲ್ಲಿ ನಟಿಸುವುದು ಸುಲಭವಾಗಿರಲಿಲ್ಲ. ಅಲ್ಲದೆ, ಆ ದೃಶ್ಯಗಳಲ್ಲಿ ನಟಿಸಿದ್ದರಿಂದ ರಶ್ಮಿಕಾ ಮಂದಣ್ಣ ತೀವ್ರ ನೋವನ್ನು ಸಹ ಅನುಭವಿಸಬೇಕಾಯಿತಂತೆ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ನೆಟ್ಟಿಗರಿಂದ ತೀವ್ರ ಟ್ರೋಲ್ ಆಗಿದ್ದ ರಶ್ಮಿಕಾ

ನೆಟ್ಟಿಗರಿಂದ ತೀವ್ರ ಟ್ರೋಲ್ ಆಗಿದ್ದ ರಶ್ಮಿಕಾ

ರಶ್ಮಿಕಾ ಮಂದಣ್ಣ, ಲಿಪ್‌-ಲಾಕ್ ಸೀನ್‌ನಲ್ಲಿ ನಟಿಸಿದಾಗ ನೆಟ್ಟಿಗರಿಂದ ತೀವ್ರ ವಿರೋಧ ಎದುರಿಸಿದ್ದರಂತೆ. ಅದ್ಯಾವ ಮಟ್ಟಿಗೆ ಟ್ರೋಲ್ ಆಗಿದ್ದರೆಂದರೆ, ನಟನೆಯೇ ಬೇಡ ಎಂದು ನಿರ್ಧರಿಸಿದ್ದ ದಿನಗಳೂ ಇದ್ದವಂತೆ. ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ನಾನು ಬಹಳ ಕೆಟ್ಟ ಮಾತುಗಳನ್ನು ಓದುತ್ತಿದ್ದೆ. ಬಹಳ ಕೆಟ್ಟದಾಗಿ ಜನ ನನ್ನನ್ನು ಆಡಿಕೊಂಡರು. ಅದನ್ನೆಲ್ಲ ನೋಡಿ ನಾನು ಪ್ರತಿದಿನ ಅಳುತ್ತಿದ್ದೆ. ಪ್ರತಿರಾತ್ರಿ ಅಳುತ್ತಲೇ ಇರುತ್ತಿದ್ದೆ, ಕನಸುಗಳು ಸಹ ಅದೇ ರೀತಿ ಬರಲಾರಂಭಿಸಿದವು. ಒಮ್ಮೊಮ್ಮೆ ಅಳುತ್ತಲೇ ನಾನು ನಿದ್ದೆಯಿಂದ ಏಳುತ್ತದ್ದೆ'' ಎಂದಿದ್ದಾರೆ.

ಅಳುತ್ತಲೇ ಇರುತ್ತಿದ್ದೆ: ರಶ್ಮಿಕಾ ಮಂದಣ್ಣ

ಅಳುತ್ತಲೇ ಇರುತ್ತಿದ್ದೆ: ರಶ್ಮಿಕಾ ಮಂದಣ್ಣ

''ನೋವಿನಿಂದ ಕೂಡಿದ ಘಟನೆಗಳೇ ನನ್ನ ಸುತ್ತ ನಡೆಯುತ್ತಿತ್ತು, ನೋವು ತರಿಸುತ್ತಿದ್ದ ಸಂಗತಿಗಳನ್ನೇ ನಾನು ಓದುತ್ತಿದ್ದೆ. ಕೆಟ್ಟ-ಕೆಟ್ಟ ಕನಸುಗಳು ಬರುತ್ತಿದ್ದವು, ಎಲ್ಲರೂ ನನ್ನಿಂದ ದೂರಾದಂತೆ, ಎಲ್ಲರೂ ನನ್ನ ಕೈಬಿಟ್ಟು ಒಬ್ಬಂಟಿ ಮಾಡಿದಂತೆ, ಯಾರ ಸಹಾಯ ಕೇಳಿದರೂ ಯಾರೂ ಸಹಾಯ ಮಾಡದಂತೆ ಕನಸುಗಳು ಬರುತ್ತಿದ್ದವು. ಅದು ಹೇಗೆ ಅದೇ ರೀತಿಯ ಕನಸುಗಳು ಬರುತ್ತಿದ್ದವು ಗೊತ್ತಿಲ್ಲ ಆದರೆ ನಾನು ಅಳುತ್ತಲೇ ಎಚ್ಚರಗೊಳ್ಳುತ್ತಿದ್ದೆ. ಇಲ್ಲವಾದರೆ ಆ ಕನಸು ಬಂದ ಬಳಿಕ ಇಡೀ ರಾತ್ರಿ ಅಳುತ್ತಲೇ ಇರುತ್ತಿದ್ದೆ'' ಎಂದು ನೆನಪು ಮಾಡಿಕೊಂಡಿದ್ದಾರೆ ರಶ್ಮಿಕಾ.

ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ಇದನ್ನು ಅಲ್ಲಗಳೆದಿದ್ದಾರೆ. ನಾನು ಹಾಗೂ ವಿಜಯ್ ಇಬ್ಬರೂ ಒಳ್ಳೆಯ ಗೆಳೆಯರು. ನಮ್ಮಿಬ್ಬರ ಸಿನಿಮಾ ಹಿಟ್ ಆಗಿದೆ. ನಮ್ಮಿಬ್ಬರ ನಡುವೆ ಒಳ್ಳೆಯ ಕೆಮಿಸ್ಟ್ರಿ ಇದೆ ಹಾಗಾಗಿ ಜನ ಹಾಗೆ ಅಂದುಕೊಂಡಿದ್ದರು. ಆದರೆ ನಾವಿಬ್ಬರೂ ಒಳ್ಳೆಯ ಗೆಳೆಯರು. ಜನರ ಒತ್ತಾಯದ ಮೇರೆಗೆ ನಾವು ಮತ್ತೆ ಸಿನಿಮಾ ಮಾಡುತ್ತೇವೆ ಅದೂ ಪ್ರೇಮಕಥಾ ಸಿನಿಮಾವನ್ನೇ ಮಾಡುತ್ತೇವೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಬಾಲಿವುಡ್‌ನಲ್ಲಿ ಬ್ಯುಸಿ ರಶ್ಮಿಕಾ ಮಂದಣ್ಣ

ಬಾಲಿವುಡ್‌ನಲ್ಲಿ ಬ್ಯುಸಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಟಿಸಿರುವ ಎರಡು ಬಾಲಿವುಡ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿರುವ 'ಗುಡ್‌ ಬೈ' ಸಿನಿಮಾ ಇದೇ ಅಕ್ಟೋಬರ್ 7 ರಂದು ತೆರೆಗೆ ಬರಲಿದೆ. ಅದರ ಬಳಿಕ 'ಮಿಷನ್ ಮಜ್ನು' ಸಿನಿಮಾ ತೆರೆಗೆ ಬರಲಿದೆ. ಅದರ ಬಳಿಕ ಟೈಗರ್ ಶ್ರಾಫ್ ಜೊತೆಗೆ ಹೊಸದೊಂದು ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರೆ. ರಣ್ಬೀರ್ ಕಪೂರ್ ಜೊತೆಗೆ 'ಅನಿಮಲ್' ಸಿನಿಮಾದಲ್ಲಿ ರಶ್ಮಿಕಾ ಈಗಾಗಲೇ ನಟಿಸುತ್ತಿದ್ದಾರೆ. ಇವುಗಳ ಜತೊಗೆ ತಮಿಳಿನಲ್ಲಿ ವಿಜಯ್ ಜೊತೆ ವಾರಿಸು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Rashmika Mandanna talks about lip lock scene with Vijay Deverakonda. She said she receive so much hate for doing that lip lock scene.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X