'ರಶ್ಮಿಕಾ ಪ್ಲೀಸ್ ಒಂದೇ ಒಂದು ರಿಪ್ಲೇ ಕೊಡು': ಕನ್ನಡತಿ ಹಿಂದೆ ಬಿದ್ದ ತಮಿಳು ಅಭಿಮಾನಿ
'ಕರ್ನಾಟಕದ ಕ್ರಶ್' ರಶ್ಮಿಕಾ ಮಂದಣ್ಣ ಮೇಲೆ ಆಂಧ್ರ-ತೆಲಂಗಾಣದಲ್ಲೂ ಕ್ರಶ್ ಆಗಿದೆ ಅಂದ್ರೆ ನಂಬಲೇಬೇಕು. ಕನ್ನಡ ಮತ್ತು ತೆಲುಗಿನಲ್ಲಿ ಮೋಡಿ ಮಾಡುತ್ತಿರುವ ರಶ್ಮಿಕಾಗೆ ತಮಿಳಿನಲ್ಲೂ ಅಭಿಮಾನಿಗಳಿದ್ದಾರೆ. ಇಲ್ಲಿಯವರೆಗೂ ಯಾವುದೇ ತಮಿಳು ಚಿತ್ರದಲ್ಲಿ ನಟಿಸಿಲ್ಲ. ಆದರೂ ರಶ್ಮಿಕಾ ಕ್ರೇಜ್ ಕಾಲಿವುಡ್ ಗೂ ಲಗ್ಗೆಯಿಟ್ಟಿದೆ.
ತಮಿಳು ಅಭಿಮಾನಿಯೊಬ್ಬ ರಶ್ಮಿಕಾ ಮಂದಣ್ಣ ಅವರ ಬೆನ್ನು ಬಿದ್ದಿದ್ದಾನೆ. ಒಂದೇ ಒಂದು ರಿಪ್ಲೇ ಕೊಡಿ ಎಂದು ಗೋಗರಿಯುತ್ತಿದ್ದಾನೆ. ಕಳೆದ ಹದಿನೈದು ದಿನದಿಂದ ಟ್ವಿಟ್ಟರ್ ನಲ್ಲಿ ಈ ಅಭಿಮಾನಿಯ ಗೋಳು ಕೇಳುವವರೇ ಇಲ್ಲ.
ರಶ್ಮಿಕಾ, ರಶ್ಮಿಕಾ, ರಶ್ಮಿಕಾ ಎಂದು ಕಾದು ಕುಂತಿದ್ದಾನೆ. ಇನ್ನು ವಿಶೇಷ ಅಂದ್ರೆ ಕನ್ನಡದ ಕುವರಿಗಾಗಿ ಆ ಅಭಿಮಾನಿ ಕನ್ನಡವನ್ನ ಕಲಿಯುತ್ತಿದ್ದಾನಂತೆ. ಅಷ್ಟಕ್ಕೂ, ಯಾರು ಆ ಅಭಿಮಾನಿ? ಯಾಕಿಷ್ಟು ಅಭಿಮಾನ? ಮುಂದೆ ಓದಿ..

ರಶ್ಮಿಕಾ ಪ್ಲೀಸ್ ಒಂದು ರಿಪ್ಲೇ ಕೊಡಿ
ಅನಿಶ್ ಎಂಬ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವ ಯುವಕ ಮೂಲತಃ ತಮಿಳಿಗ ಎನ್ನುವುದು ವಿಶೇಷ. ತಮಿಳು ನಟ ಸೂರ್ಯ ಅವರ ಫೋಟೋವನ್ನ ಪ್ರೊಫೈಲ್ ಫೋಟೋ ಆಗಿ ಹಾಕಿಕೊಂಡಿರುವ ಈ ಯುವಕನಿಗೆ ರಶ್ಮಿಕಾ ಅಂದ್ರೆ ತುಂಬಾ ಇಷ್ಟವಂತೆ. ರಶ್ಮಿಕಾ ಅವರೇ ಒಂದು ರಿಪ್ಲೇ ಕೊಡಿ ಎಂದು ಕಾದು ಕುಳಿತಿದ್ದಾನೆ.

ಕಾದು ಕಾದು ಕಾಯುತ್ತಲೇ ಇದ್ದೇನೆ
ಡಿಯರ್ ರಶ್ಮಿಕಾ ನಾನು ನಿನಗಾಗಿ ಹೇಗೆ ಕಾಯುತ್ತಿದ್ದೇನೆ ನೋಡು ಎಂದು ಟ್ರೋಲ್ ಮಾಡಿದ್ದಾನೆ. ಮೊದಲು ನಿಂತುಕೊಂಡು, ನಂತರ ಕೂತ್ಕೊಂಡು, ನಂತರ ಮಲ್ಕೊಂಡು...ಒಟ್ನಲ್ಲಿ ನೀನು ಬರೋವರೆಗೂ ಕಾಯುತ್ತಲೇ ಇರ್ತಿನಿ ಎಂದು ಹೇಳುವಂತೆ ಮಿಸ್ಟರ್ ಬೀನ್ ಅವರ ಫೋಟೋ ಬಳಸಿ ಮನವಿ ಮಾಡಿದ್ದಾನೆ.

ಕನ್ನಡ ಕಲಿಯುತ್ತಿರುವ ಅಭಿಮಾನಿ
'ಕಳೆದ ಮೂರು ದಿನದಿಂದ ನಾನು ಕನ್ನಡ ಕಲಿಯುತ್ತಿದ್ದೇನೆ. ಕೇವಲ ನೀನಗಾಗಿ, ನೀನಗಾಗಿ ಮಾತ್ರ' ಎಂದು ಹೇಳಿರುವ ಆ ಅಭಿಮಾನಿ ಕನ್ನಡದಲ್ಲೇ ಟೈಪ್ ಮಾಡಿ ಟ್ವೀಟ್ ಮಾಡಿದ್ದಾನೆ.'ನನ್ನ ಪ್ರೀತಿಯ ಸಹೋದರಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ.' ಎಂದು ಕೇಳಿಕೊಳ್ಳುತ್ತಿದ್ದಾನೆ.

ರಶ್ಮಿಕಾ ರಿಪ್ಲೇ ಕೊಡಿ
ತನ್ನ ಅಭಿಮಾನಿ ವಿಷ್ಯಕ್ಕೆ ಯಾರಾದರೂ ಬಂದ್ರೆ ಅಷ್ಟೇ ಎಂಬ ಸಂದೇಶವನ್ನ ಈ ಹಿಂದೆಯೇ ರಶ್ಮಿಕಾ ನೀಡಿದ್ದರು. ಹೀಗಿರುವಾಗ, ತನ್ನನ್ನು ಇಷ್ಟು ಇಷ್ಟಪಡುವ ಅಭಿಮಾನಿಗೆ ನಿರಾಸೆ ಮಾಡಲ್ಲ ಅನ್ಸುತ್ತೆ. ಆ ತಮಿಳು ಅಭಿಮಾನಿಗೆ ರಿಪ್ಲೇ ಮಾಡಬಹುದು. ಕಾದು ನೋಡೋಣ.


Click it and Unblock the Notifications











