For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಮಾತಿಗೆ ಸಮಂತಾ ಫ್ಯಾನ್ಸ್ ಶಾಕ್ ಆಗಿದ್ದೇಕೆ?

  |

  ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಮತ್ತು ಕಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸೌತ್ ಸಿನಿ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿದ್ದಾರೆ. ದಿನದಿಂದದಿನಕ್ಕೆ ಉತ್ತುಂಗಕ್ಕೆ ಏರುತ್ತಿರುವ ರಶ್ಮಿಕಾ ದಿನಕೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.

  ಇತ್ತೀಚಿನ ದಿನಗಳವರೆಗೂ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ದೃಶ್ಯದ ಮೂಲಕ ಸದ್ದು ಮಾಡುತ್ತಿದ್ದ ರಶ್ಮಿಕಾ ಆ ನಂತರ ಬಾಲಿವುಡ್ ಫ್ಲೈಟ್ ಹತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಎಷ್ಟೇ ಸುದ್ದಿಗಳು ಹರಿದಾಡುತ್ತಿದ್ದರು ತಲೆಕೆಡಿಸಿಕೊಳ್ಳದ ರಶ್ಮಿಕಾ ಈಗ ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ಬಗ್ಗೆ ಹೇಳಿರುವ ಮಾತುಗಳು ಸಮಂತಾ ಅಭಿಮಾನಿಗಳಿಗೆ ಶಾಕ್ ನೀಡಿದೆ.

  ಬಾಲಿವುಡ್ ನ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ?ಬಾಲಿವುಡ್ ನ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ?

  ಹೌದು, ಇವತ್ತು ಸಮಂತಾ ಅಕ್ಕಿನೇನಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕುಟುಂಬದವರು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಸಿಕೊಳ್ಳುತ್ತಿರುವ ಸಮಂತಾಗೆ ಚಿತ್ರರಂಗದ ಅನೇಕರ ಸ್ಟಾರ್ಸ್ ಶುಭಹಾರೈಸಿದ್ದಾರೆ. ಕ್ಯೂಟ್ ನಟಿಗೆ ಶುಭ ಕೋರಿದವರಲ್ಲಿ ರಶ್ಮಿಕಾ ಕೂಡ ಒಬ್ಬರು.

  ರಶ್ಮಿಕಾ, ಸಮಂತಾ ಅವರ ಬಿಗ್ ಫ್ಯಾನ್ ಅಂತೆ. ಹೀಗಂತ ಸ್ವತಃ ರಶ್ಮಿಕಾನೆ ಹೇಳಿಕೊಂಡಿದ್ದಾರೆ. ಸಮಂತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಸಾನ್ವಿ ಹೇಳಿದ್ದು ಹೀಗೆ, 'ಹುಬ್ಬುಹಬ್ಬದ ಶುಭಾಶಯಗಳು ಸಮಂತಾ ಮೇಡಮ್. ನಿಮ್ಮ ಹುಟ್ಟುಹಬ್ಬ ಅದ್ಭುತವಾಗಿರಲಿ. ಹೆಚ್ಚು ಸಂತೋಷ ಮತ್ತು ಕೇಕ್ ಗಳಿಂದ ತುಂಬಿರಲಿ. ನಿಮ್ಮ ಅಭಿಮಾನಿ ರಶ್ಮಿಕಾ' ಟ್ವೀಟ್ ಮಾಡಿದ್ದಾರೆ.

  ರಶ್ಮಿಕಾ ಮಾತು ಕೇಳಿ ಸಮಂತಾ ಫ್ಯಾನ್ಸ್ ಅಚ್ಚರಿ ಪಟ್ಟಿದ್ದಾರೆ. ದೊಡ್ಡ ಅಭಿಮಾನಿ ಎಂದು ಹೇಳಿ ವಿಶ್ ಮಾಡಿರುವ ರಶ್ಮಿಕಾ ಅವರಿಗೆ ಸಮಂತಾ ಕಡೆಯಿಂದ 'ಧನ್ಯವಾದಗಳು ರಶ್ಮಿಕಾ' ಎನ್ನುವ ಪ್ರತಿಕ್ರಿಯೆ ಸಿಕ್ಕಿದೆ. ರಶ್ಮಿಕಾ ಸದ್ಯ ಕಾಲಿವುಡ್ ನಟ ಕಾರ್ತಿ ಜೊತೆ ಅಭಿನಯಿಸುತ್ತಿದ್ದಾರೆ.

  English summary
  Multilingual actress Rashmika Mandanna took to social media to wish Samantha Akkineni. Rashmika said that Samantha's big fan Rashmika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X