'777 ಚಾರ್ಲಿ' ಸಿನಿಮಾ ನೋಡಿ ರಶ್ಮಿಕಾ ಮಂದಣ್ಣರ ಟ್ರೋಲ್ ಮಾಡುತ್ತಿರುವ ಅಭಿಮಾನಿಗಳು

ಕನ್ನಡದ ಬಹುನಿರೀಕ್ಷಿತ ಸಿನಿಮಾ '777 ಚಾರ್ಲಿ' ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಎಲ್ಲೆಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟಿದೆ. ಚಾರ್ಲಿಯನ್ನು ಜನ ಮೆಚ್ಚಿ ಕೊಂಡಾಡುತ್ತಾ ಇದ್ದಾರೆ.

'777 ಚಾರ್ಲಿ' ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರ್ತಿದೆ. ಆದರೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇಲ್ಲ. ಆದರೂ '777 ಚಾರ್ಲಿ' ಜೊತೆಗೆ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡಿದೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾಳ ಹಳೆ ಪ್ರೇಮ್ ಕಹಾನಿ.

ಹೌದು ಯಾವಾಗ ರಕ್ಷಿತ್ ಶೆಟ್ಟಿ ವಿಚಾರ ಬಂದರೂ ಕೂಡ ಅದಕ್ಕೆ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡು ಬಿಡುತ್ತೆ. ಈಗ ಮತ್ತೆ ರಿಪೀಟ್ ಆಗಿದ್ದು, ಮತ್ತೆ ರಶ್ಮಿಕಾಳನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೂ, ಚಾರ್ಲಿ ಚಿತ್ರಕ್ಕೂ ಸಂಬಂಧ ಏನು ಎನ್ನುವುದನ್ನು ಮುಂದೆ ಓದಿ....

ಧರ್ಮನಾಗಿ ಜನ ಮನ ಗೆದ್ದ ರಕ್ಷಿತ್ ಶೆಟ್ಟಿ!

ಧರ್ಮನಾಗಿ ಜನ ಮನ ಗೆದ್ದ ರಕ್ಷಿತ್ ಶೆಟ್ಟಿ!

ನಟ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾದಲ್ಲಿ ಧರ್ಮ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಕ್ಷಿತ್ ಶೆಟ್ಟಿಯ ಅಭಿನಯಕ್ಕೆ ಜನ ಮನ ಸೋತಿದ್ದಾರೆ. ಚಿತ್ರದಲ್ಲಿನ ಧರ್ಮ ತಾನು ಪ್ರೀತಿಸುತ್ತಿರುವವರನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಕೊನೆಗೆ ಅತೀವಾವಾಗಿ ಪ್ರೀತಿಸುವ ಚಾರ್ಲಿಯನ್ನು ಕಳೆದುಕೊಳ್ಳುತ್ತಾನೆ. ಈ ಭಾವನೆಗಳನ್ನು ರಕ್ಷಿತ್ ಶೆಟ್ಟಿ ಫ್ಯಾನ್ಸ್, ರಕ್ಷಿತ್ ಲವ್ ಬ್ರೇಕಪ್ ಜೊತೆಗೆ ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ.

ರಶ್ಮಿಕಾಳನ್ನು ನಿಂದಿಸಿದ ನೆಟ್ಟಿಗರು!

ರಶ್ಮಿಕಾಳನ್ನು ನಿಂದಿಸಿದ ನೆಟ್ಟಿಗರು!

777 ಚಾರ್ಲಿ ಸಿನಿಮಾ ನೋಡಿದ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿ ಮೇಲೆಯೇ ಕರುಣೆ ಬಂದಂತಿದೆ. ಹಾಗಾಗಿ ರಶ್ಮಿಕಾಳನ್ನು ನಿಂದಿಸುತ್ತಿದ್ದಾರೆ. ಸಿನಿಮಾ ನೋಡಿ ಬಂದವರು ರಶ್ಮಿಕಾ ಬಗ್ಗೆ ಹಲವು ಮಾತುಗಳನ್ನಾಡುತ್ತಿದ್ದಾರೆ. '1 ಚಾರ್ಲಿ, 10 ರಶ್ಮಿಕಾ ಮಂದಣ್ಣಗೆ ಸಮ, ರಶ್ಮಿಕಾ ಮಂದಣ್ಣ ಈ ಚಿತ್ರ ನೋಡಿ ಬುದ್ಧಿ ಕಲಿಯ ಬೇಕು, ರಶ್ಮಿಕಾ ಹೋದರೇನು ನಾವೆಲ್ಲ ನಿಮ್ಮ ಜೊತೆಗೆ ಇರುತ್ತೇವೆ.' ಎನ್ನುವ ಕಮೆಂಟ್‌ಗಳು ಕೇಳಿ ಬಂದಿವೆ. ಆದರೆ ರಶ್ಮಿಕಾರನ್ನು ಟ್ರೋಲ್ ಮಾಡುವುದನ್ನು ರಕ್ಷಿತ್ ಶೆಟ್ಟಿ ಎಂದಿಗೂ ಬೆಂಬಲಿಸಿಲ್ಲ, ರಶ್ಮಿಕಾರನ್ನು ಟ್ರೋಲ್ ಮಾಡುವುದು ಬೇಡವೆಂದು ಹಲವಾರು ಬಾರಿ ಮನವಿ ಮಾಡಿದ್ದಾರಾದರೂ, ಜನ ಬಿಡುತ್ತಿಲ್ಲ.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಸದ್ಯದ ಈ ಪರಿಸ್ಥಿತಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಆಗಿದೆ. ರಕ್ಷಿತ್ ಶೆಟ್ಟಿ ಸಿನಿಮಾ ರಿಲೀಸ್ ಆದರೆ ರಶ್ಮಿಕಾಳನ್ನು ಟ್ರೋಲ್ ಮಾಡಲಾಗುತ್ತಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಲವ್, ಬ್ರೇಕಪ್ ಎಲ್ಲವೂ ಮುಗಿದು ಹೋದ ಅಧ್ಯಾಯ. ಇಬ್ಬರೂ ದೂರ ಆದರು ಕೂಡ ಹಾಗಾಗ ಪರಸ್ಪರರ ಬಗ್ಗೆ ಪಾಸಿಟಿವ್ ಆಗಿಯೇ ಮಾತನಾಡಿದ್ದಾರೆ. ಹಾಗಾಗಿ ರಶ್ಮಿಕಾ ಅಭಿಮಾನಿಗಳು ಕೂಡ ಈ ಪ್ರಶ್ನೆ ಮಾಡ್ತಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 777 ಚಾರ್ಲಿ ಸದ್ದು!

ಬಾಕ್ಸಾಫೀಸ್‌ನಲ್ಲಿ 777 ಚಾರ್ಲಿ ಸದ್ದು!

ಸದ್ಯ '777 ಚಾರ್ಲಿ' ಉತ್ತಮ ಸಿನಿಮಾ ಎನಿಸಿಕೊಂಡಿದೆ. ಇನ್ನು ಬಾಕ್ಸಾಫೀಸ್ ಕೂಡ ಹೆಚ್ಚು ಗಳಿಕೆ ಕಾಣುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಮೂರನೇ ದಿನಕ್ಕೆ 23 ಕೋಟಿಯ ಗಡಿದಾಟಿದೆ. ಚಿತ್ರದ ಬಗ್ಗೆ ಉತ್ತಮ ಟಾಕ್ ಇರುವ ಕಾರಣ ಮುಂದಿನ ವಾರದೊಳಗೆ ಮತ್ತಷ್ಟು ಗಳಿಕೆನ್ನು ಹೆಚ್ಚಿಸಿಕೊಳ್ಳಲಿದೆ.

More from Filmibeat

English summary
Rashmika Mandanna Troll By Rakshit Shetty Fans After Release 777 Charlie, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X