Don't Miss!
- News
ಬರಲಿವೆ ಮಿನಿ ವಂದೇ ಭಾರತ್ ರೈಲುಗಳು: ಮೋದಿ ಸರ್ಕಾರದಿಂದ ಮತ್ತೊಂದು ಗಿಫ್ಟ್- ಯಾವ ನಗರಗಳಿಗೆ ಈ ಕೊಡುಗೆ?
- Sports
ICC ODI Team Of 2022: ಐಸಿಸಿ ವರ್ಷದ ಏಕದಿನ ತಂಡಕ್ಕೆ ಅಜಂ ನಾಯಕ; ಇಬ್ಬರು ಭಾರತೀಯರಿಗೆ ಸ್ಥಾನ
- Automobiles
ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ... ಕೃತಜ್ಞತೆ ಸಲ್ಲಿಸಿದ ಕಾರ್ ಮಾಲೀಕ
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Technology
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ?... ಹಾಗಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಲ್ಲಾ ಭಾಷೆಗಳಿಗಿಂತಲೂ ಕನ್ನಡ ಮೊದಲು ಬಳಸಿದ ರಶ್ಮಿಕಾ; ಆದರೂ ತಪ್ಪಲಿಲ್ಲ ಟ್ರೋಲ್ಸ್!
ನಟಿ ರಶ್ಮಿಕಾ ಮಂದಣ್ಣ ಭಾರತದ ವಿವಿಧ ಚಿತ್ರರಂಗಗಳಲ್ಲಿ ಈಕೆಯನ್ನು ನ್ಯಾಷನಲ್ ಕ್ರಶ್, ಕ್ರಶ್ಮಿಕಾ ಎಂದೆಲ್ಲಾ ಬಣ್ಣಿಸಿದರೆ ಕನ್ನಡ ಚಿತ್ರರಂಗದ ಸಿನಿ ರಸಿಕರು ಮಾತ್ರ ಇದನ್ನು ಒಪ್ಪಲಿಲ್ಲ, ಇಂದಿಗೂ ಒಪ್ಪಿಲ್ಲ. ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗ ಪ್ರವೇಶಿಸಿದ ನಂತರದ ದಿನಗಳಲ್ಲಿ ನನಗೆ ಕನ್ನಡ ಬರುವುದಿಲ್ಲ ಎಂದು ನೀಡಿದ ಹೇಳಿಕೆ ರಶ್ಮಿಕಾ ಮೇಲೆ ಕನ್ನಡಿಗರಿಗೆ ಎಂದೂ ಮಾಸದಂತಹ ಕೋಪವನ್ನು ಹುಟ್ಟುಹಾಕಿತ್ತು.
ಹೌದು, ಕರ್ನಾಟಕದಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ದೊಡ್ಡ ಮಟ್ಟದ ವಿರೋಧ ಹುಟ್ಟುವಂತೆ ಮಾಡಿದ್ದು ಸ್ವತಃ ಆಕೆ ನೀಡಿದ ಹೇಳಿಕೆಗಳೇ. ತಮಿಳು ಚಿತ್ರವೊಂದರ ಪ್ರಮೋಷನ್ ವೇಳೆ ಕನ್ನಡ ಕೂಡ ಸರಿಯಾಗಿ ಬರುವುದಿಲ್ಲ ಎಂದು ಅರ್ಧಂಬರ್ಧ ತಮಿಳಿನಲ್ಲಿ ಹೇಳಿದ್ದ ನಟಿ ರಶ್ಮಿಕಾ ಮಂದಣ್ಣ ಸಾಲು ಮರದ ತಿಮ್ಮಕ್ಕ ಅವರಿಗೆ ಸನ್ಮಾನ ಮಾಡುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ನಿಮ್ಮದೇ ನಾಡಿನವರಾದ ಸಾಧಕಿ ಸಾಲುಮರದ ತಿಮ್ಮಕ್ಕನ ಬಗ್ಗೆ ಮಾತನಾಡಿ ಎಂದಾಗ ತುಟಿ ಬಿಚ್ಚದೇ ನಿಂತಿದ್ದರು.
ಅಷ್ಟೇ ಅಲ್ಲದೇ ಇನ್ಸ್ಟಾಗ್ರಾಮ್ ಲೈವ್ ಒಂದರಲ್ಲಿ ಕನ್ನಡ ಮಾತನಾಡಿ ಎಂದಾಗ ಕನ್ನಡ ಮಾತನಾಡ್ತೀನಿ, ಆದರೆ ಈಗ ಇಂಗ್ಲಿಷ್ ಸಾಕು ಎಂದೂ ಸಹ ರಶ್ಮಿಕಾ ಹೇಳಿಕೆ ನೀಡಿದ್ದರು. ಹೀಗೆ ರಾಜ್ಯ ಹಾಗೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ತನಗೆ ಅವಕಾಶ ನೀಡಿದ ಕನ್ನಡದ ನಿರ್ಮಾಣ ಸಂಸ್ಥೆಯ ಹೆಸರನ್ನೂ ಸಹ ಹೇಳದೇ ಮತ್ತಷ್ಟು ಟ್ರೋಲ್ ಆಗಿದ್ದರು. ಹೀಗೆ ಕನ್ನಡವನ್ನು ತಿಳಿದೋ ಅಥವಾ ತಿಳಿಯದೆಯೋ ದೂರ ಇಟ್ಟಿದ್ದ ರಶ್ಮಿಕಾ ಮಂದಣ್ಣ ಇದೀಗ ಸಂಕ್ರಾಂತಿ ಪ್ರಯುಕ್ತ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕನ್ನಡ ಬಳಸಿದ್ದಾರೆ.

ಎಲ್ಲಾ ಭಾಷೆಗಳಿಗಿಂತ ಕನ್ನಡ ಮೊದಲು
ಇಷ್ಟು ದಿನಗಳ ಕಾಲ ಶುಭ ಕೋರುವಾಗ ಕನ್ನಡ ಬಳಸುವುದಿಲ್ಲ ಎಂಬ ಕಾರಣಕ್ಕೆ ಟ್ರೋಲ್ ಆಗುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಎಲ್ಲಾ ಭಾಷೆಗಳಿಗಿಂತ ಮೊದಲು ಕನ್ನಡವನ್ನೇ ಮೊದಲು ಬಳಸಿದ್ದಾರೆ. ಸಂಕ್ರಾಂತಿಯ ಶುಭಾಶಯಗಳು ಎಂದು ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ ಕನ್ನಡದ ಬಳಿಕ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಸಹ ಶುಭ ಕೋರಿದ್ದಾರೆ.

ಕನ್ನಡ ಬಳಸಿದ್ರೂ ನಿಲ್ಲಲಿಲ್ಲ ಟ್ರೋಲ್
ಹೀಗೆ ರಶ್ಮಿಕಾ ಮಂದಣ್ಣ ಖಾತೆಯಲ್ಲಿ ದಿಢೀರ್ ಕನ್ನಡ ಕಾಣಿಸಿಕೊಂಡಿದ್ದನ್ನು ಕಂಡ ಕನ್ನಡಿಗರು ಭಿನ್ನ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಸಿದ್ದಾರೆ. ನೀನು ಏನೇ ಮಾಡಿದ್ರೂ ಸಹ ನೀನು ಮಾಡಿದ್ದನ್ನು ಹಾಗೂ ಮಾತನಾಡಿದ್ದನ್ನು ನಾವು ಮರೆತಿಲ್ಲ ಎಂದು ಬರೆದುಕೊಂಡಿರುವ ನೆಟ್ಟಿಗ ರಶ್ಮಿಕಾ ಪೋಸ್ಟ್ ಮಾಡಿದ್ದನ್ನು ಟ್ರೋಲ್ ಮಾಡಿದ್ದಾನೆ. ಇನ್ನೂ ಹಲವು ಓಹ್ ಈಗ ಕನ್ನಡ ನೆನಪಾಯ್ತಾ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದು ರಶ್ಮಿಕಾ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ನೀಡಿದ ಹಳೆ ಹೇಳಿಕೆಯನ್ನು ಮರೆಯದ ಕನ್ನಡಿಗರು ಆಕೆಯನ್ನು ಮತ್ತಷ್ಟು ದಿನಗಳ ಕಾಲ ಟ್ರೋಲ್ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎನ್ನುವುದಂತೂ ಸುಳ್ಳಲ್ಲ.

ಕೈನಲ್ಲಿಲ್ಲ ಹೆಚ್ಚು ಸಿನಿಮಾ
ಇನ್ನು ನಟಿ ರಶ್ಮಿಕಾ ಮಂದಣ್ಣ ಕೈನಲ್ಲಿ ಹೆಚ್ಚೇನೂ ಸಿನಿಮಾಗಳಿಲ್ಲ. ಕಳೆದ ವರ್ಷ ರಶ್ಮಿಕಾ ಮಂದಣ್ಣ ಸಪೋರ್ಟಿಂಗ್ ರೋಲ್‌ನಲ್ಲಿ ನಟಿಸಿದ್ದ ಚಿತ್ರ ಸೀತಾ ರಾಮಮ್ ಬಿಟ್ಟರೆ ಆಕೆಯ ಉಳಿದ ಚಿತ್ರಗಳೆಲ್ಲಾ ಮಕಾಡೆ ಮಲಗಿದ್ದವು. ಹೀಗೆ ಫ್ಲಾಪ್ ಜೋನ್‌ನಲ್ಲಿರುವ ರಶ್ಮಿಕಾ ನಟನೆಯ ವಾರಿಸು ಚಿತ್ರ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಿದ್ದು, ಒಳ್ಳೆಯ ಕಲೆಕ್ಷನ್ ಮಾಡಿದರೂ ಸಹ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ಈ ಚಿತ್ರದ ಬಳಿಕ ರಶ್ಮಿಕಾ ಕೈನಲ್ಲಿ ಮಿಷನ್ ಮಜ್ನು, ಅನಿಮಲ್ ಹಾಗೂ ಪುಷ್ಪ ದಿ ರೈಸ್ ಚಿತ್ರಗಳಿದ್ದು, ಇವುಗಳನ್ನು ಬಿಟ್ಟರೆ ಹೆಚ್ಚೇನೂ ಚಿತ್ರಗಳಿಲ್ಲ.