»   » 'ಡವ್ ರಾಣಿ' ರಶ್ಮಿಕಾ ವಿರುದ್ಧ ಸಿಟ್ಟಿಗೆದ್ದ ಟ್ರೋಲ್ ಹುಡುಗರು

'ಡವ್ ರಾಣಿ' ರಶ್ಮಿಕಾ ವಿರುದ್ಧ ಸಿಟ್ಟಿಗೆದ್ದ ಟ್ರೋಲ್ ಹುಡುಗರು

Posted By:
Subscribe to Filmibeat Kannada

''ಬೆಳಗೆದ್ದು ಯಾರ ಮುಖವ ನಾನು ನೋಡಿದೆ...'' ಹಾಡಿನಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಪರಿಸ್ಥಿತಿ ಇದೀಗ ''ಬೆಳಗೆದ್ದು ಯಾರ ಮುಖ ನೋಡಿದ್ನೋ..'' ಎಂಬಂತಾಗಿದೆ. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಶ್ಮಿಕಾ ಮಂದಣ್ಣ ಬಾಯಿಂದ ಬಂದ ಒಂದೇ ಒಂದು ಮಾತು.!

ಸ್ಯಾಂಡಲ್ ವುಡ್ ನಲ್ಲಿ 'ಮಿಸ್ಟರ್ ಶೋ ಆಫ್' ಯಾರು.? ಎಂಬ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ 'ಯಶ್' ಎಂಬ ಉತ್ತರ ನೀಡಿದ್ದರು. ಇದನ್ನ ಕೇಳಿ ಯಶ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ರಶ್ಮಿಕಾ ವಿರುದ್ಧ ಯಶ್ ಅಭಿಮಾನಿಗಳು ಸಮರ ಸಾರಿದ್ದಾರೆ.

ಇದರ ಜೊತೆಗೆ ಎಲ್ಲ ಟ್ರೋಲ್ ಪೇಜ್ ಗಳೂ ರಶ್ಮಿಕಾ ಮೇಲೆ ಸಿಟ್ಟಾಗಿವೆ. ಪರಿಣಾಮ, ರಶ್ಮಿಕಾ ಬಗ್ಗೆ ಯದ್ವಾತದ್ವಾ ಟ್ರೋಲ್ ಗಳು ಶುರು ಆಗಿವೆ. ಅಂತಹ ಕೆಲ ಆಯ್ದ ಟ್ರೋಲ್ ಗಳು ಇಲ್ಲಿವೆ, ನೋಡಿ...

ಯಶ್ ಬಗ್ಗೆ ಉರ್ಕೊಳ್ಳೋರು ಒಬ್ರಾ, ಇಬ್ರಾ.?

ನಟ ಯಶ್ ಏಳಿಗೆ ಬಗ್ಗೆ ಉರ್ಕೊಳ್ಳೋರು ಒಬ್ರಾ, ಇಬ್ರಾ.? ಯಶ್ ಕಂಡ್ರೆ ಉರ್ಕೊಳ್ಳೋರ ಪೈಕಿ ನಟಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರಂತೆ.

ಯಶ್ 'ಶೋ ಆಫ್' ಎಂದವರ ಬಾಯಿಗೆ ಬೀಗ ಹಾಕಿದ ನಿರ್ದೇಶಕ ಸಂತೋಷ್

'ವಾಂಟೆಡ್'

'ವಾಂಟೆಡ್' ಡೆಡ್ ಆರ್ ಅಲೈವ್ ಲಿಸ್ಟ್ ನಲ್ಲಿ ರಶ್ಮಿಕಾ ರವರನ್ನೂ ಸೇರಿಸಿಬಿಟ್ಟಿದ್ದಾರೆ ಯಶ್ ಅಭಿಮಾನಿಗಳು.

ರಶ್ಮಿಕಾ ಮಂದಣ್ಣ ಮಾತಿಗೆ ಕೆಂಡ ಕಾರುತ್ತಿರುವ ಯಶ್ ಅಣ್ತಮ್ಮಂದಿರು

ಯೋಗ್ಯತೆ ಬೇಕು.!

ನಟನೆ ಜೊತೆಗೆ ಸಮಾಜಕ್ಕೆ ಮಾದರಿ ಆಗಿರುವ ನಟ ಯಶ್ ಹೆಸರು ಹೇಳುವುದಕ್ಕೂ ಯೋಗ್ಯತೆ ಬೇಕು ಎಂಬುದು ಯಶ್ ಅಭಿಮಾನಿಗಳ ಅಭಿಪ್ರಾಯ.

ರಶ್ಮಿಕಾ ವಿಚಾರದಲ್ಲಿ ಅಭಿಮಾನಿಗಳಿಗೆ ಯಶ್ ಕೊಟ್ಟ ಸಂದೇಶ

ಅಯ್ಯೋ ಪಾಪ...

ಯಶ್ ಬಾಸ್ ಬಗ್ಗೆ ಕಾಮೆಂಟ್ ಮಾಡಿದ್ಮೇಲೆ ರಶ್ಮಿಕಾ ಪರಿಸ್ಥಿತಿ ಹೀಗಾಗಿದ್ಯಂತೆ..!

ಬೆಳಗೆದ್ದು ಯಾರ ಮುಖ ನೋಡಿದ್ನೋ...

'ಬೆಳಗೆದ್ದು ಯಾರ ಮುಖ ನೋಡಿದ್ನೋ..' ಅಂತ ರಶ್ಮಿಕಾ ಮುಖ ಸಪ್ಪಗೆ ಮಾಡಿಕೊಂಡಿದ್ದಾರಂತೆ.!

'ಕಿರಿಕ್' ಹುಡುಗಿಯರು.!

'ಕಿರಿಕ್ ಪಾರ್ಟಿ' ಸಿನಿಮಾ ಹಿಟ್ ಆದ್ಮೇಲೆ, ಚಿತ್ರದ ಇಬ್ಬರು ಹೀರೋಯಿನ್ ಗಳೂ ಬೇಡದ ವಿಷಯಗಳಿಗೆ ಸದ್ದು ಮಾಡಿದ್ದಾರೆ.

ಡವ್ ರಾಣಿ ರಶ್ಮಿಕಾ

ರಶ್ಮಿಕಾ ರವರಿಗೆ 'ಟ್ರೋಲ್' ಹುಡುಗರು 'ಡವ್ ರಾಣಿ' ಅಂತ ನಾಮಕರಣ ಮಾಡಿದ್ದಾರೆ.

ಕಳ್ಳಿ... ಮಳ್ಳಿ...

'ಪ್ರೇಮ್ ಅಡ್ಡ' ಚಿತ್ರದ ಹಾಡನ್ನ ರಶ್ಮಿಕಾ 'ವಿವಾದ'ಕ್ಕೆ ಸಿಂಕ್ ಮಾಡಲಾಗಿದೆ.

ಎಣ್ಣೆ ಏಟಲ್ಲಿ ಹೇಳಿದ್ರಂತೆ...

''ಯಶ್ ಮಿಸ್ಟರ್ ಶೋ ಆಫ್'' ಅಂತ ನಟಿ ರಶ್ಮಿಕಾ ಎಣ್ಣೆ ಏಟಲ್ಲಿ ಹೇಳಿದ್ದಂತೆ.

ಶೋ ಮ್ಯಾನ್.!

ಯಶ್.. ಮಿಸ್ಟರ್ ಶೋ ಮ್ಯಾನ್. ಮಿಸ್ಟರ್ ಶೋ ಆಫ್ ಅಲ್ಲ ಎಂಬುದು ಯಶ್ ಅಭಿಮಾನಿಗಳ ವಾದ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಅದನ್ನೇ ಹೇಳಿದ್ದು.!

ಯಶ್.. ಮಿಸ್ಟರ್ ಶೋ ಮ್ಯಾನ್. ಮಿಸ್ಟರ್ ಶೋ ಆಫ್ ಅಲ್ಲ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಹೇಳಿದ್ದಾರೆ.

ಕಾರಣ ಇಲ್ಲಿದೆ...

ಯಶ್ ಮಿಸ್ಟರ್ ಶೋ ಮ್ಯಾನ್ ಯಾಕೆ ಅಂತ ನಿರ್ದೇಶಕ ಸಂತೋಷ್ ಆನಂದ್ ರಾಮ್ ವಿವರಿಸಿದ್ದಾರೆ. ಅದನ್ನ ನೀವೇ ಓದಿರಿ...

ರುಬ್ಬುತ್ತಿದ್ದಾರೆ 'ಟ್ರೋಲ್' ಹುಡುಗರು

ಎಲ್ಲಾ ಟ್ರೋಲ್ ಪೇಜ್ ಗಳಲ್ಲೂ ರಶ್ಮಿಕಾ ಕುರಿತ ಟ್ರೋಲ್ ಗಳೇ ಇವೆಯಂತೆ.

ಯಶ್ ಫ್ಯಾನ್ಸ್ ನೋಡಿದ್ರೆ ರುಬ್ತಾರೆ.!

ಯಶ್ ಅಭಿಮಾನಿಗಳನ್ನ ಕಂಡ್ರೆ ರಕ್ಷಿತ್ ಶೆಟ್ಟಿಗೂ ಭಯ ಆಗ್ಬಿಟ್ಟಿದೆ.

ಅವಿತುಕೊಂಡಿರುವ ರಕ್ಷಿತ್ ಶೆಟ್ಟಿ

ಯಶ್ ಫ್ಯಾನ್ಸ್ ಜೊತೆ ಕಿರಿಕ್ ಆದ್ಮೇಲೆ ರಕ್ಷಿತ್ ಶೆಟ್ಟಿ ಕೂಡ ಅವಿತುಕೊಂಡಿದ್ದಾರಂತೆ.

'ಇವರೇ' ಕಾರಣ...

ರಶ್ಮಿಕಾ ವಿರುದ್ಧ ಯಶ್ ಫ್ಯಾನ್ಸ್ ಸಿಡಿದೇಳಲು 'ಇವರೇ' ಕಾರಣ. ನಿರೂಪಕ 'ಬೇಡದ' ಪ್ರಶ್ನೆ ಕೇಳಿ, ರಶ್ಮಿಕಾ ರವರನ್ನ ಇಕ್ಕಟ್ಟಿಗೆ ಸಿಲುಕಿಸಿದರು.

ಮಧ್ಯ ತಂದಿಡ್ಬೇಡಿ

''ನಿಮ್ಮ ಚಾನೆಲ್ ಟಿ.ಆರ್.ಪಿಗಾಗಿ ಬೇರೆಯವರ ಮಧ್ಯೆ ತಂದಿಡ್ಬೇಡಿ'' ಎಂದು ಖಾಸಗಿ ವಾಹಿನಿಗಳಲ್ಲಿ ಯಶ್ ಅಭಿಮಾನಿಗಳು ಮನವಿ ಮಾಡಿದ್ದಾರೆ.

ರಶ್ಮಿಕಾ ಯಾರು ಅನ್ನೋದೇ ಗೊತ್ತಿಲ್ಲ.!

ಯಶ್ ವಿರುದ್ಧ ರಶ್ಮಿಕಾ ಸ್ಟೇಟ್ಮೆಂಟ್ ಕೊಟ್ಮೇಲೆ, ರಶ್ಮಿಕಾ ಯಾರು ಅನ್ನೋದೇ ರಕ್ಷಿತ್ ಗೆ ಗೊತ್ತಿಲ್ವಂತೆ.

'ಅಂಕಲ್' ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಕೂಡ ಟ್ರೋಲ್ ಹುಡುಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಧಿಕಾ ಪಂಡಿತ್ ರವರನ್ನ ನೋಡಿ ಕಲಿಯಲಿ...

ಇಲ್ಲಿಯವರೆಗೂ ಯಾವುದೇ ನಟರ ಬಗ್ಗೆ ನಟಿ ರಾಧಿಕಾ ಪಂಡಿತ್ ಕೆಟ್ಟದಾಗಿ ಒಂದು ಪದ ಕೂಡ ಆಡಿಲ್ಲ.

ಇಲ್ಲಿಗೆ ಬಿಟ್ಟುಬಿಡಿ ಎಂದ ಯಶ್

'ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ' ಅಂತ ಯಶ್ ಹೇಳಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಯಶ್ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ.

English summary
Kannada Actress Rashmika Mandanna trolled in Social Media, after commenting on Yash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada