'ಗರ್ಲ್ ಬಾಸ್'ಆಗಿ ಸಾಮ್ರಾಜ್ಯ ಕಟ್ಟುವ ಕನಸಿನಲ್ಲಿ ನಟಿ ರಶ್ಮಿಕಾ ಮಂದಣ್ಣ
ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಶನ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಲಾಕ್ ಡೌನ್ ನಲ್ಲಿ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಕುಟುಂಬದ ಜೊತೆ ಇರುವ ಕಿರಿಕ್ ಸುಂದರಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ವೀಟ್ ಆಗಿರುವ ರಶ್ಮಿಕಾ ಇತ್ತೀಚಿಗೆ ಸಾಮ್ರಾಜ್ಯ ಕಟ್ಟುವ ಆಸೆಯನ್ನು ಹೊರಹಾಕಿದ್ದಾರೆ.
Recommended Video
ಇನ್ಸ್ಟಾಗ್ರಾಮ್ ನಲ್ಲಿ ರಶ್ಮಿಕಾ ಒಂದು ಫೋಟೋ ಶೇರ್ ಮಾಡಿ, ಫೋಟೋ ಜೊತೆ "ಗರ್ಲ್ ಬಾಸ್ ಸಾಮ್ರಾಜ್ಯವನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾಳೆ" ಎಂದು ಕ್ಯಾಪ್ಷನ್ ಹಾಕಿದ್ದಾರೆ. ರಶ್ಮಿಕಾ ಪೋಸ್ಟ್ ಗೆ ಅಭಿಮಾನಿಗಳ ಜೊತೆಗೆ ಸಾಕಷ್ಟು ನಟಿಯರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಈಗಾಗಲೆ ಸಾಕಷ್ಟು ಹೆಸರು ಮಾಡಿರುವ ರಶ್ಮಿಕಾ ಇನ್ನೂ ಎತ್ತರಕ್ಕೆ ಬೆಳೆಯುಲು ಶ್ರಮಿಸುತ್ತಿದ್ದಾರೆ. ರಶ್ಮಿಕಾ ಕೇವಲ ನಟಿಯಾಗಿ ಗುತಿಸಿಕೊಳ್ಳಲು ಇಷ್ಟಪಡದೆ. ತಮ್ಮದೆ ಆದ ತಂಡ ಕಟ್ಟಿಕೊಂಡು ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಈಗಾಗಲೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಕಥೆ ಮಾಡಿ ಕಳುಹಿಸುವಂತೆಯೂ ಹೇಳಿದ್ದಾರೆ.

ಚಿತ್ರರಂಗದಲ್ಲಿ ಹಂತಹಂತವಾಗಿ ವ್ಯಾಪ್ತಿ ವಿಸ್ತರಿಕೊಳ್ಳುತ್ತಿರುವ ರಶ್ಮಿಕಾ ಸಾಮ್ರಾಜ್ಯ ಕಟ್ಟುವುದರಲ್ಲಿ ಯಾವುದೆ ಅನುಮಾನವಿಲ್ಲ. ಈಗಾಗಲೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಈಗಾಗಲೆ ಕಾರ್ತಿ ಜೊತೆ ಸುಲ್ತಾನ್ ಸಿನಿಮಾ ಮಾಡುತ್ತಿದ್ದು, ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.
ಇನ್ನೂ ತೆಲುಗಿನಲ್ಲಿ ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ರಶ್ಮಿಕಾ ಅಭಿನಯದ ಪೊಗರು ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ.


Click it and Unblock the Notifications











