Rashmika Mandanna: 'ಜೇಮ್ಸ್' ಬಿಟ್ಟು 'ಕೆಜಿಎಫ್ 2' ಟ್ರೈಲರ್ ಮೆಚ್ಚಿ, ಟ್ರೋಲ್ ಆದ ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಕ್ರಶ್ ಪಟ್ಟಕ್ಕೇರಿ, ಸಾಲು ಸಾಲು ಚಿತ್ರಗಳನ್ನು ಮಾಡುತ್ತಾ ಇದ್ದಾರೆ. ಆದರೆ ಕನ್ನಡದಿಂದ ರಶ್ಮಿಕಾ ದೂರಾಗಿದ್ದೇ, ಆಗಿದ್ದು ಕನ್ನಡಿಗರು ಸದಾ ಆಕೆಯನ್ನು ಯಾವಾಗ ಕನ್ನಡ ಚಿತ್ರ ಮಾಡುತ್ತೀರಿ ಎಂದು ಸದಾ ಪ್ರಶ್ನೆ ಮಾಡುತ್ತಾ ಇರುತ್ತಾರೆ. ಆದರೆ ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಜೊತೆಗೆ ಕನ್ನಡ ಚಿತ್ರಗಳ ಬಗ್ಗೆ ಯಾವುದೇ ಸಮಯದಲ್ಲೂ ಮಾತನಾಡುವುದಿಲ್ಲ ಎನ್ನುವ ಕಂಪ್ಲೇಟ್ ಇದೆ.

ಈಗ ರಶ್ಮಿಕಾ ಕನ್ನಡದ 'ಕೆಜಿಎಫ್ 2' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಟ್ರೈಲರ್ ನೋಡಿದ ನಟಿ ರಶ್ಮಿಕಾ ಮಂದಣ್ಣ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ನಟ ಯಶ್ ಮತ್ತು ಚಿತ್ರತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಆದರೆ ರಶ್ಮಿಕಾ ಟ್ವೀಟ್ ಮಾಡುತ್ತಾ ಇದ್ದ ಹಾಗೆ ಅದೂ ಟ್ರೋಲ್ ಆಗಿದೆ. ಹಲವು ದಿನಗಳ ಬಳಿಕಾ ರಶ್ಮಿಕಾ ಕನ್ನಡ ಚಿತ್ರದ ಬಗ್ಗೆ ಮಾತನಾಡಿದ್ದು ಹಲವರ ಅಚ್ಚರಿಗೆ ಕಾರಣ ಆಗಿದೆ. ಹಾಗಾಗಿ ರಶ್ಮಿಕಾ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟ್ರೋಲ್ ಆಗುತ್ತಿದೆ. 'ಕೆಜಿಎಫ್ 2' ಟ್ರೈಲರ್‌ನಲ್ಲಿ ಇರುವ ಡೈಲಾಗ್‌ಗಳನ್ನು ಬಳಸಿಯೇ ಟ್ರೋಲ್ ಮಾಡಲಾಗುತ್ತಿದೆ.

Recommended Video

ಬ್ರೇಕಿಂಗ್ ನ್ಯೂಸ್, ರಶ್ಮಿಕಾ ಮಂದಣ್ಣಗೆ ತುಂಬಾ ಇಷ್ಟ ಆಗಿದೆ ಕನ್ನಡದ KGF 2 ಟ್ರೈಲರ್ | Yash | Rashmika Mandanna

'ಕೆಜಿಎಫ್ 2' ಟ್ರೈಲರ್‌ ಮೆಚ್ಚಿ ರಶ್ಮಿಕಾ ಟ್ವೀಟ್!

ನಟಿ ರಶ್ಮಿಕಾ ಮಂದಣ್ಣ 'ಕೆಜಿಎಫ್ 2' ಟ್ರೈಲರ್‌ ನೋಡಿ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಕೆಜಿಎಫ್ 2' ಚಿತ್ರದ ಟ್ರೈಲರ್ ಲಿಂಕ್ ಶೇರ್ ಮಾಡಿ "ಹೇಳಲು ಅಸಾಧ್ಯ, ಟ್ರೈಲರ್ ತುಂಬಾ ಇಷ್ಟ ಆಯ್ತು" ಎಂದು ಬರೆದುಕೊಂಡು ಬೆಂಕಿ ಮತ್ತು ಬಾಂಬ್ ಚಿಹ್ನೆಗಳನ್ನು ಹಾಕಿದ್ದಾರೆ. ಜೊತೆಗೆ ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್‌ಗೆ ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ. ರಶ್ಮಿಕಾ 'ಕೆಜಿಎಫ್ 2' ಟ್ರೈಲರ್ ಬಗ್ಗೆ ಮಾತನಾಡುತ್ತಿದ್ದ ಹಾಗೆ, ಟ್ವೀಟ್ ವೈರಲ್ ಆಗಿದೆ. ಸಾಕಷ್ಟು ಕಮೆಂಟ್‌ಗಳು ಕೂಡ ಬಂದಿವೆ.

'ಜೇಮ್ಸ್' ಬಿಟ್ಟು 'ಕೆಜಿಎಫ್ 2' ಬಗ್ಗೆ ರಶ್ಮಿಕಾ ಮಾತು!

'ಜೇಮ್ಸ್' ಬಿಟ್ಟು 'ಕೆಜಿಎಫ್ 2' ಬಗ್ಗೆ ರಶ್ಮಿಕಾ ಮಾತು!

ನಟಿ ರಶ್ಮಿಕಾ ಮಂದಣ್ಣ ನಟ ಪುನೀತ್ ರಾಜ್‌ಕುಮಾರ್ ಜೊತೆಗೆ ಒಂದು ಸಿನಿಮಾ ಮಾಡಿದ್ದಾರೆ. ಸಿನಿಮಾ ಮಾಡಿರಲೇಬೇಕು ಅಂತೇನಿಲ್ಲ. ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಗ್ಗೆ ರಶ್ಮಿಕಾ ಏನನ್ನೂ ಮಾತನಾಡಿಲ್ಲ ಎಂದು ಅಪ್ಪು ಅಭಿಮಾನಿಗಳು ಗರಂ ಆಗಿದ್ದರು. ಕನ್ನಡದ ಒಂದು ಚಿತ್ರದ ಬಗ್ಗೆ ಮಾತನಾಡಲು ಈಕೆ ತಯಾರಿಲ್ಲ ಎಂದು ಕಮೆಂಟ್ ಮಾಡಿದ್ದರು. ಈಗ 'ಕೆಜಿಎಫ್ 2' ಬಗ್ಗೆ ಮಾತನಾಡಿರುದಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅದರಲ್ಲೂ ರಶ್ಮಿಕಾ ಕನ್ನಡದ ಟ್ರೈಲರ್ ಲಿಂಗ್ ಹಂಚಿಕೊಂಡಿದ್ದಕ್ಕೆ, ಆಕೆಯ ತೆಲುಗು ಅಭಿಮಾನಿಗಳು, ತೆಲುಗು ಟ್ರೈಲರ್ ಯಾಕೆ ಹಂಚಿಕೊಂಡಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ರಶ್ಮಿಕಾ, ರಶ್ಮಿಕಾ, ರಶ್ಮಿಕಾ, I Dont Like It!

ರಶ್ಮಿಕಾ, ರಶ್ಮಿಕಾ, ರಶ್ಮಿಕಾ, I Dont Like It!

ರಶ್ಮಿಕಾ ಅಷ್ಟಾಗಿ ಕನ್ನಡ ಚಿತ್ರರಂಗದಲ್ಲಿ ನಡೆಯುವ ಬೆಳವಣಿಗೆಯ ಬಗ್ಗೆ ಮಾತನಾಡುವುದಿಲ್ಲ. ಹಾಗಾಗಿ 'ಕೆಜಿಎಫ್ 2' ಟ್ರೈಲರ್ ಹಂಚಿಕೊಂಡು ಟ್ರೋಲ್ ಆಗಿದ್ದಾರೆ. ಟ್ರೈಲರ್‌ನಲ್ಲಿ ಇರುವ 'ವೈಲೆನ್ಸ್.. ವೈಲೆನ್ಸ್' ಡೈಲಾಗ್‌ ಅನ್ನು ರಶ್ಮಿಕಾಗೆ ಶಿಫ್ಟ್ ಮಾಡಿದ್ದಾರೆ. "ರಶ್ಮಿಕಾ... ರಶ್ಮಿಕಾ... ರಶ್ಮಿಕಾ.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್... ಬಟ್ ರಶ್ಮಿಕಾ ಲೈಕ್ಸ್ ಮಿ... ಐ ಕಾನ್ಟ್ ಅವಾಯ್ಡ್" ಎಂದು ಬರೆಯಲಾಗಿದೆ. ಈ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಶ್ ಬಗ್ಗೆ ಕಮೆಂಟ್ ಮಾಡಿದ್ದ ರಶ್ಮಿಕಾ!

ಯಶ್ ಬಗ್ಗೆ ಕಮೆಂಟ್ ಮಾಡಿದ್ದ ರಶ್ಮಿಕಾ!

ಈ ಹಿಂದೆ ಕನ್ನಡ ಚಿತ್ರಗಳಲ್ಲಿ ಬ್ಯುಸಿ ಇದ್ದ ನಟ ರಶ್ಮಿಕಾ ಮಂದಣ್ಣ ಯಶ್ ಬಗ್ಗೆ ಬೇಡದ ಕಮೆಂಟ್ ಮಾಡಿ ವಿವಾದ ಹುಟ್ಟು ಹಾಕಿದ್ದರು. ರಕ್ಷಿತ್ ಶೆಟ್ಟಿ ಜೊತೆಗೆ ಸಂದರ್ಶನ ಒಂದರಲ್ಲಿ ಭಾಗಿ ಆಗಿದ್ದಾಗ, ಶೋ ಆಫ್ ಹೀರೊ ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಆಗ ರಶ್ಮಿಕಾ ಅದು ಯಶ್ ಎಂದಿದ್ದರು. ಆ ಬಳಿಕ ಯಶ್ ಅಭಿಮಾನಿಗಳು ರಶ್ಮಿಕಾ ವಿರುದ್ಧ ತಿರುಗಿ ಬಿದ್ದಿದ್ದರು. ಆ ಬಳಿಕ ರಶ್ಮಿಕಾ, ಯಶ್ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

More from Filmibeat

English summary
Rashmika Mandanna Tweet About KGF 2 Trailer Gets Troll Again With KGF 2 Dialogue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X