For Quick Alerts
  ALLOW NOTIFICATIONS  
  For Daily Alerts

  'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಯಾವುದು?

  |

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಸಿನಿಮಾ ಪ್ರಪಂಚದಲ್ಲಿ ಬೇಡಿಕೆಯ ನಟಿ. 2016ರಲ್ಲಿ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಈಗ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ.

  5 ವರ್ಷದಲ್ಲಿ 12 ಸಿನಿಮಾ. ಬಹುತೇಕ ಎಲ್ಲವೂ ಹಿಟ್ ಹಾಗೂ ಎಲ್ಲವೂ ಸ್ಟಾರ್ ನಟರ ಸಿನಿಮಾಗಳು ಎನ್ನುವುದು ವಿಶೇಷ. ಕನ್ನಡದಲ್ಲಿ ದರ್ಶನ್, ಪುನೀತ್ ರಾಜ್ ಕುಮಾರ್, ಗಣೇಶ್, ಧ್ರುವ ಸರ್ಜಾ ಜೊತೆ ನಟಿಸಿದರು. ತೆಲುಗಿನಲ್ಲಿ ಮಹೇಶ್ ಬಾಬು, ನಾನಿ, ವಿಜಯ್ ದೇವರಕೊಂಡ, ನಿತೀನ್ ಹಾಗೂ ತಮಿಳಿನಲ್ಲಿ ಕಾರ್ತಿ ಜೊತೆ ಅಭಿನಯಿಸಿದರು.

  ರಶ್ಮಿಕಾ ಮಂದಣ್ಣ ಜೊತೆ ಚಿತ್ರೀಕರಣ ಆರಂಭಿಸಿದ ಸಿದ್ಧಾರ್ಥ್ ಮಲ್ಹೋತ್ರಾ

  ಈಗ ಬಾಲಿವುಡ್‌ಗೆ ಹಾರಿರುವ ರಶ್ಮಿಕಾ ಬಿಟೌನ್‌ನಲ್ಲೂ ಮೋಡಿ ಮಾಡಲು ಕಾತುರರಾಗಿದ್ದಾರೆ. ಇಂದು (ಏಪ್ರಿಲ್ 5) ರಶ್ಮಿಕಾ ಹುಟ್ಟುಹಬ್ಬ. ಬರ್ತಡೇಯ ದಿನವೂ ಹಿಂದಿ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಮುಂಬರುವ ಚಿತ್ರಗಳು ಯಾವುದು? ಯಾವ ಯಾವ ಸಿನಿಮಾದಲ್ಲಿ ಮಂದಣ್ಣ ನಟಿಸುತ್ತಿದ್ದಾರೆ. ಮುಂದೆ ಓದಿ...

  'ಪುಷ್ಪ' ತೆರೆಗೆ ಬರಬೇಕಿದೆ

  'ಪುಷ್ಪ' ತೆರೆಗೆ ಬರಬೇಕಿದೆ

  ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಅಲ್ಲು ಅರ್ಜುನ್ ಜೊತೆ ಮೊದಲ ಸಿನಿಮಾ ಆಗಿರುವುದರಿಂದ ರಶ್ಮಿಕಾಗೆ ಇದು ವಿಶೇಷ. ಆಗಸ್ಟ್ 13 ರಂದು 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ.

  'ಮಿಷನ್ ಮಜ್ನು' ಸಿನಿಮಾ

  'ಮಿಷನ್ ಮಜ್ನು' ಸಿನಿಮಾ

  ಇಷ್ಟು ದಿನ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ ಫ್ಲೈಟ್ ಹತ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರ ನಟಿಸುತ್ತಿರುವ 'ಮಿಷನ್ ಮಜ್ನು' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ. ಇದು ರಶ್ಮಿಕಾಗೆ ಮೊದಲ ಹಿಂದಿ ಚಿತ್ರ. ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ. ರಿಲೀಸ್ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಇಲ್ಲ.

  'ಆ ನಟನ ಜೊತೆ ಸಿನಿಮಾ ಮಾಡ್ತೀನಿ ಅಂತ ಯಾವತ್ತು ಅಂದುಕೊಂಡಿರಲಿಲ್ಲ'- ರಶ್ಮಿಕಾ

  ಶರ್ವಾನಂದ್ ಜೊತೆ ಸಿನಿಮಾ

  ಶರ್ವಾನಂದ್ ಜೊತೆ ಸಿನಿಮಾ

  ತೆಲುಗು ನಟ ಶರ್ವಾನಂದ್ ನಾಯಕನಾಗಿ ನಟಿಸುತ್ತಿರುವ 'ಆಡವಳ್ಳು ಮೀಕು ಜೋಹರ್ಲು' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಿರುಮಲ ಕಿಶೋರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು. ರಶ್ಮಿಕಾ ಬರ್ತಡೇ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

  ಬಿಗ್ ಬಿ ಜೊತೆ ಗುಡ್ ಬೈ

  ಬಿಗ್ ಬಿ ಜೊತೆ ಗುಡ್ ಬೈ

  ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಗುಡ್ ಬೈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಇತ್ತೀಚಿಗಷ್ಟೆ 'ಗುಡ್ ಬೈ' ಚಿತ್ರದ ಶೂಟಿಂಗ್ ಶುರುವಾಗಿದೆ. ಇದು ರಶ್ಮಿಕಾಗೆ ಎರಡನೇ ಬಾಲಿವುಡ್ ಚಿತ್ರ.

  ರಾಮ್ ಚರಣ್-ಎನ್‌ಟಿಆರ್ ಜೊತೆ ಸಿನಿಮಾ?

  ರಾಮ್ ಚರಣ್-ಎನ್‌ಟಿಆರ್ ಜೊತೆ ಸಿನಿಮಾ?

  ಸದ್ಯಕ್ಕೆ ನಾಲ್ಕು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇನ್ನುಳಿದಂತೆ ಬೇರೆ ಯಾವ ಪ್ರಾಜೆಕ್ಟ್ ಸಹ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ರಾಮ್ ಚರಣ್ ತೇಜ-ಶಂಕರ್ ಕಾಂಬಿನೇಷನ್ ಚಿತ್ರಕ್ಕಾಗಿ ರಶ್ಮಿಕಾ ಹೆಸರು ಸದ್ದು ಮಾಡ್ತಿದೆ. ತಮಿಳು ನಟ ವಿಜಯ್ ಚಿತ್ರದಲ್ಲೂ ರಶ್ಮಿಕಾ ಹೆಸರು ಕೇಳಿ ಬರ್ತಿದೆ. ಮತ್ತೊಂದೆಡೆ ಜೂನಿಯರ್ ಎನ್‌ಟಿಆರ್ ಮುಂದಿನ ಸಿನಿಮಾದಲ್ಲೂ ರಶ್ಮಿಕಾ ಹೆಸರಿದೆ. ಆದರೆ, ಅಧಿಕೃತವಾಗಿ ಯಾವುದೇ ಓಕೆ ಆಗಿಲ್ಲ.

  ಕನ್ನಡದಲ್ಲಿ ಸದ್ಯಕ್ಕಿಲ್ಲ ಸಿನಿಮಾ

  ಕನ್ನಡದಲ್ಲಿ ಸದ್ಯಕ್ಕಿಲ್ಲ ಸಿನಿಮಾ

  ಕೊನೆಯದಾಗಿ ಧ್ರುವ ಸರ್ಜಾ ಜೊತೆ 'ಪೊಗರು' ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸಿದ್ದರು. ಇದು ಎರಡು ವರ್ಷದ ಹಿಂದಿನ ಕಮಿಟ್‌ಮೆಂಟ್‌ ಆಗಿತ್ತು. ಈ ಚಿತ್ರದ ಬಳಿಕ ಬೇರೆ ಯಾವುದೇ ಕನ್ನಡ ಸಿನಿಮಾ ಕೈಗೆತ್ತಿಕೊಂಡಿಲ್ಲ. ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ ಹೊರತು ಅಧಿಕೃತವಾಗಿ ಯಾವುದು ಪಕ್ಕಾ ಆಗಿಲ್ಲ.

  Puneeth Rajkumar ಗೆ ಅನ್ಯಾಯ ಮಾಡಿದ ರಾಜ್ಯ ಸರ್ಕಾರ | Filmibeat Kannada
  English summary
  Kannada Actress Rashmika Mandanna celebrating her 25th birthday. check out the Her Upcoming Movies List.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X