ಎಲ್ಲಿದ್ದೀರಾ ರಕ್ಷಿತ್? ಮಾಜಿ ಪ್ರೇಮಿಯ ಬೆನ್ನು ಬಿಡದ ರಶ್ಮಿಕಾ ; ಆಗ ನನಗೆ ಆಯ್ಕೆಗಳೇ ಇರಲಿಲ್ಲ ಎಂದ ಹೈದರಾಬಾದ್ ಸೊಸೆ
''ಕಿರಿಕ್ ಪಾರ್ಟಿ'' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ ರಶ್ಮಿಕಾ ಮಂದಣ್ಣ, ಆ ನಂತರ.. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ನ್ಯಾಷನಲ್ ಕ್ರಷ್ ಆದರು. ಬೆರಳಣಿಕೆಯ ದಿನಗಳಲ್ಲಿಯೇ ಬಹುಬೇಡಿಕೆಯ ನಾಯಕಿಯಾಗಿ ಬೆಳೆದರು. ರಶ್ಮಿಕಾ ಮಂದಣ್ಣ ಅವರ ಈ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದೇ. ಆದರೆ.. ಚೊಚ್ಚಲ ಚಿತ್ರದಲ್ಲಿಯೇ ಸಿಕ್ಕ ಅಭೂತಪೂರ್ವ ಗೆಲುವನ್ನೇ ಟ್ರಂಪ್ ಕಾರ್ಡ್ ಆಗಿ..
ಉಪಯೋಗ ಮಾಡಿ ಬೇರೆ ಭಾಷೆಯ ಪಾಲಾದ ರಶ್ಮಿಕಾ ಆ ನಂತರ ಕನ್ನಡವನ್ನು ತಾತ್ಸಾರ ಮಾಡಲು ಶುರು ಮಾಡಿದರು. ಯಶ್ ಬಗ್ಗೆ ಆರಂಭದಲ್ಲಿ ಹಗುರವಾಗಿ ಮಾತನಾಡಿದ್ದ ರಶ್ಮಿಕಾ ತೆಲುಗಿನಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆಯುತ್ತಿದ್ದಂತೆಯೇ ಮನಸಾರೆ ಮೆಚ್ಚಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಅವರನ್ನು ಎಡಗಾಲಿನಲ್ಲಿ ಒದ್ದರು.

ಈ ಕ್ಷಣಕ್ಕೂ ರಕ್ಷಿತ್ ಮತ್ತು ರಶ್ಮಿಕಾ ಸಂಬಂಧ ಮುರಿದು ಬಿದ್ದಿದ್ದೇಕೆ ಎನ್ನುವ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ನಿಖರವಾದ ಉತ್ತರ ಇವರಿಬ್ಬರಿಗೆ ಗೊತ್ತಾದರೂ, ಮದುವೆ ಮುರಿದು ಬಿದ್ದು 7 ವರ್ಷಗಳಾಗಿವೆ.
ಈ 7 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಸಾಕ್ಷಾತ್ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ ಗಡ್ಡ ಬಿಟ್ಟುಕೊಂಡು ತಮ್ಮ ಪಾಡಿಗೆ ತಾವು ಇದ್ದಾರೆ. ಇಲ್ಲಿಯವರೆಗೆ ತಮ್ಮ ಹಳೆಯ ಪ್ರೀತಿಯ ಘನತೆ ಕಾಪಾಡಿಕೊಂಡು ಬಂದಿದ್ದಾರೆ. ಒಂದು ದಿನವೂ ಕೂಡ ಮಾಧ್ಯಮಗಳ ಎದುರು ರಶ್ಮಿಕಾ ಮಂದಣ್ಣ ಬಗ್ಗೆ ರಕ್ಷಿತ್ ಹಗುರವಾಗಿ ಮಾತನಾಡಿಲ್ಲ.
ಆದರೆ.. ಅದ್ಯಾಕೋ ಗೊತ್ತಿಲ್ಲ. 07 ವರ್ಷಗಳ ನಂತರ ಹೈದರಾಬಾದ್‌ನ ಸೊಸೆ ರಶ್ಮಿಕಾ ಮಾತ್ರ ಏಕಾಏಕಿ ರಕ್ಷಿತ್ ಶೆಟ್ಟಿಯ ವಿರುದ್ಧ ಸಮರ ಸಾರಿದ್ದಾರೆ. ಕುಂತಲ್ಲಿ.. ನಿಂತಲ್ಲಿ.. ರಕ್ಷಿತ್ ಶೆಟ್ಟಿಯ ಹೆಸರೇಳದೇ ತೇಜೋವಧೆ ಮಾಡುತ್ತಿದ್ದಾರೆ. ಹಳೆಯ ಪ್ರಿಯಕರ ತನಗೆ ನರಕ ದರ್ಶನ ಮಾಡಿಸಿದ್ದಾನೆ ಎಂಬರ್ಥದಲ್ಲಿ ಮಾತನಾಡುತ್ತ ಬರುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಆಂಧ್ರದ ಮಾತಿನ ಮಲ್ಲಿ ಸುಮಾಗೆ ರಶ್ಮಿಕಾ ನೀಡಿದ ಸಂದರ್ಶನ.
ಹೌದು, ಸುಮಾ ಕನಕಾಲ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ಯಾರ ಜೊತೆ ಇರಬೇಕು ಎನ್ನುವುದನ್ನು ನೀವೆ ಅಳೆದು ತೂಗಿ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ. ಒಮ್ಮೊಮ್ಮೆ ಎಂತಹ ಸನ್ನಿವೇಶದಲ್ಲಿ ಸಿಲುಕಿಕೊಳ್ಳಬೇಕಾಗುತ್ತೆ ಎಂದರೆ ಅಲ್ಲಿ ನಮಗೆ ಬೇರೆ ಆಯ್ಕೆಯೇ ಇರುವುದಿಲ್ಲ ಎಂದು ಹೇಳಿರುವ ರಶ್ಮಿಕಾ ಅವಕಾಶಗಳಿಗೆ ಜಾಗವೇ ಇರದಂತೆ ಆಗಿಬಿಡುತ್ತದೆ. ನಾನು ಹಿಂದೊಮ್ಮೆ ಇಂತಹ ಸಂಬಂಧದಲ್ಲಿದ್ದೆ ಎಂದು ಹೇಳಿದ್ದಾರೆ.

ಮುಂದುವರೆದು ಈಗ ನನಗೆ ಒಬ್ಬ ಸಂಗಾತಿ ಇದ್ದಾನೆ. ಇಲ್ಲಿ ನನಗೆ ನನ್ನದೇ ಆಯ್ಕೆಗಳಿವೆ. ನನ್ನತನಕ್ಕೆ ಅವಕಾಶ ಇದೆ. ನಾನು ತುಂಬಾನೇ ಖುಷಿಯಾಗಿದ್ದೇನೆ ಈಗ ಎಂದು ಹೇಳಿರುವ ರಶ್ಮಿಕಾ, ನನ್ನ ಪಾರ್ಟನರ್ ಕೂಡ ಖುಷಿಯಾಗಿದ್ದಾನೆ ನಮ್ಮ ಅಕ್ಕ ಪಕ್ಕ ಇದ್ದವರು ನಮ್ಮ ಖುಷಿಯನ್ನು ಕಂಡು ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಮೂಲಕ ರಕ್ಷಿತ್ ಶೆಟ್ಟಿ ಅವರ ಹೆಸರೇಳದೇ ಮತ್ತೊಮ್ಮೆ ಆರೋಪಗಳ ಸುರಿಮಳೆ ಮಾಡಿದ್ದಾರೆ. ತಮ್ಮ ನಿರ್ಧಾರವನ್ನು ರಕ್ಷಿತ್ ತಮ್ಮ ಮೇಲೆ ಹೇರುತ್ತಿದ್ದರು, ನನ್ನತನಕ್ಕೆ ಅಲ್ಲಿ ಅವಕಾಶ ಇರಲಿಲ್ಲ, ನನಗೆ ಆಯ್ಕೆಗಳಿರಲಿಲ್ಲ, ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಹೀಗೆ ಮಾತನಾಡಿರುವ ರಶ್ಮಿಕಾ ಇದೇ ಸಂದರ್ಭದಲ್ಲಿ ನನ್ನೆಲ್ಲಾ ನೋವುಗಳಿಗೆ ವಿಜಯ್ ದೇವರಕೊಂಡ ಮುಲಾಮು ಹಚ್ಚಿದ್ದಾರೆ ಎಂದು ಭಾವುಕರಾಗಿದ್ದಾರೆ.
ಹೀಗೆ ರಶ್ಮಿಕಾ ಮಂದಣ್ಣ ಸದ್ಯ ಪದೇ ಪದೇ ತಮ್ಮ ಮಾಜಿ ಪ್ರೇಮಿಯ ಕುರಿತು ಮಾತನಾಡುತ್ತಿರುವ ಹಿನ್ನೆಲೆ, ಸಹಜವಾಗಿ ಹಲವರು ಕೆರಳಿದ್ದಾರೆ. ಇಷ್ಟೆಲ್ಲಾ ರಶ್ಮಿಕಾ ಮಾತನಾಡುತ್ತಿದ್ದರೂ ರಕ್ಷಿತ್ ಶೆಟ್ಟಿ ಯಾಕೆ ಮೌನ ಮುರಿಯುತ್ತಿಲ್ಲ ಎಂದು ಚರ್ಚೆ ಮಾಡುತ್ತಿದ್ದಾರೆ. ಸಮಾಜದ ದೃಷ್ಟಿಯಲ್ಲಿ ನೀವು ಖಳನಾಯಕನಾಗುವ ಮೊದಲು ಮೌನ ಮುರಿದು ಮಾತನಾಡಿ ರಕ್ಷಿತ್ ಶೆಟ್ಟಿ ಎಂದು ಮನವಿ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿದ್ದೀರಾ ರಕ್ಷಿತ್ ಶೆಟ್ಟಿ ಎಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಕಾಲ ಮಿಂಚುವ ಮುನ್ನ ರಕ್ಷಿತ್ ತಮ್ಮ ಸೈಡ್‌ನ ಸ್ಟೋರಿಯನ್ನು ಹೇಳುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











