ತಮಿಳಿನ ಈ ಇಬ್ಬರು ನಟರ ಜೊತೆ ನಟಿಸಬೇಕಂತೆ ರಶ್ಮಿಕಾ
ಕನ್ನಡ, ತೆಲುಗಿನಲ್ಲಿ ಯಶಸ್ಸು ಕಂಡಿರುವ ನಟಿ ರಶ್ಮಿಕಾ ಮಂದಣ್ಣ ಈಗ ತಮಿಳಿನಲ್ಲಿ ಸದ್ದು ಮಾಡ್ತಿದ್ದಾರೆ. ಗೀತಾ ಗೋವಿಂದಂ, ಕಿರಿಕ್ ಪಾರ್ಟಿ ಚಿತ್ರಗಳ ಡಬ್ಬಿಂಗ್ ವರ್ಷನ್ ಮೂಲಕವೇ ಒಂದು ವರ್ಗದ ಅಭಿಮಾನಿಗಳನ್ನ ಹೊಂದಿದ್ದ ರಶ್ಮಿಕಾ, ಈಗ ತಮಿಳಿನಲ್ಲಿ ಚೊಚ್ಚಲ ಸಿನಿಮಾ ಮಾಡ್ತಿದ್ದಾರೆ.
ಇತ್ತೀಚಿಗಷ್ಟೆ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾ, ತಮಿಳಿನ ಈ ಇಬ್ಬರು ಸೂಪರ್ ಸ್ಟಾರ್ ಜೊತೆ ನಟಿಸಬೇಕೆಂಬ ಆಸೆ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರಗಳನ್ನ ನೋಡಿ ಬೆಳೆದಿರುವ ರಶ್ಮಿಕಾ ಅವರು, ತಲೈವಾ ಚಿತ್ರದಲ್ಲಿ ನಟಿಸಬೇಕೆಂಬ ಬಯಕೆ ಹೊಂದಿದ್ದಾರಂತೆ. ಅದೇ ರೀತಿ ಇನ್ನೊಬ್ಬ ಸ್ಟಾರ ನಟ ಅಜಿತ್ ಕುಮಾರ್ ಜೊತೆಯಲ್ಲು ಸ್ಕ್ರೀನ್ ಶೇರ್ ಮಾಡುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಅವರ ಮಾತು ಕೇಳಿ ತಮಿಳು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಹಿಂದೆ ಇಳಯದಳಪತಿ ವಿಜಯ್ ನಟನೆಯ 64ನೇ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಸುದ್ದಿ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ.
ಈಗ ಕಾರ್ತಿ ನಟನೆಯ 'ಸುಲ್ತಾನ' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದು ಕೊಡಗಿನ ಕುವರಿಯ ಮೊದಲ ತಮಿಳು ಸಿನಿಮಾ. ಮತ್ತೊಂದೆಡೆ ತೆಲುಗಿನಲ್ಲಿ ಮಹೇಶ್ ಬಾಬು ಜೊತೆ ಸರಿಲೇರು ನೀಕೇವರು ಹಾಗೂ ಅಲ್ಲು ಅರ್ಜುನ್ ಅವರ 20ನೇ ಚಿತ್ರದಲ್ಲೂ ರಶ್ಮಿಕಾ ಅಭಿನಯಿಸುತ್ತಿದ್ದಾರೆ.


Click it and Unblock the Notifications











