For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಚಿತ್ರ ಮುಗಿಸಿ ಬೆಂಗಾಳಿ ಕಡೆ ಒಲವು ತೋರಿದ ರಶ್ಮಿಕಾ

  |

  ಕನ್ನಡದ 'ಕಿರಿಕ್ ಪಾರ್ಟಿ' ರಶ್ಮಿಕಾ ಮಂದಣ್ಣ ಸೌತ್ ಇಂಡಸ್ಟ್ರಿಯಿಂದ ಬಾಲಿವುಡ್‌ಗೆ ಹಾರಿರುವುದು ತಿಳಿದಿರುವ ಸಂಗತಿ. ಬ್ಯಾಕ್ ಟು ಬ್ಯಾಕ್ ಎರಡು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಆ ಎರಡು ಸಿನಿಮಾಗಳ ಚಿತ್ರೀಕರಣವೂ ಮುಗಿದಿದೆ. ಶೀಘ್ರದಲ್ಲೇ ಬಿಡುಗಡೆ ಸಹ ಆಗಲಿದೆ. ಇದೀಗ, ಬಾಲಿವುಡ್‌ನಿಂದ ಬೆಂಗಾಳಿ ಕಡೆ ಕೊಡಗಿನ ಕುವರಿ ಹೆಜ್ಜೆ ಹಾಕುವ ಲೆಕ್ಕಾಚಾರದಲ್ಲಿದ್ದಾರೆ.

  ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಲನಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. ಮಲಯಾಳಂ ಭಾಷೆಯಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿರುವ ರಶ್ಮಿಕಾಗೆ ಇನ್ನು ಮಾಲಿವುಡ್ ಬಾಗಿಲು ತೆರೆದಿಲ್ಲ. ಇದೀಗ ಬೆಂಗಾಳಿ ಕಡೆ ಆಸಕ್ತಿ ತೋರಿದ್ದಾರೆ.

  ರಶ್ಮಿಕಾ ಮಂದಣ್ಣರನ್ನು ಒತ್ತಡಕ್ಕೆ ತಳ್ಳಿದ 'ಪುಷ್ಪ' ಸಿನಿಮಾರಶ್ಮಿಕಾ ಮಂದಣ್ಣರನ್ನು ಒತ್ತಡಕ್ಕೆ ತಳ್ಳಿದ 'ಪುಷ್ಪ' ಸಿನಿಮಾ

  ಅಭಿಮಾನಿಯೊಬ್ಬರು ಬೆಂಗಾಳಿ ಸಂಸ್ಕೃತಿಯಂತೆ ಉಡುಗೆ ತೊಡುಗೆ ಧರಿಸಿರುವಂತೆ ಭಾವಚಿತ್ರವೊಂದನ್ನು ರಚಿಸಿ ಶೇರ್ ಮಾಡಿದ್ದಾರೆ. ಇದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ''ಈಗ ನಿಜಕ್ಕೂ ನನಗೆ ಬೆಂಗಾಳಿ ಪಾತ್ರ ಮಾಡಬೇಕು ಎಂದೆನಿಸುತ್ತಿದೆ. ಇದು ತುಂಬಾ ಚೆನ್ನಾಗಿದೆ. ಥ್ಯಾಂಕ್ ಯೂ ಸೋ ಮಚ್'' ಎಂದು ಪೋಸ್ಟ್ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಸಹ ಈ ಫೋಟೋ ನೋಡಿ ಖುಷಿಯಾಗಿದ್ದಾರೆ. ಮುಂದೆ ಓದಿ...

  'ಪುಷ್ಪ' ಚಿತ್ರದಲ್ಲಿ 'ಶ್ರೀವಲ್ಲಿ'ಯಾದ ರಶ್ಮಿಕಾ

  'ಪುಷ್ಪ' ಚಿತ್ರದಲ್ಲಿ 'ಶ್ರೀವಲ್ಲಿ'ಯಾದ ರಶ್ಮಿಕಾ

  ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿನಾಗಿ ನಟಿಸಿದ್ದು, ಶ್ರೀವಲ್ಲಿ ಪಾತ್ರ ನಿಭಾಯಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಟೀಸರ್ ಮತ್ತು ಮೊದಲ ಹಾಡು ಸದ್ದು ಮಾಡಿದೆ. ಅಲ್ಲು ಅರ್ಜುನ್ ಜೊತೆ ಮಲಯಾಳಂ ಖ್ಯಾತ ನಟ ಫಾಹದ್ ಫಾಸಿಲ್ ಹಾಗೂ ಕನ್ನಡದ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಮೊದಲ ಭಾಗ ಡಿಸೆಂಬರ್ 17ಕ್ಕೆ ತೆರೆಗೆ ಬರ್ತಿದೆ.

  ಬಾಲಿವುಡ್ ಚಿತ್ರಗಳಲ್ಲಿ ರಶ್ಮಿಕಾ

  ಬಾಲಿವುಡ್ ಚಿತ್ರಗಳಲ್ಲಿ ರಶ್ಮಿಕಾ

  ಪುಷ್ಪ ಸಿನಿಮಾದಲ್ಲಿ ನಟಿಸುತ್ತಲೇ ಆ ಕಡೆ ಬಾಲಿವುಡ್‌ನಲ್ಲೂ ಎರಡು ಚಿತ್ರ ಮಾಡಿ ಮುಗಿಸಿದ್ದಾರೆ. ಶಾಂತನು ಬಾಗ್ಚಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಮಿಷನ್ ಮಜ್ನು' ಚಿತ್ರದೊಂದಿಗೆ ರಶ್ಮಿಕಾ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಇದುವರೆಗೂ ರಶ್ಮಿಕಾ ಮಂದಣ್ಣ ಪಾತ್ರ ಏನು ಎನ್ನುವುದು ಬಹಿರಂಗವಾಗಿಲ್ಲ. ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಈ ಚಿತ್ರ ನಿರ್ಮಿಸಿದ್ದಾರೆ. 1970ರ ನೈಜ ಘಟನೆಗಳಿಂದ ಸ್ಫೂರ್ತಿಯಿಂದ ಈ ಸಿನಿಮಾ ತಯಾರಾಗಿದೆ.

  'ಪುಷ್ಪ'ದಲ್ಲಿ ಬಾಲಿವುಡ್ ಬೆಡಗಿ ಡ್ಯಾನ್ಸ್: ಆಕೆ ಕೇಳ್ತಿದ್ದಾಳೆ ದುಬಾರಿ ಹಣ!'ಪುಷ್ಪ'ದಲ್ಲಿ ಬಾಲಿವುಡ್ ಬೆಡಗಿ ಡ್ಯಾನ್ಸ್: ಆಕೆ ಕೇಳ್ತಿದ್ದಾಳೆ ದುಬಾರಿ ಹಣ!

  ಅಮಿತಾಭ್ ಜೊತೆ ರಶ್ಮಿಕಾ

  ಅಮಿತಾಭ್ ಜೊತೆ ರಶ್ಮಿಕಾ

  ಇದರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸಿರುವ ಗುಡ್‌ಬೈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಶೂಟಿಂಗ್ ಸಹ ಮುಗಿಸಿದ್ದಾರೆ ಎಂಬ ಮಾಹಿತಿ ಇದೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಅಮಿತಾಭ್ ಬಚ್ಚನ್‌ಗೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

  ಕನ್ನಡದಲ್ಲಿ ಸಿನಿಮಾ ಇಲ್ಲ

  ಕನ್ನಡದಲ್ಲಿ ಸಿನಿಮಾ ಇಲ್ಲ

  2016ರಲ್ಲಿ 'ಕಿರಿಕ್ ಪಾರ್ಟಿ' ಚಿತ್ರದೊಂದಿಗೆ ನಟನೆ ಆರಂಭಿಸಿದರು. ಅಂಜನಿಪುತ್ರ, ಚಮಕ್, ಯಜಮಾನ ಹಾಗೂ ಕೊನೆಯದಾಗಿ ಪೊಗರು ಅಂತಹ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಹೊಸದಾಗಿ ಯಾವ ಸ್ಯಾಂಡಲ್‌ವುಡ್ ಚಿತ್ರವನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಇದರೊಂದಿಗೆ ಕನ್ನಡ ಚಿತ್ರರಂಗದಿಂದ ಸ್ವಲ್ಪ ಮಟ್ಟಿಗೆ ಅಂತರ ಕಾಯ್ದುಕೊಂಡಂತಿದೆ.

  English summary
  After Working in kannada, telugu and bollywood industry Rashmika Mandanna want to play a Bengali character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X