Rashmika Mandanna: ಮತ್ತೆ ತಮಿಳು ಹುಡುಗನನ್ನೇ ಮದುವೆ ಆಗ್ತೇನೆ ಎಂದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಮತ್ತು ತಮಿಳು ಎರಡೂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಕರುನಾಡ ಬೆಡಗಿ, ಕನ್ನಡದ ನಟಿ ದೊಡ್ಡ ಮಟ್ಟಕ್ಕೆ ಎರುತ್ತಾ ಇರುದು ಕನ್ನಡಿಗರಿಗೂ ಹೆಮ್ಮೆಯ ವಿಚಾರ.
ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಹೊಸ ತಮಿಳು ಚಿತ್ರ ಸೆಟ್ಟೇರಿದೆ. ನಟ ವಿಜಯ್ ಜೊತೆಗೆ ರಶ್ಮಿಕಾ ನಾಯಕಿ ಆಗಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಚಿತ್ರದ ಮುಹೂರ್ತ ಸಮಾರಂಭದ ಫೋಟೊಗಳು ಈಗಾಗಲೇ ವೈರಲ್ ಆಗಿವೆ. ರಶ್ಮಿಕಾ ತಮಿಳು ಸ್ಟಾರ್ ನಟನ ಜೊತೆಗೆ ಮಿಂಚಲು ರೆಡಿಯಾಗಿದ್ದಾರೆ.
ಆದರೆ ವಿಪರ್ಯಾಸ ಅಂದರೆ ರಶ್ಮಿಕಾ ಏನೇ ಮಾಡಿದ್ರು, ಆಗಾಗ ಕೆಲವೊಂದು ಎಡವಟ್ಟು ಆಗಿ ಟ್ರೋಲ್ ಗೆ ತುತ್ತಾಗುತ್ತೆ. ಈಗ ಮತ್ತೆ ತನ್ನ ಮಾತಿನಿಂದಲೇ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಹೌದು, ರಶ್ಮಿಕಾ ಮತ್ತೆ ತಮ್ಮ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ತಾನು ಮದುವೆ ಆಗುವ ಹುಡುಗ ಹೇಗೆ ಇರಬೇಕು? ಯಾರಾಗಿರಬೇಕು? ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕಪ್ ಆದ ಬಳಿಕಾ ರಶ್ಮಿಕಾ ಮದುವೆ ಬಗ್ಗೆ ಅಷ್ಟಾಗಿ ಎಲ್ಲೂ ಮಾತನಾಡುತ್ತಾ ಇರಲಿಲ್ಲ. ಮಾತನಾಡಿದರೂ ಕೂಡ ಹುಡುಗನ ಬಗ್ಗೆ ಮಾತನಾಡುತ್ತಾ ಇರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ತಮಿಳರ ಮನೆಯ ಸೊಸೆ ಆಗಬೇಕು ಎಂದು ರಶ್ಮಿಕಾ ಹೇಳಿದ್ದರು. ಈಗ ಮತ್ತೆ ತಾನು ಮದುವೆ ಆದರೆ ತಮಿಳು ಹುಡುಗನನ್ನೇ ಮದುವೆ ಆಗಬೇಕು ಎಂದು ಹೇಳಿದ್ದಾರೆ.
ವಿಜಯ್ 66ನೇ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಶ್ಮಿಕಾ ಹೀಗೆ ಮಾತನಾಡಿದ್ದಾರೆ. "ನನಗೆ ತಮಿಳು ನಾಡಿನ ಸಂಸ್ಕೃತಿ ಇಷ್ಟ, ಮದುವೆ ಆದರೆ ತಮಿಳಿ ಹುಡುಗನನ್ನೇ ಮದುವೆ ಆಗ್ತೀನಿ" ಎಂದಿದ್ದಾರೆ ಎನ್ನಲಾಗಿದೆ.

ಇದು ಕನ್ನಡಿಗೆ ಕಣ್ಣು ಕೆಂಪಾಗುವಂತೆ ಮಾಡಿದೆ. ರಶ್ಮಿಕಾ ಹೇಳಿಕೆ ಆಕೆಯ ವೈಯಕ್ತಿಕ ವಿಚಾರ. ಆದರೂ ಕೂಡ ಚಿತ್ರದಲ್ಲಿ ಈ ಹೇಳಿಕೆಯಿಂದ ಮತ್ತೆ ಟ್ರೋಲ್‌ಗೆ ತುತ್ತಾಗುತ್ತಿದ್ದಾರೆ.


Click it and Unblock the Notifications











