For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ನೋಡಿ ಸೀಟಿನಿಂದ ಜಂಪ್ ಮಾಡಿದ್ರಂತೆ ರಶ್ಮಿಕಾ.!

  |
  ಕೆಜಿಎಫ್ ನೋಡಿ ಸೀಟಿನಿಂದ ಜಂಪ್ ಮಾಡಿದ್ರಂತೆ ರಶ್ಮಿಕಾ..!

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನ ಪ್ರೇಕ್ಷಕರಲ್ಲದೇ ಇಂಡಸ್ಟ್ರಿಯ ನಟ-ನಟಿಯರು ಕೂಡ ಮೆಚ್ಚಿಕೊಂಡಿದ್ದಾರೆ. ಕನ್ನಡದಲ್ಲಿ ಇಂತಹ ಸಿನಿಮಾವೊಂದು ಬೇಕಿತ್ತು, ಅದನ್ನ ಕೆಜಿಎಫ್ ನೀಡಿದೆ ಎಂಬ ಸಂತೋಷವನ್ನ ವ್ಯಕ್ತಪಡಿಸುತ್ತಿದ್ದಾರೆ.

  ಇದೀಗ, ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಕೆಜಿಎಫ್ ಚಿತ್ರವನ್ನ ನೋಡಿ ಥ್ರಿಲ್ ಆಗಿದ್ದಾರೆ. ಕೆಜಿಎಫ್ ಚಿತ್ರದ ಮೇಕಿಂಗ್ ಹಾಗೂ ಯಶ್ ಅವರ ನಟನೆ ನೋಡಿ ರಶ್ಮಿಕಾ ಫಿದಾ ಆಗಿದ್ದಾರಂತೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಸೀಟಿನಿಂದ ಜಂಪ್ ಮಾಡ್ತಿದ್ರಂತೆ. ಅಷ್ಟರ ಮಟ್ಟಿಗೆ ಸಿನಿಮಾ ಇಷ್ಟವಾಗಿದೆ ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.

  'ಯಶ್ ನನ್ನ ಮದುವೆ ಆಗಿ' ಎಂದು ಗೋಗರೆದ ಪರಭಾಷೆ ಮಹಿಳೆ.!

  ''ಕೆಜಿಎಫ್ ಓ ಮೈ ಗಾಡ್ ಜಸ್ಟ್ ಓ ಮೈ ಗಾಡ್....ಯಶ್ ಸರ್, ಪ್ರಶಾಂತ್ ಸರ್, ಭುವನ್ ಈ ಸಿನಿಮಾ ನೋಡುಗರಿಗೆ ಟ್ರೀಟ್. ನಾನು ಕೆಲವೊಂದು ದೃಶ್ಯಗಳನ್ನ ನೋಡಬೇಕಾದರೇ ಸೀಟಿನಿಂದ ಜಂಪ್ ಮಾಡ್ತಿದ್ದೆ. ಮೇಕಿಂಗ್ ಅಂತೂ ಅದ್ಭುತ. ನನಗೆ ಹೆಮ್ಮೆ ಇದೆ. ಥ್ಯಾಂಕ್ ಯೂ ಹೊಂಬಾಳೆ ಫಿಲಂಸ್ ಈ ಸಿನಿಮಾ ಮಾಡಿದ್ದಕ್ಕೆ, ಮುಂದೆ ಇಂತಹ ಸಿನಿಮಾ ಹೆಚ್ಚು ಮಾಡಿ'' ಎಂದು ಶುಭಕೋರಿದ್ದಾರೆ.

  ಕೆಜಿಎಫ್ ನೋಡಿ 'ರಾಕಿ ಭಾಯ್'ಗೆ ಫಿದಾ ಆದ ಬಾಲಿವುಡ್ ನಟಿ.!

  ಸದ್ಯ, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿರುವ ಕೆಜಿಎಫ್ ಸಿನಿಮಾ ನೂರು ಕೋಟಿ ಗಳಿಸುವತ್ತಾ ಹೆಜ್ಜೆ ಹಾಕಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ರಾಮ್, ವಸಿಷ್ಠ ಸಿಂಹ, ಅನಂತ್ ನಾಗ್, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  ಭುವನ್ ಗೌಡ ಅವರ ಅದ್ಭುತ ಛಾಯಾಗ್ರಹಣ, ಶಿವಕುಮಾರ್ ಮನಮೋಹಕ ಸೆಟ್ ಹಾಗೂ ಶ್ರೀಕಾಂತ್ ಅವರ ಸಂಕಲನ ಕೆಜಿಎಫ್ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಟೆಕ್ನಿಕಲಿ ಸಿನಿಮಾಗೆ ಭಾರಿ ಮೆಚ್ಚುಗೆ ಬಂದಿದೆ.

  English summary
  Kannada actress rashmika mandanna watched kgf and praised yash performance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X