ಸಂಜೆ 6 ಗಂಟೆಗೆ ರಶ್ಮಿಕಾ ಕೊಡ್ತಾರೆ ಬ್ರೇಕಿಂಗ್ ನ್ಯೂಸ್, ಸಂಥಿಂಗ್ ಅಂತಿದ್ದಾರೆ ಫ್ಯಾನ್ಸ್.!
Recommended Video

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ 'ಡಿಯರ್ ಕಾಮ್ರೇಡ್' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಮತ್ತೆ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಒಂದಿಷ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ರಶ್ಮಿಕಾ.
ಅದನ್ನ ಬಿಟ್ಟರೇ ಸದ್ಯಕ್ಕೆ ರಶ್ಮಿಕಾ ಬಗ್ಗೆ ಯಾವುದೇ ಸುದ್ದಿಯಿಲ್ಲ. ಹಾಗಿದ್ದರೂ ಇಂದು ಸಂಜೆ ಆರು ಗಂಟೆಗೆ ಒಂದು ಪ್ರಕಟಣೆ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಯಾವ ವಿಷ್ಯದ ಬಗ್ಗೆ ಅಂತ ಗೊತ್ತಿಲ್ಲ. ಆದ್ರೆ, Single forever ಅಂತ ಸುಳಿವು ಕೊಟ್ಟಿರುವುದು ತೀರಾ ಚರ್ಚೆಗೆ ಕಾರಣವಾಗಿದೆ.
'ಸಿಂಗಲ್ ಫಾರ್ ಎವರ್' ಎಂದಿರುವುದು ಈಗ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ರಶ್ಮಿಕಾ ಮುಖ್ಯವಾದ ಅನೌನ್ಸ್ ಮೆಂಟ್ ಏನೋ ಹೇಳ್ತಾರೆ, ಅದು ಏನಿರಬಹುದು ಎಂದು ಅಭಿಮಾನಿಗಳು ಕೂಡ ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಮುಂದಿನ ಸಿನಿಮಾದ ಬಗ್ಗೆ ಹೇಳ್ತಾರಾ, ಡಿಯರ್ ಕಾಮ್ರೇಡ್ ಸಿನಿಮಾ ಸಾಂಗ್ ರಿಲೀಸ್ ಮಾಡ್ತಾರಾ, ತಮಿಳಿನಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡ್ತಾರಾ ಅಥವಾ ಸದ್ಯ ಚರ್ಚೆಯಾಗುತ್ತಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಏನಾದರೂ ಸ್ಪಷ್ಟನೆ ನೀಡ್ತಾರಾ ಎನ್ನುವ ಪ್ರಶ್ನೆಗಳ ಸುರಿಮಳೆಯೇ ಹರಿದುಬಂದಿದೆ.
ಯಾವಾಗಲು ಸಿಂಗಲ್ ಅಂತ ಸುಳಿವು ನೀಡಿರುವುದನ್ನ ನೋಡಿದ್ರೆ ಇದು ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ವಿಷ್ಯವಿರಬಹುದು ಅಂತ ಹೇಳಲಾಗುತ್ತಿದೆ. ಅದೇನೇ ಇದ್ರು 6 ಗಂಟೆಗೆ ರಶ್ಮಿಕಾ ಹೇಳುವವರೆಗೂ ಕಾಯಲೆ ಬೇಕು. ಈ ಸುದ್ದಿಯನ್ನ ನಾವು ನಿಮಗೆ ಮುಟ್ಟಸುತ್ತೇವೆ.


Click it and Unblock the Notifications











