ಬಂದೇ ಬರ್ತಾರೆ ರಶ್ಮಿಕಾ ಮಂದಣ್ಣ: ನಂದ ಕಿಶೋರ್
ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಫೆಬ್ರವರಿ 19 ರಂದು ಸಿನಿಮಾ ತೆರೆಗೆ ಅಪ್ಪಳಿಸುತ್ತಿರುವುದಾಗಿ ಧ್ರುವ ಸರ್ಜಾ ಹೇಳಿದ್ದರು.
Recommended Video
ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭ ಮಾಡಲಾಗಿದ್ದು. ಪ್ರಚಾರಕ್ಕೆ ರಶ್ಮಿಕಾ ಮಂದಣ್ಣ ಗೈರಾಗಲಿದ್ದಾರೆ ಎನ್ನಲಾಗಿತ್ತು. ತಮ್ಮ ಸಿನಿಮಾಗಳ ಬಗ್ಗೆ ಸದಾ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ನೀಡುವ ರಶ್ಮಿಕಾ, 'ಪೊಗರು' ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಟ್ವೀಟ್ ಮಾಡಿರಲಿಲ್ಲ. ಇದು ಚರ್ಚೆಗೆ ಕಾರಣವಾಗಿತ್ತು.
ಇದೀಗ 'ಪೊಗರು' ಸಿನಿಮಾದ ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ ನೀಡಿದ್ದು, 'ಸಿನಿಮಾದ ಪ್ರಚಾರಕ್ಕೆ ರಶ್ಮಿಕಾ ಮಂದಣ್ಣ ಬಂದೇ ಬರುತ್ತಾರೆ. ನಾವು ಅವರೊಟ್ಟಿಗೆ ಸಂಪರ್ಕದಲ್ಲಿದ್ದೇವೆ' ಎಂದಿದ್ದಾರೆ.

'ರಶ್ಮಿಕಾ ಯಾಕೆ ಸಿನಿಮಾ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿಲ್ಲ?' ಎಂಬ ಪ್ರಶ್ನೆಗೆ ಉತ್ತರಿಸಿದ ನಂದ ಕಿಶೋರ್, 'ರಶ್ಮಿಕಾ ಟ್ವೀಟ್ ಮಾಡಿದ್ದಾರೆ. ನಮ್ಮ ತಂಡದಲ್ಲಿ ಎಲ್ಲರೂ ಒಳ್ಳೆಯವರೇ, ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯ ಇಲ್ಲ. ಪ್ರತಿಯೊಬ್ಬರು ಅವರಿಗೆ ಅನ್ನಿಸಿದಂತೆ ಸ್ಪಂದಿಸುತ್ತಿದ್ದಾರೆ' ಎಂದು ವಿವಾದಕ್ಕೆ ಮಂಗಳ ಹಾಡಿದರು.
ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟನೆಯ 'ಪೊಗರು' ಸಿನಿಮಾ ಫೆಬ್ರವರಿ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಫೇಸ್‌ಬುಕ್ ಲೈವ್ ನಲ್ಲಿ ಈ ವಿಷಯ ಘೋಷಿಸಿದ ನಟ ಧ್ರುವ ಸರ್ಜಾ, 'ಪೊಗರು' ಕೇವಲ ಆಕ್ಷನ್ ಸಿನಿಮಾ ಅಲ್ಲ ಬದಲಿಗೆ ಇದೊಂದು ಭಾವನಾತ್ಮಕ ಅಂಶಗಳುಳ್ಳ, ಕೌಟುಂಬಿಕ ಸಿನಿಮಾ ಎಂದರು.


Click it and Unblock the Notifications











