ದೇವರಕೊಂಡ ಹುಟ್ಟುಹಬ್ಬಕ್ಕೆ 'ಡಿಯರ್ ಬಾಬಿ' ಎಂದು ವಿಶ್ ಮಾಡಿದ ರಶ್ಮಿಕಾ
Recommended Video
ಸೌತ್ ಇಂಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ವಿಜಯ್ ದೇವರಕೊಂಡ ಅವರಿಗೆ ಇಂದು ಬಹಳ ವಿಶೇಷ. ಯಾಕಂದ್ರೆ ಮೇ 9 ಅರ್ಜುನ್ ರೆಡ್ಡಿ ಹುಟ್ಟುಹಬ್ಬ. ನಿರೀಕ್ಷೆಯಂತೆ ದೇವರಕೊಂಡ ಬರ್ತಡೇಗೆ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಶುಭ ಕೋರಿದ್ದಾರೆ.
ಈ ಹಿಂದೆ ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ್ದರು ವಿಜಯ್ ದೇವರಕೊಂಡ. ಈಗ ಅವರ ಬರ್ತಡೇಗೆ ರಶ್ಮಿಕಾ ಹೇಗೆ ಶುಭ ಕೋರುತ್ತಾರೆ ಎಂಬ ಕುತೂಹಲವಿತ್ತು. ಎಲ್ಲರೂ ವಿಶ್ ಮಾಡುವಂತೆ ರೆಗ್ಯುಲರ್ ಆಗಿ ಗೀತಾ ಕೂಡ ಗೋವಿಂದನಿಗೆ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.
''ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತಡೇ ಟು ಯೂ'' ಎಂದು ಟ್ವೀಟ್ ಮಾಡಿರುವ ರಶ್ಮಿಕಾ, ದೇವರಕೊಂಡ ಅವರ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಅಷ್ಟಕ್ಕೂ, ಡಿಯರ್ ಬಾಬಿ ಅಂದಿದ್ದು ಯಾಕೆ? ಮುಂದೆ ಓದಿ....

'ಡಿಯರ್ ಬಾಬಿ' ಅಂದಿದ್ದು ಯಾಕೆ?
ಡಿಯರ್ ಬಾಬಿ ಎಂದು ಕರೆದಿರುವುದನ್ನ ನೋಡಿ ಅಚ್ಚರಿ ಪಡಬೇಡಿ. ಇದು ದೇವರಕೊಂಡ ಮತ್ತು ರಶ್ಮಿಕಾ ಅಭಿನಯಿಸುತ್ತಿರುವ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ದೇವರಕೊಂಡ ಹೆಸರು. ರಶ್ಮಿಕಾ ಲಿಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ.

ಜುಲೈ 26ಕ್ಕೆ 'ಕಾಮ್ರೇಡ್' ಬಿಡುಗಡೆ
'ಡಿಯರ್ ಕಾಮ್ರೇಡ್' ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಜುಲೈ 26ರಂದು ಬಹುಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ. ಗೀತಾ ಗೋವಿಂದಂ ಆಗಿ ಎಲ್ಲರ ಹೃದಯ ಕದ್ದಿದ್ದ ಈ ಜೋಡಿ ಈಗ 'ಡಿಯರ್ ಕಾಮ್ರೇಡ್' ಮೂಲಕ ಮತ್ತೆ ಮೋಡಿ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.

ಅರ್ಜುನ್ ರೆಡ್ಡಿ ಬ್ರೇಕ್ ಕೊಟ್ಟ ಚಿತ್ರ
1989ರಲ್ಲಿ ಜನಿಸಿದ್ದ ವಿಜಯ್ ದೇವರಕೊಂಡ 'ನುವ್ವಿಲಾ' ಚಿತ್ರದ ಮೂಲಕ ಸಿನಿರಂಗ ಪ್ರವೇಶ ಮಾಡಿದ್ರು. ಪೆಳ್ಳಿ ಚೂಪುಲು ಸಿನಿಮಾ ಚಿತ್ರದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡ ದೇವರಕೊಂಡಗೆ ಅರ್ಜುನ್ ರೆಡ್ಡಿ ಬಹುದೊಡ್ಡ ನೇಮು ಫೇಮೂ ತಂದುಕೊಡ್ತು.

ಕನ್ನಡದಲ್ಲಿ ದೇವರಕೊಂಡ ಸಿನಿಮಾ
ಅದಾದ ಬಳಿಕ ಯೂತ್ ಐಕಾನ್ ಎನಿಸಿಕೊಂಡ ದೇವರಕೊಂಡ ಗೀತಾ ಗೋವಿಂದಂ, ನೋಟಾ, ಟ್ಯಾಕ್ಸಿವಾಲಾ ಅಂತಹ ಸಿನಿಮಾ ಮಾಡಿದ್ದಾರೆ. ಈಗ ಡಿಯರ್ ಕಾಮ್ರೇಡ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ.


Click it and Unblock the Notifications











