For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಗೆ ಭಾವಿ ಪತ್ನಿ ರಶ್ಮಿಕಾ ಮಂದಣ್ಣ ಕಡೆಯಿಂದ ಬಂದ ವಿಶ್ ಹೀಗಿತ್ತು

  By Naveen
  |

  ನಟ ರಕ್ಷಿತ್ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ರಕ್ಷಿತ್ ಸ್ನೇಹಿತರು ಬರ್ತ್ ಡೇಗೆ ಶುಭಾಶಯ ಕೋರಿದ್ದಾರೆ. ಅದರೊಂದಿಗೆ ರಕ್ಷಿತ್ ಗೆ ಭಾವಿ ಪತ್ನಿ ರಶ್ಮಿಕಾ ಮಂದಣ್ಣ ಕೂಡ ವಿಶ್ ಮಾಡಿದ್ದಾರೆ.

  ತಮ್ಮ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಟಾಗ್ರಾಮ್ ಖಾತೆಗಳಲ್ಲಿ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದು, ದೇವರು ನಿಮಗೆ ಸಂತೋಷ, ಯಶಸ್ಸು ಎಲ್ಲವನ್ನು ನೀಡಲಿ ಎಂದಿದ್ದಾರೆ. ರಕ್ಷಿತ್ ಜೊತೆಗಿರುವ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದಾರೆ ರಶ್ಮಿಕಾ.

  'ಅವನೇ ಶ್ರೀಮನ್ನಾರಾಯಣ' ಹಾಗೂ '777 ಚಾರ್ಲಿ' ಫಸ್ಟ್ ಲುಕ್ ರಿಲೀಸ್ 'ಅವನೇ ಶ್ರೀಮನ್ನಾರಾಯಣ' ಹಾಗೂ '777 ಚಾರ್ಲಿ' ಫಸ್ಟ್ ಲುಕ್ ರಿಲೀಸ್

  ಇನ್ನು ಕಳೆದ ವರ್ಷ ರಕ್ಷಿತ್ ಹುಟ್ಟುಹಬ್ಬಕ್ಕೆ ರಶ್ಮಿಕಾ ಕುಟುಂಬದವರ ಕಡೆಯಿಂದ ಸ್ಪೆಷಲ್ ಉಡುಗೊರೆ ಸಿಕ್ಕಿತ್ತು. ರಶ್ಮಿಕಾ ಟ್ವಿಟ್ಟರ್ ಖಾತೆಯಲ್ಲಿ ನಮ್ಮ ಕುಟುಂಬಕ್ಕೆ ಸ್ವಾಗತ ಎಂದು ರಕ್ಷಿತ್ ಗೆ ವೆಲ್ ಕಮ್ ಮಾಡಿದ್ದರು. ಅಂದಹಾಗೆ, 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಒಂದಾಗಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲಿಯೂ ಒಂದಾಗಿದೆ. ರಕ್ಷಿತ್ - ರಶ್ಮಿಕಾ ನಿಶ್ಚಿತಾರ್ಥ ಕಳೆದ ಜುಲೈ 3 ರಂದು ನಡೆದಿದೆ. ಮದುವೆ ದಿನಾಂಕ ಸದ್ಯಕ್ಕೆ ನಿಗದಿ ಆಗಿಲ್ಲ.

  ಉಳಿದಂತೆ, 'ಅವನೇ ಶ್ರೀಮನ್ನಾರಾಯಣ' ಹಾಗೂ '777 ಚಾರ್ಲಿ' ಈ ಎರಡು ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ ಗಳು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗಿವೆ.

  English summary
  Kannada actress Rashmika Mandanna wishes Rakshith Shetty on this birthday Today (July 06th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X