For Quick Alerts
  ALLOW NOTIFICATIONS  
  For Daily Alerts

  ಹಿಂದಿ ಚೊಚ್ಚಲ ಸಿನಿಮಾದ ಚಿತ್ರೀಕರಣ ಮುಗಿಸಿದ ರಶ್ಮಿಕಾ ಮಂದಣ್ಣ

  |

  ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ತಮ್ಮ ಚೊಚ್ಚಲ ಹಿಂದಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮೊದಲ ಸಲ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ವೈರಸ್ ಭೀತಿ, ಲಾಕ್‌ಡೌನ್ ಇದೆಲ್ಲದರ ನಡುವೆಯೂ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿ ಖುಷಿ ಹಂಚಿಕೊಂಡಿದ್ದಾರೆ.

  ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ನಟಿಸುತ್ತಿರುವ ಸ್ಪೈ ಥ್ರಿಲ್ಲರ್ 'ಮಿಷನ್ ಮಜ್ನು' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸೌತ್ ಸುಂದರಿಗೆ ಇದು ಚೊಚ್ಚಲ ಹಿಂದಿ ಸಿನಿಮಾ. ಶಂತನು ಬಾಗ್ಚಿ ಈ ಚಿತ್ರ ನಿರ್ದೇಶಿಸಿದ್ದಾರೆ.

  ಮುಂಬೈನ ಹೊಸ ಮನೆಗೆ ವಾಸ್ತವ್ಯ ಬದಲಿಸಿದ ರಶ್ಮಿಕಾಮುಂಬೈನ ಹೊಸ ಮನೆಗೆ ವಾಸ್ತವ್ಯ ಬದಲಿಸಿದ ರಶ್ಮಿಕಾ

  ಮೊದಲ ಹಿಂದಿ ಪ್ರಾಜೆಕ್ಟ್ ಮುಗಿಸಿದ ಸಂತಸವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ''ಮಿಷನ್ ಮಜ್ನು ಚಿತ್ರದಲ್ಲಿ ನಾನು ಕೆಲಸ ಮಾಡಿದ್ದು ಅದ್ಭುತ ನೆನಪು. ನಾನು ಅದಾಗಲೇ ಚೊಚ್ಚಲ ಹಿಂದಿ ಸಿನಿಮಾ ಶೂಟಿಂಗ್ ಮುಗಿಸಿದೆ ಎನ್ನುವುದನ್ನು ನಂಬಲು ಸಾಧ್ಯವಾಗ್ತಿಲ್ಲ. ನಾನು ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ 'ನಾನು ಅದ್ಭುತ ಪ್ರಾಜೆಕ್ಟ್‌ನಲ್ಲಿ ಭಾಗಿಯಾಗುತ್ತಿದ್ದೇನೆ' ಎಂದು ಅಂದುಕೊಂಡಿದ್ದೆ. ಈಗ ಅದು ನೆನಪಾಗುತ್ತಿದೆ.'' ಎಂದಿದ್ದಾರೆ. ಮುಂದೆ ಓದಿ...

  ನೈಜ ಕಥೆ ಆಧರಿಸಿದ ಸಿನಿಮಾ

  ನೈಜ ಕಥೆ ಆಧರಿಸಿದ ಸಿನಿಮಾ

  'ಮಿಷನ್ ಮಜ್ನು' 1970ರ ನೈಜ ಘಟನೆಗಳಿಂದ ಸ್ಫೂರ್ತಿಯಿಂದ ತಯಾರಾಗಿತ್ತಿರುವ ಚಿತ್ರ. ಈ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ರಶ್ಮಿಕಾ ಮಂದಣ್ಣ ಪಾತ್ರ ಏನು ಎನ್ನುವುದು ಬಹಿರಂಗವಾಗಿಲ್ಲ. ಬಹಳ ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದಾರೆ. ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಈ ಚಿತ್ರ ನಿರ್ಮಿಸಿದ್ದಾರೆ.

  ಎರಡನೇ ಚಿತ್ರದಲ್ಲಿ ರಶ್ಮಿಕಾ ನಟನೆ

  ಎರಡನೇ ಚಿತ್ರದಲ್ಲಿ ರಶ್ಮಿಕಾ ನಟನೆ

  ಚೊಚ್ಚಲ ಸಿನಿಮಾ 'ಮಿಷನ್ ಮಜ್ನು' ತೆರೆಗೆ ಬಂದಿಲ್ಲ. ಅಷ್ಟರಲ್ಲೇ ಎರಡನೇ ಬಾಲಿವುಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ನಟಿಸುತ್ತಿರುವ 'ಗುಡ್ ಬೈ' ಚಿತ್ರದಲ್ಲಿ ನ್ಯಾಷನಲ್ ಕ್ರಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮಿಷನ್ ಮಜ್ನು ಜೊತೆ ಜೊತೆಯಲ್ಲಿ ಈ ಚಿತ್ರದ ಶೂಟಿಂಗ್ ಸಹ ಮಾಡಿದ್ದಾರೆ.

  ಅಮಿತಾಬ್ ಬಚ್ಚನ್‌ ಜೊತೆ ನಟಸಿದ ಸಿಹಿ ಅನುಭವ ಹಂಚಿಕೊಂಡ ರಶ್ಮಿಕಾಅಮಿತಾಬ್ ಬಚ್ಚನ್‌ ಜೊತೆ ನಟಸಿದ ಸಿಹಿ ಅನುಭವ ಹಂಚಿಕೊಂಡ ರಶ್ಮಿಕಾ

  ಮುಂಬೈನಲ್ಲಿ ಮನೆ ಖರೀದಿ

  ಮುಂಬೈನಲ್ಲಿ ಮನೆ ಖರೀದಿ

  ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಂತೆ ಮುಂಬೈನಲ್ಲಿ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ರಶ್ಮಿಕಾ ಮಂದಣ್ಣ. ಸಿನಿಮಾ ಕೆಲಸಗಳ ನಿಮಿತ್ತ ಆಗಾಗ ಮುಂಬೈಗೆ ಬರಬೇಕಾಗಿದೆ. ಹಾಗಾಗಿ, ಖಾಯಂ ಆಗಿ ಮನೆಯೊಂದು ಇರಲಿ ಎಂಬ ಕಾರಣಕ್ಕಾಗಿ ನೂತನ ಮನೆ ಖರೀದಿ ಮಾಡಿದ್ದಾರೆ. ಮುಂಬೈನ ಹೊಸ ಮನೆ ಪ್ರವೇಶಿಸಿದ ಸಂದರ್ಭದಲ್ಲಿ ಫೋಟೋ ಹಂಚಿಕೊಂಡಿದ್ದರು ರಶ್ಮಿಕಾ.

  ಸಿದ್ಧಾರ್ಥ್ ಮಲ್ಹೋತ್ರ ಬಗ್ಗೆ ಮೆಚ್ಚುಗೆ

  ಸಿದ್ಧಾರ್ಥ್ ಮಲ್ಹೋತ್ರ ಬಗ್ಗೆ ಮೆಚ್ಚುಗೆ

  ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅಡ್ವಾಣಿ ನಟನೆಯ ಶೇರ್ಷಾ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಬಹಳ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರ ನೋಡಿದ ನಟಿ ರಶ್ಮಿಕಾ ಮಂದಣ್ಣ, ತಮ್ಮ ಸಹ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಸಿದ್ಧಾರ್ಥ್ ಮಲ್ಹೋತ್ರ ನೀನೊಬ್ಬ ಸೂಪರ್ ಸ್ಟಾರ್. ಕ್ಯಾಪ್ಟನ್ ವಿಕ್ರಂ ಬಾತ್ರಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದೀರಾ. ಕಿಯಾರಾ ಬಹಳ ಸುಂದರವಾಗಿ ಕಾಣ್ತಾರೆ. ನಿಮ್ಮಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಬಂದಿದೆ. ಕರಣ್ ಜೋಹರ್ ಸರ್ ಅಭಿನಂದನೆಗಳು'' ಎಂದಿದ್ದರು. ಇನ್ನು ರಶ್ಮಿಕಾ ಮಂದಣ್ಣ ಜೊತೆ ಗುಡ್ ಬೈ ಚಿತ್ರದಲ್ಲಿ ನಟಿಸಿರುವ ಹಿರಿಯ ನಟಿ ನೀನಾ ಗುಪ್ತಾ ಕೊಡಗಿನ ಸುಂದರಿಗೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

  English summary
  South Actress Rashmika Mandanna wraps up shoot of Hindi debut spy thriller Mission Majnu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X