ಆಲಿಯಾ ಭಟ್ ಹಾದಿಯಲ್ಲಿ ಹೆಜ್ಜೆಯಿಟ್ರಾ ರಶ್ಮಿಕಾ ಮಂದಣ್ಣ.?
Recommended Video

'ಚಮಕ್' ಚಿತ್ರದ ಸೂಪರ್ ಸಕ್ಸಸ್ ನಂತರ ದರ್ಶನ್ ಜೊತೆ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಆ ಕಡೆ ತೆಲುಗಿನಲ್ಲೂ ಹೆಚ್ಚು ಬ್ಯುಸಿಯಾಗಿದ್ದಾರೆ.
ಈ ನಡುವೆ ಕನ್ನಡ ನವ ನಿರ್ದೇಶಕರೊಬ್ಬರ ಜೊತೆ ಹೊಸ ಸಿನಿಮಾಗೆ ಸಹಿ ಹಾಕಿರುವ ರಶ್ಮಿಕಾ ಹೊಸ ರೀತಿಯ ಕಥೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆರ್ ಗೌತಮ್ ಐಯರ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'ವೃತ್ರ' ಎಂದು ಹೆಸರಿಟ್ಟಿದ್ದು, ಈಗಾಗಲೇ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ರಶ್ಮಿಕಾ ಅವರ 'ವೃತ್ರ' ಚಿತ್ರದ ಫಸ್ಟ್ ಲುಕ್ ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಶೇಷ ಅಂದ್ರೆ, ಈ ಸಿನಿಮಾದ ಪೋಸ್ಟರ್ ಗಮನಿಸುತ್ತಿದ್ದರೇ, ಬಾಲಿವುಡ್ ನಲ್ಲಿ ಇತ್ತೀಚಿಗಷ್ಟೆ ಮೂಡಿ ಬಂದಿದ್ದ 'ರಾಝಿ' ಚಿತ್ರದ ಛಾಯೆ ಎದ್ದು ಕಾಣುತ್ತಿದೆ.

ಹಾಗಂತ ರೀಮೇಕ್ ಕನ್ನಡದ 'ವೃತ್ರ' ಸಿನಿಮಾ ಅಂತಲ್ಲ. ಆದ್ರೆ, ಕಥೆ ಅದೇ ರೀತಿ ಇರಬಹುದು ಎಂಬ ಕುತೂಹಲ. ಯಾಕಂದ್ರೆ, 'ವೃತ್ರ' ಚಿತ್ರದಲ್ಲಿ ರಶ್ಮಿಕಾ ತನಿಖಾಧಿಕಾರಿ (Investigative Officer) ಪಾತ್ರ ನಿರ್ವಹಿಸುತ್ತಿದ್ದಾರೆ.
ವಿಶೇಷ ಅಂದ್ರೆ 'ರಾಝಿ' ಚಿತ್ರದಲ್ಲಿ ಅಭಿನಯಿಸಿದ್ದ ಆಲಿಯಾ ಭಟ್ 'ಪತ್ತೇದಾರಿ'ಯಾಗಿ ಕಾಣಿಸಿಕೊಂಡಿದ್ದರು. ಭಾರತದ ಪತ್ತೇದಾರಿ ಪಾಕಿಸ್ತಾನದ ಯುವಕನೊಂದಿಗೆ ವಿವಾಹವಾಗಿ, ಪಾಕಿಸ್ತಾನಕ್ಕೆ ಹೋಗಿ, ಭಾರತದ ಆರ್ಮಿಗೆ ಮಾಹಿತಿ ರವಾನಿಸುವಂತಹ ಪಾತ್ರದಲ್ಲಿ ಆಲಿಯಾ ಅಭಿನಯಿಸಿದ್ದರು.
ಕನ್ನಡದಲ್ಲಿ ರಶ್ಮಿಕಾ ಮಾಡುತ್ತಿರುವುದು ತನಿಖಾಧಿಕಾರಿ ಪಾತ್ರ. ಆದ್ರೆ, ಅವರು ಯಾವ ಪ್ರಕರಣವನ್ನ ತನಿಖೆ ಮಾಡ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕೆ ಆಲಿಯಾ ಭಟ್ ಅವರಂತೆ ರಶ್ಮಿಕಾ ಕೂಡ ಸೋಲೋ ಫರ್ಫಾಮೆನ್ಸ್ ಮಾಡಲು ಮುಂದಾಗಿರುವುದು ವಿಶೇಷ.


Click it and Unblock the Notifications











