ಕೊನೆಗೂ ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ, ಇದು ಪಕ್ಕಾ ಸುದ್ದಿ
Recommended Video

ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರ ಚಿತ್ರಗಳ ಬಗ್ಗೆ ಅಂತೆ-ಕಂತೆಗಳು ಹೆಚ್ಚಾಗಿದೆ. ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಾರೆ, ವಿಜಯ್ ಜೊತೆ ಸಿನಿಮಾ ಮಾಡ್ತಾರೆ, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡ್ತಾರೆ ಎಂದೆಲ್ಲಾ ಸುದ್ದಿಗಳು ಚರ್ಚೆಯಾಗ್ತಿದೆ.
ಹಾಗ್ನೊಡಿದ್ರೆ, ಒಂದೊಂದೆ ಸುದ್ದಿಗಳನ್ನ ನಿಜಾ ಮಾಡ್ಕೊಂಡು ಬರ್ತಿದ್ದಾರೆ ಕೊಡಗಿನ ಕುವರಿ. ಹೌದು, ಇಷ್ಟು ದಿನ ಅಲ್ಲು ಅರ್ಜುನ್ ಜೊತೆ ನಟಿಸುವ ಸಾಧ್ಯತೆ ಎನ್ನಲಾಗುತ್ತಿತ್ತು. ಇದೀಗ, ಅಧಿಕೃತವಾಗಿ ಚಿತ್ರತಂಡವೇ ಘೋಷಣೆ ಮಾಡಿದೆ. ಅಲ್ಲು ಅರ್ಜುನ್ ಚಿತ್ರಕ್ಕೆ ರಶ್ಮಿಕಾ ಅವರೆ ನಾಯಕಿ ಅಂತ.
ಅಂದ್ಹಾಗೆ, ಈ ಚಿತ್ರಕ್ಕೆ ತೆಲುಗಿನ ಸೂಪರ್ ಸ್ಟಾರ್ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳ್ತಿದ್ದಾರೆ. ಬಹುಶಃ ಈ ಸಿನಿಮಾದ ಬಳಿಕ ರಶ್ಮಿಕಾ ಅವರ ನೇಮೂ, ಫೇಮೂ ಮತ್ತಷ್ಟು ಎತ್ತರಕ್ಕೆ ಹೋದರೂ ಅಚ್ಚರಿಯಿಲ್ಲ. ಅಷ್ಟಕ್ಕೂ, ಆ ಸಿನಿಮಾ ಯಾವುದು? ಆ ಸ್ಟಾರ್ ಡೈರೆಕ್ಟರ್ ಯಾರು? ಮುಂದೆ ಓದಿ....

AA20 ಚಿತ್ರದಲ್ಲಿ ರಶ್ಮಿಕಾ
ಅಲ್ಲು ಅರ್ಜುನ್ ಅವರ 20ನೇ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾ ಘೋಷಣೆಯಾಗಿದೆ. ಇದೇ ವೇಳೆ ಈ ಚಿತ್ರದಲ್ಲಿ ರಶ್ಮಿಕಾ ನಾಯಕಿ ಎಂದು ಕೂಡ ಅನೌನ್ಸ್ ಮಾಡಲಾಗಿದೆ.

ಹಿಟ್ ಕಾಂಬಿನೇಷನ್ ಇದು
ಆರ್ಯ, ಆರ್ಯ 2 ಚಿತ್ರಗಳ ನಂತರ ನಿರ್ದೇಶಕ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಮತ್ತೆ ಬರ್ತಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಜೋಡಿಯಾಗ್ತಿದ್ದಾರೆ. ಹಾಗಾಗಿ, ರಶ್ಮಿಕಾ ಸ್ಟಾರ್ ಗಿರಿ ಈ ಚಿತ್ರದ ನಂತರ ಮತ್ತಷ್ಟು ಹೆಚ್ಚಾಗಬಹುದು. ಮತ್ತು ಆರ್ಯ ಅಂತಹ ಮತ್ತೊಂದು ಸೂಪರ್ ಹಿಟ್ ಸಿನಿಮಾ ಬರಬಹುದು ಎಂಬ ನಿರೀಕ್ಷೆ ಕೂಡ ಇದೆ.

ಅಲ್ಲು ಜೊತೆ ಮೊದಲ ಸಲ
ಈ ಹಿಂದೆ 'ಗೀತಾ ಗೋವಿಂದಂ' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಅವರನ್ನ ಭೇಟಿ ಮಾಡಿದ್ದ ರಶ್ಮಿಕಾ, ಈಗ ಅವರ ಚಿತ್ರದಲ್ಲೇ ತೆರೆಹಂಚಿಕೊಳ್ಳುತ್ತಿದ್ದಾರೆ. ಚಲೋ, ಗೀತಾ ಗೋವಿಂದಂ, ಈಗ ಡಿಯರ್ ಕಾಮ್ರೇಡ್ ಅಂತಹ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಕದ್ದಿರುವ ರಶ್ಮಿಕಾ ಈಗ ಮೊದಲ ಸಲ ಅಲ್ಲು ಅರ್ಜುನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯ್ ಚಿತ್ರಕ್ಕೂ ರಶ್ಮಿಕಾನೇ ಜೋಡಿ.!
'ಡಿಯರ್ ಕಾಮ್ರೇಡ್' ನಂತರ ನಾನಿ ಜೊತೆ 'ಭೀಷ್ಮ' ಸಿನಿಮಾ ಮಾಡುತ್ತಿರುವ ರಶ್ಮಿಕಾ, ತಮಿಳಿನಲ್ಲಿ ಕಾರ್ತಿ ಜೊತೆಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಎರಡು ಚಿತ್ರಗಳ ಬಳಿಕ ಅಲ್ಲು ಅರ್ಜುನ್ ಚಿತ್ರಕ್ಕೆ ಆಯ್ಕೆಯಾಗಿರುವ ಕಿರಿಕ್ ಚೆಲುವೆ, ತಮಿಳು ಸೂಪರ್ ಸ್ಟಾರ್ ವಿಜಯ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ. ಇದು ಖಚಿತವಾಗಿಲ್ಲ.


Click it and Unblock the Notifications











