For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ರಶ್ಮಿಕಾ ಮಂದಣ್ಣ

  |
  ವಿಜಯ್ ಗೆ ಭರ್ಜರಿ ಗಿಫ್ಟ್ ಕೊಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ ರಶ್ಮಿಕಾ ಮಂದಣ್ಣ..? | FILMIBEAT KANNADA

  ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಅಪರೂಪಕ್ಕೆ ಒಂದರಂತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತೆಲುಗು ಜೊತೆಗೆ ಈಗ ತಮಿಳು ಚಿತ್ರರಂಗದಲ್ಲೂ ಸದ್ದು ಮಾಡುತ್ತಿದ್ದಾರೆ.

  ತೆಲುಗು ಚಿತ್ರರಂಗದಲ್ಲಿ ರಶ್ಮಿಕಾಗೆ ಬ್ರೇಕ್ ಕೊಟ್ಟ ಸಿನಿಮಾ 'ಗೀತಾ ಗೋವಿಂದಂ'. ಈ ಚಿತ್ರದ ಮೂಲಕ ರಶ್ಮಿಕಾ ಮತ್ತು ನಾಯಕ ವಿಜಯ್ ದೇವರಕೊಂಡ ಜೋಡಿ ಸಖತ್ ಖ್ಯಾತಿಗಳಿಸಿತ್ತು. ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದ ಈ ಜೋಡಿ ನಂತರ ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಮತ್ತೆ ಒಂದಾಗಿದೆ. ಅಷ್ಟೆಯಲ್ಲ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ವಿಜಯ್ ಜೊತೆ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ದೇವರಕೊಂಡ ಹುಟ್ಟುಹಬ್ಬಕ್ಕೆ 'ಡಿಯರ್ ಬಾಬಿ' ಎಂದು ವಿಶ್ ಮಾಡಿದ ರಶ್ಮಿಕಾ

  ಇದರ ನಡುವ ಈಗ ರಶ್ಮಿಕಾ ಮತ್ತು ವಿಜಯ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೆ ವಿಜಯ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ರಶ್ಮಿಕಾ ಡಿಯರ್ ಬಾಬಿ ಎಂದು ವಿಶ್ ಮಾಡಿದ್ದರು. ಆದ್ರೆ ಕೇವಲ ಶುಭಾಶಯ ಮಾತ್ರ ಹೇಳಿಲ್ಲ. ವಿಜಯ್ ಗೆ ಭರ್ಜರಿ ಗಿಫ್ಟ್ ಕೂಡ ಕೊಟ್ಟಿದ್ದಾರೆ. ಮುಂದೆ ಓದಿ..

  ಕಾಮ್ರೇಡ್ ಸೆಟ್ ನಲ್ಲಿ ಹುಟ್ಟುಹಬ್ಬ ಆಚರಣೆ

  ಕಾಮ್ರೇಡ್ ಸೆಟ್ ನಲ್ಲಿ ಹುಟ್ಟುಹಬ್ಬ ಆಚರಣೆ

  ವಿಜಯ್ ದೇವರಕೊಂಡ ಸದ್ಯ ಡಿಯರ್ ಕಾಮ್ರೇಡ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಹುಟ್ಟುಹಬ್ಬವನ್ನು ಡಿಯರ್ ಕಾಮ್ರೇಡ್ ಚಿತ್ರೀಕರಣ ಸೆಟ್ ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಇಡೀ ಚಿತ್ರತಂಡದ ಜೊತೆಗೆ ರಶ್ಮಿಕಾ ಕೂಡ ಭಾಗಿಯಾಗಿದ್ದರು. ಕೇಕ್ ಕತ್ತರಿಸಿ ವಿಜಯ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಶೇಷವಾಗಿ ರಶ್ಮಿಕಾ ಗೆಳೆಯ ವಿಜಯ್ ಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ.

  ಸದ್ಯದಲ್ಲೇ ಒಂದರ ಮೇಲೊಂದು ಭರ್ಜರಿ ಸುದ್ದಿ ಕೊಡಲಿದ್ದಾರೆ ರಶ್ಮಿಕಾ ಮಂದಣ್ಣ!

  ವಿಜಯ್ ಗೆ ರಶ್ಮಿಕಾ ಕಡೆಯಿಂದ ವಿಶೇಷ ಉಡುಗೊರೆ

  ವಿಜಯ್ ಗೆ ರಶ್ಮಿಕಾ ಕಡೆಯಿಂದ ವಿಶೇಷ ಉಡುಗೊರೆ

  ವಿಜಯ್ ಹುಟ್ಟುಹಬ್ಬವನ್ನು ರಶ್ಮಿಕಾ ಕೇಕ್ ಕತ್ತರಿಸಿ ಶುಭಾಶಯ ಹೇಳುವ ಮೂಲಕ ಮಾತ್ರ ಆಚರಿಸಿಲ್ಲ. ವಿಶ್ ಮಾಡುವ ಜೊತೆಗೆ ಅರ್ಜುನ್ ರೆಡ್ಡಿಗೆ ಭರ್ಜರಿ ಗಿಫ್ಟ್ ಕೂಡ ನೀಡಿದ್ದಾರೆ. ಹೌದು, ಬ್ರಾಸ್ಲೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ರಶ್ಮಿಕಾ ಕೊಟ್ಟ ಗಿಫ್ಟ್ ಅನ್ನು ವಿಜಯ್ ಅಲ್ಲೆ ಓಪನ್ ಮಾಡಿ ನೋಡಿ ಬ್ರಾಸ್ಲೆಟ್ ಅನ್ನು ಮೊದಲು ರಶ್ಮಿಕಾ ಕೈಗೆ ಹಾಕಿ ನಂತರ ತಾವು ಹಾಕಿಕೊಂಡಿದ್ದಾರೆ.

  ಡಿಯರ್ ಬಾಬಿ ಎಂದು ವಿಶ್ ಮಾಡಿದ ರಶ್ಮಿಕಾ

  ಡಿಯರ್ ಬಾಬಿ ಎಂದು ವಿಶ್ ಮಾಡಿದ ರಶ್ಮಿಕಾ

  ವಿಜಯ್ ದೇವರಕೊಂಡ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ರಶ್ಮಿಕಾ ಡಿಯರ್ ಕಾಮ್ರೇಡ್ ನಟನಿಗೆ ಡಿಯರ್ ಬಾಬಿ ಎಂದು ವಿಶ್ ಮಾಡಿದ್ದರು. ಏನಪ್ಪ ಇದು ಅಂತ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಆದ್ರೆ ಡಿಯರ್ ಬಾಬಿ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ವಿಜಯ್ ದೇವರ ಕೊಂಡ ಹೆಸರಂತೆ. ಅದೇ ಹೆಸರನ್ನು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ರು.

  ರಶ್ಮಿಕಾ ಮಂದಣ್ಣ ಮಾತಿಗೆ ಸಮಂತಾ ಫ್ಯಾನ್ಸ್ ಶಾಕ್ ಆಗಿದ್ದೇಕೆ?

  ರಶ್ಮಿಕಾಗೆ ಲಿಲ್ಲಿ ಎಂದು ಶುಭಕೋರಿದ್ದ ವಿಜಯ್

  ರಶ್ಮಿಕಾಗೆ ಲಿಲ್ಲಿ ಎಂದು ಶುಭಕೋರಿದ್ದ ವಿಜಯ್

  ಕಿರಿಕ್ ಸುಂದರಿ ಕಳೆದ ತಿಂಗಳು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ರಶ್ಮಿಕಾ ಜನ್ಮದಿನಕ್ಕೆ ವಿಜಯ್ ಲಿಲ್ಲಿ ಎಂದು ವಿಶ್ ಮಾಡಿದ್ದರು. ಲಿಲ್ಲಿ ಅಂದ್ರೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ರಶ್ಮಿಕಾ ಹೆಸರಂತೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಚಿತ್ರೀಕರಣ ಸೆಟ್ ಯಿಂದನು ಹೊರಗೆ ಅದೇ ಹೆಸರಿನಲ್ಲಿ ಕರೆದುಕೊಳ್ಳುತ್ತಿದ್ದಾರೆ ವಿಜಯ್ ಮತ್ತು ರಶ್ಮಿಕಾ.

  ಜುಲೈ 26ಕ್ಕೆ 'ಡಿಯರ್ ಕಾಮ್ರೇಡ್' ರಿಲೀಸ್

  ಜುಲೈ 26ಕ್ಕೆ 'ಡಿಯರ್ ಕಾಮ್ರೇಡ್' ರಿಲೀಸ್

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ 'ಡಿಯರ್ ಕಾಮ್ರೇಡ್' ಜುಲೈ 26ಕ್ಕೆ ತೆರೆಗೆ ಬರುತ್ತಿದೆ. ವಿಶೇಷ ಅಂದ್ರೆ ತೆಲುಗು ಮಾತ್ರವಲ್ಲದೆ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಈ ಮೂಲಕ ವಿಜಯ್ ದೇವರಕೊಂಡ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಪುಟ್ಟ ಟೀಸರ್ ಮೂಲಕವೇ ಚಿತ್ರಾಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ 'ಡಿಯರ್ ಕಾಮ್ರೇಡ್' ಜುಲೈನಲ್ಲಿ ತೆರೆಗೆ ಬರಲಿದೆ.

  English summary
  kannada actress Rashmika mandanna gave Bracelet a gift to Vijay Devarakonda on his birthday, dear comrade film team celebrate vijay devarakonda birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X