''ಇಲ್ಲಿ ತಲೆ ಹೋಗುವಂತದ್ದು ಏನು ಇಲ್ಲ'' ರಶ್ಮಿಕಾ ತಾಯಿಯ ನೇರ ನುಡಿಗಳು!

Recommended Video

ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ವಿಚಾರ :ಸ್ಪಷ್ಟನೆ ನೀಡಿದ ರಶ್ಮಿಕಾ ತಾಯಿ ಸುಮನ್ ಮಂದಣ್ಣ|Oneindia Kannada

ಹೀಗಾಗಬಾರದಿತ್ತು...,ಹೀಗೆ ಆಗುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೂ ಆ ಘಟನೆ ನಡೆದು ಹೋಗಿದೆ. ಕನ್ನಡದ ಜನ ನೋಡಿ ಮೆಚ್ಚಿದ ಜೋಡಿ ಈಗ ಬೇರೆ ಬೇರೆ ಆಗುವ ನಿರ್ಧಾರಕ್ಕೆ ಬಂದೇ ಬಿಟ್ಟಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರ ಬ್ರೇಕ್ ಅಪ್ ಸುದ್ದಿ ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿದೆ. ಪ್ರೀತಿ, ಪ್ರೇಮ ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಎಲ್ಲವನ್ನು ಮರೆಯುವ ಮನಸ್ಸು ಮಾಡಿದ್ದಾರೆ. ರಕ್ಷಿತ್ ಹಾಗೂ ರಶ್ಮಿಕಾ ಅವರ ಇಡೀ ಕುಟುಂಬ ಮಾತುಕತೆ ನಡೆಸಿ ಬೇರೆಯಾಗುವ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಅಂದಹಾಗೆ, ರಕ್ಷಿತ್ ಹಾಗೂ ರಶ್ಮಿಕಾ ಬ್ರೇಕ್ ಅಪ್ ವಿಚಾರದ ಬಗ್ಗೆ ಈಗ ನಟಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ನಾವು ತುಂಬ ಡಿಸ್ಟರ್ಬ್ ಆಗಿದ್ದೇವೆ

ನಾವು ತುಂಬ ಡಿಸ್ಟರ್ಬ್ ಆಗಿದ್ದೇವೆ

''ನಾವು ತುಂಬ ಡಿಸ್ಟರ್ಬ್ ಆಗಿದ್ದೇವೆ. ಒಂದು ತಿಂಗಳಿಂದ ನಾವು ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದ್ದೇವೆ. ಎಲ್ಲದಕ್ಕೂ ಮನಸ್ಸು ಇರಬೇಕು. ಮನಸ್ಸೆ ಡಿಸ್ಟರ್ಬ್ ಆಗಿದೆ ಅಂದರೆ ಏನು ಮಾಡುವುದು?. ಯಾರು ಯಾರನ್ನು ಬೇಜಾರು ಮಾಡಬೇಕು ಎಂಬ ಇಷ್ಟ ಯಾರಿಗೂ ಇಲ್ಲ.'' - ಸುಮನ್ ಮಂದಣ್ಣ, ರಶ್ಮಿಕಾ ತಾಯಿ

ಸುಮ್ಮನೆ ಯಾಕೆ ನೋವಿನಲ್ಲಿ ಬದುಕಬೇಕು

ಸುಮ್ಮನೆ ಯಾಕೆ ನೋವಿನಲ್ಲಿ ಬದುಕಬೇಕು

''ಅವರವರ ಬದುಕು ಅವರವರಿಗೆ ಸ್ವಂತ. ಎಲ್ಲರೂ ಖುಷಿಯಿಂದ ಇರಬೇಕು ಅಷ್ಟೇ. ಎಲ್ಲರೂ ಒಬ್ಬೊಬ್ಬರಿಗೆ ಡಿಸ್ಟರ್ಬ್ ಆಗಿ ಅವರವರ ಕೆಲಸಕ್ಕೆ ತೊಂದರೆ ಮಾಡಿಕೊಳ್ಳುವುದು ಯಾಕೆ. ಇದರಿಂದ ಮುಂದೆ ಏನಾಗಬೇಕು ಹೇಳಿ. ಸುಮ್ಮನೆ ಯಾಕೆ ನೋವಿನಲ್ಲಿ ಬದುಕಬೇಕು.'' - ಸುಮನ್ ಮಂದಣ್ಣ, ರಶ್ಮಿಕಾ ತಾಯಿ

ಎಲ್ಲರಿಗೂ ಸ್ವಂತ ಜೀವನ ಇದೆ

ಎಲ್ಲರಿಗೂ ಸ್ವಂತ ಜೀವನ ಇದೆ

''ಎಲ್ಲರಿಗೂ ಅವರದ್ದೆ ಅಂತ ಸ್ವಂತ ಜೀವನ ಇದೆ. ಇಲ್ಲಿ ತಲೆ ಹೋಗುವಂತದ್ದು ಏನು ಇಲ್ಲ. ಎಲ್ಲರೂ ಖುಷಿಯಲ್ಲಿ ಇರೋಣ. ಇದು ಫ್ಯಾಮಿಲಿ ವಿಷಯ. ನಾವು ಫ್ಯಾಮಿಲಿ ಎಲ್ಲರೂ ಕೂತು ಚರ್ಚೆ ಮಾಡಿದ್ದೇವೆ. ನಮ್ಮ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಅದು ಬಿಟ್ಟರೆ ಬೇರೆ ಏನು ಇಲ್ಲ.'' - ಸುಮನ್ ಮಂದಣ್ಣ, ರಶ್ಮಿಕಾ ತಾಯಿ

ಕೆರಿಯರ್ ಕಡೆ ಗಮನ

ಕೆರಿಯರ್ ಕಡೆ ಗಮನ

ಸದ್ಯ ರಶ್ಮಿಕಾ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದು, ವೃತ್ತಿ ಜೀವನದತ್ತ ಗಮನ ಹರಿಸುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರಂತೆ. ಈಗಾಗಲೇ ಟಾಲಿವುಡ್ ನಲ್ಲಿ ಎರಡು ಸಿನಿಮಾ ಮಾಡಿರುವ ರಶ್ಮಿಕಾಗೆ ದೊಡ್ಡ ದೊಡ್ಡ ನಟರ ಜೊತೆಗೆ ನಟಿಸುವ ಆಫರ್ ಗಳು ಬರುತ್ತಿದೆ.

ಅದಲು ಬದಲಾಯ್ತು ಉಂಗುರಗಳು

ಅದಲು ಬದಲಾಯ್ತು ಉಂಗುರಗಳು

ಇನ್ನೊಂದು ಕಡೆ ಬ್ರೇಕ್ ಅಪ್ ಬಳಿಕ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರು ಕುಟುಂಬದವರು ನಿಶ್ಚಿತಾರ್ಥಕ್ಕೆ ಹಾಕಿಕೊಂಡಿದ್ದ ಉಂಗುರಗಳನ್ನು ವಾಪಸ್ ಮಾಡಿದ್ದಾರಂತೆ. ಅದಷ್ಟೇ ಅಲ್ಲದೆ ನಿಶ್ಚಿತಾರ್ಥಕ್ಕೆ ಎರಡು ಕುಟುಂಬ ಸೇರಿ ಮಾಡಿದ್ದ ಖರ್ಚು ವೆಚ್ಚವನ್ನು ಲೆಕ್ಕ ಹಾಕಿದ್ದಾರೆ ಎನ್ನುತಿವೆ ಮೂಲಗಳು.

More from Filmibeat

English summary
Actress Rashmika Mandanna and Rakshit Shetty break up. Rashmika's mother Suman Mandanna gave clarification.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X