ಫಿಲ್ಮ್ ಫೇರ್ ಕವರ್ ಪೇಜ್‌ನಲ್ಲಿ ರಶ್ಮಿಕಾ: ಗ್ಲಾಮಸರ್ ಫೋಟೊಗಳು ಇಲ್ಲಿವೆ!
ನಟಿ ರಶ್ಮಿಕಾ ಮಂದಣ್ಣ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ರಶ್ಮಿಕಾಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ರಶ್ಮಿಕಾ ತನ್ನ ಅಭಿನಯದಿಂದ ಪರದೆಯ ಮೇಲೆ ಸದಾ ಛಾಪು ಮೂಡಿಸುತ್ತಾರೆ. ಸಿನಿಮಾ ಯಾವುದೇ ಇದ್ದರೂ, ಸಿನಿಮಾ ಹೇಗೆ ಇದ್ದರೂ, ರಶ್ಮಿಕಾ ಮಾತ್ರ ಜನರಿಗೆ ಇಷ್ಟ ಆಗುತ್ತಾರೆ.
ಅದರಲ್ಲೂ 'ಪುಷ್ಪ: ದಿ ರೈಸ್' ಬಿಡುಗಡೆಯಾದ ಮೇಲೆ ರಶ್ಮಿಕಾ ಮಂದಣ್ಣ ರೇಂಜ್ ಬದಲಾಗಿದೆ. ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ನೋಡ, ನೋಡುತ್ತಿದ್ದ ಹಾಗೆ ರಶ್ಮಿಕಾ ಮಂದಣ್ಣ ದೊಡ್ಡ ಮಟ್ಟಕ್ಕೆ ಬೆಳೆದು ಬಿಟ್ಟಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಬಾಲಿವುಡ್‌ನ ಹೆಸರಾಂತ ಮ್ಯಾಗಜಿನ್ ಫಿಲ್ಮ್ ಫೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫಿಲ್ಮ್ ಫೇರ್ ಮ್ಯಾಗಜಿನ್‌ನಲ್ಲಿ ಫೋಟೊಗಳು ಬರುವುದೇ ಒಂದು ಪ್ರತಿಷ್ಠೆಯ ವಿಚಾರ. ಈಗ ರಶ್ಮಿಕಾ ಕೂಡ ಗ್ಲಾಮರ್ ಗೊಂಬೆಂತೆ ಮಿಂಚಿದ್ದಾರೆ. ರಶ್ಮಿಕಾ ಫೋಟೊಗಳು ಹೇಗಿವೆ ಎನ್ನುವುದನ್ನು ಮುಂದೆ ಓದಿ...
ಫಿಲ್ಮ್ ಫೇರ್ ಫೋಟೊ ಹಂಚಿಕೊಂಡ ರಶ್ಮಿಕಾ!
ನಟಿ ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ. ಜೊತೆಗೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫೋಟೊ ಹಂಚಿಕೊಂಡು ಸಂದೇಶ ಬರೆದಿರುವ ರಶ್ಮಿಕಾ ಮಂದಣ್ಣ "ಇದಕ್ಕಾಗಿ ನಾನು ಎಷ್ಟು ನರ್ವಸ್ ಆಗಿದ್ದೆ ಎನ್ನುವುದು ನಿಮಗೆ ಕಾಣುವುದಿಲ್ಲ." ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
3 ಲುಕ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ!
ನಟಿ ರಶ್ಮಿಕಾ ಮಂದಣ್ಣ ಫೋಟೊಶೂಟ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೊಶೂಟ್‌ನ 3 ಲುಕ್‌ಗಳನ್ನು ಮಾತ್ರ ರಿವೀಲ್ ಮಾಡಲಾಗಿದೆ. ಕೇಸರಿ, ಬಿಳಿ ಮತ್ತು ನೀಲಿ ಬಣ್ಣದ ಬಗೆ ಬಗೆಯ ಉಡುಪುಗಳನ್ನು ತೊಟ್ಟು ಮಿಂಚಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ!
ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ ಪರ ಭಾಷೆ ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಈಗಾಗಲೇ ಹಿಂದಿಯ 3 ಚಿತ್ರಗಳಲ್ಲಿ ರಶ್ಮಿಕಾ ಬುಟ್ಟಿಯಲ್ಲಿ ಇವೆ. ಇತ್ತೀಚೆಗೆ ರಶ್ಮಿಕಾ, ರಣ್ಬೀರ್ ಕಪೂರ್ ಜೊತೆಗಿನ 'ಅನಿಮಲ್' ಸಿನಿಮಾ ಕೂಡ ಪ್ರಕಟಗೊಂಡಿದೆ.
ಕನ್ನಡಕ್ಕೆ ರಶ್ಮಿಕಾ ಕಮ್ ಬ್ಯಾಕ್?
ನಟಿ ರಶ್ಮಿಕಾ ಮಂದಣ್ಣ ಅಭಿನಯದ ಕೊನೆಯ ಸಿನಿಮಾ 'ಪೊಗರು'. ಈ ಚಿತ್ರದ ಬಳಿಕ ರಶ್ಮಿಕಾ ಕನ್ನಡದ ಯಾವುದೇ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ನಟಿ ರಶ್ಮಿಕಾ ಮಂದಣ್ಣ ಯಾವಾಗ ಮತ್ತೆ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಸದ್ಯಕ್ಕೆ ಕನ್ನಡ ಚಿತ್ರಗಳಲ್ಲಿ ನಟಿಸುವ ಬಗ್ಗೆ ಯಾವುದೇ ರೀತಿಯ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.


Click it and Unblock the Notifications











