twitter
    For Quick Alerts
    ALLOW NOTIFICATIONS  
    For Daily Alerts

    ರಿಷಬ್ ಶೆಟ್ಟಿ 'ಕಾಂತಾರ'ಕ್ಕೆ 'ವೈರಮುಡಿ' ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅಸಮಾಧಾನ

    By ಫಿಲ್ಮಿಬೀಟ್ ಡೆಸ್ಕ್
    |

    ಸ್ಯಾಂಡಲ್ ವುಡ್ ನಿರ್ದೇಶಕ, ನಟ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಘೋಷಣೆ ಮಾಡಿದ ಬೆನ್ನಲ್ಲೇ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. 'ರಥಾವರ' ಸಿನಿಮಾ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಕ ರಿಷಬ್ ಶೆಟ್ಟಿ ವಿರುದ್ಧ ಬೇಸರ ಹೊರಹಾಕಿದ್ದಾರೆ. 'ಎರಡು ವರ್ಷದ ಹಿಂದೆ ಕಂಬಳದ ಕುರಿತು 'ವೈರಮುಡಿ' ಸಿನಿಮಾ ಘೋಷಣೆ ಮಾಡಿದ್ದೆ, ಇದೀಗ ಅದೇ ವಿಷಯದ ಬಗ್ಗೆ ರಿಷಬ್ ಶೆಟ್ಟಿ ಸಿನಿಮಾ ಅನೌನ್ಸ ಮಾಡಿದ್ದಾರೆ, ನಮ್ಮನ್ನು ಸಂಪರ್ಕ ಮಾಡದೆ ಸಿನಿಮಾ ಘೋಷಣೆ ಮಾಡಿದ್ದಾರೆ, ಒಂದೇ ವಿಷಯದ ಬಗ್ಗೆ ಸಿನಿಮಾ ಮಾಡುವಾಗ ಕನಿಷ್ಠ ಸೌಜನ್ಯಕ್ಕಾದರೂ ಕೇಳಬಹುದಿತ್ತು' ಎಂದು ನಿರ್ದೇಶಕ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

    Recommended Video

    ಶಿವಣ್ಣನ ವಿಚಾರದಲ್ಲಿ ರಿಷಬ್ ಶೆಟ್ಟಿ ಮಾಡಿದ್ದು ತಪ್ಪು ಎಂದ ಫ್ಯಾನ್ಸ್

    ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ತನ್ನ 11ನೇ ಸಿನಿಮಾ ಘೋಷಣೆ ಮಾಡಿದ್ದು, ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಚಿತ್ರಕ್ಕೆ 'ಕಾಂತಾರ' ಎಂದು ಟೈಟಲ್ ಇಡಲಾಗಿದೆ. ಪೋಸ್ಟರ್ ನೋಡಿದರೆ ಇದು ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಬಗ್ಗೆ ಇರುವ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಆದರೀಗ ಈ ಸಿನಿಮಾದ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಬೇಸರ ಹೊರಹಾಕಿದ್ದಾರೆ. ಮುಂದೆ ಓದಿ...

    ಶಿವಣ್ಣ ಹುಟ್ಟುಹಬ್ಬಕ್ಕೆ 'ವೈರಮುಡಿ' ಘೋಷಣೆಯಾಗಿತ್ತು

    ಶಿವಣ್ಣ ಹುಟ್ಟುಹಬ್ಬಕ್ಕೆ 'ವೈರಮುಡಿ' ಘೋಷಣೆಯಾಗಿತ್ತು

    ರಿಷಬ್ ಶೆಟ್ಟಿ ಕಂಬಳದ ಬಗ್ಗೆ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ 'ವೈರಮುಡಿ' ಸಿನಿಮಾತಂಡ ಮತ್ತು ಶಿವಣ್ಣ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ 'ವೈರಮುಡಿ' ಸಿನಿಮಾವನ್ನು ಶಿವರಾಜ್ ಕುಮಾರ್ ಜೊತೆ ಮಾಡಲು ನಿರ್ಧರಿಸಿ, ಶಿವಣ್ಣ ಹುಟ್ಟುಹಬ್ಬದ ದಿನ ಪೋಸ್ಟರ್ ಬಿಡುಗಡೆ ಮಾಡಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಬೇಸರ

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಬೇಸರ

    ಈ ಬಗ್ಗೆ ಶಿವಣ್ಣ ಅಭಿಮಾನಿಗಳು ಮತ್ತು ವೈರಮುಡಿ ತಂಡ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿ ದೀರ್ಘ ಪೋಸ್ಟ್ ಹಾಕಿದ್ದಾರೆ. "ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ವೈರಮುಡಿ ಎಂಬಾ ಶೀರ್ಷಿಕೆಯನ್ನಿಟ್ಟು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಮುಖ್ಯಭೂಮಿಕೆಯಲ್ಲಿ ಕಂಬಳದ ಬಗ್ಗೆ ಸಿನೆಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಇಂದು ರಿಷಬ್ ಶೆಟ್ಟಿ ಅವರು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಅದೇ ರೀತಿಯ ಸಿನಿಮಾ ಘೋಷಿಸಿದ್ದಾರೆ. ಆದರೆ ಇಂದು ಅವ್ರು ಘೋಷಿಸಿರೋ ಚಿತ್ರದ ಬಗ್ಗೆ ಅಸಮಾಧಾನವಾಗಿದೆ, ಕಾರಣ ಇಷ್ಟೇ ಒಬ್ಬ ನಿರ್ದೇಶಕ ಒಂದು ಕಥೆಯ ಜಾಡು ಹಿಡಿದು ಬೆನ್ನತ್ತಿ ಒಂದು ಕಥೆ ಮಾಡುವುದು ಎಷ್ಟು ಕಷ್ಟದ ಕೆಲಸ ಅದು ಚೆನ್ನಾಗಿನೇ ಅರಿತಿರುತ್ತದೆ. ನಿಮ್ಮ ಈ ಚಿತ್ರದ ಕಥೆ ಏನೀದಿಯೋ ಗೊತ್ತಿಲ್ಲ ಆದ್ರೆ ಕನ್ನಡದ ಪಾಲಿಗೆ ಈ ಅವಧಿಯಲ್ಲಿ ಮೇರು ನಟನಾಗಿ ನಿಂತಿರೋ ಶಿವಣ್ಣನಿಗೆ ನೀವು ಅಗೌರವ ಸೂಚಿಸಿದಂತೆ" ಎಂದು ಹೇಳಿದ್ದಾರೆ.

    ಚಿತ್ರತಂಡದ ಜೊತೆ ಮಾತನಾಡಿ; ರಿಷಬ್‌ಗೆ ಸಲಹೆ

    ಚಿತ್ರತಂಡದ ಜೊತೆ ಮಾತನಾಡಿ; ರಿಷಬ್‌ಗೆ ಸಲಹೆ

    "ಅವರಿಗಾಗಿ ತಯಾರಾಗಿರುವ ಚಿತ್ರವನ್ನು ನೀವು ನಕಲಿ ಮಾಡಿದಂತೆ ನಿಮ್ಮ ನಡೆ ಬಿಂಬಿಸುತ್ತದೆ. ಒಂದು ವೇಳೆ ನೀವು ಈ ಪೋಸ್ಟರ್ ನೋಡಿಲ್ಲವೆಂದರೆ ಒಮ್ಮೆ ನೋಡಿ ಸಂಬಂಧಪಟ್ಟ ಚಿತ್ರ ತಂಡದ ಜೊತೆ ಚರ್ಚಿಸಿ ಮುಂದುವರಿಯಿರಿ" ಎಂದು ರಿಷಬ್ ಶೆಟ್ಟಿ ತಂಡಕ್ಕೆ ಹೇಳಿದ್ದಾರೆ.

    ಚಿತ್ರಕ್ಕಾಗಿ ಮೂರು ವರ್ಷ ಶ್ರಮಿಸಿದ ಚಂದ್ರಶೇಖರ್

    ಚಿತ್ರಕ್ಕಾಗಿ ಮೂರು ವರ್ಷ ಶ್ರಮಿಸಿದ ಚಂದ್ರಶೇಖರ್

    ಈ ಸಿನಿಮಾಗಾಗಿ ನಿರ್ದೇಶಕ ಚಂದ್ರಶೇಖರ್ ಕಳೆದ ಮೂರು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಕಂಬಳದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಲು ಕರಾವಳಿ ಭಾಗವನ್ನು ಸುತ್ತಾಡಿ ಕಥೆ ತಯಾರಿಸಿದ್ದಾರೆ. ಇದುವರೆಗೂ ಯಾರು ಕಂಬಳದ ಬಗ್ಗೆ ಸಿನಿಮಾ ಮಾಡಿಲ್ಲ. ಕರ್ನಾಟಕದ ಜನಪ್ರಿಯ ಕ್ರೀಡೆ ಕಂಬಗಳ ಅಂಥ ವಿಭಿನ್ನ ವಿಷಯವನ್ನು ಕೈಗೆತ್ತಿಕೊಂಡಿದ್ದ ಚಂದ್ರಶೇಖರ್ ಅವರಿಗೆ ಕಾಂತಾರ ಸಿನಿಮಾದ ಪೋಸ್ಟರ್ ಬೇಸರ ಮೂಡಿಸಿದೆ.

    ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಹೇಳಿದ್ದೇನು?

    ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಹೇಳಿದ್ದೇನು?

    ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ ನಿರ್ದೇಶಕ ಚಂದ್ರಶೇಖರ್, ನಾನು ಎರಡು ವರ್ಷದ ಹಿಂದೆಯೇ ಕಂಬಳದ ಬಗ್ಗೆ ವೈರಮುಡಿ ಸಿನಿಮಾ ಘೋಷಣೆ ಮಾಡಿದ್ದೆ. ಇದು ಕಂಬಳದ ಬಗ್ಗೆ ಇರುವ ಸಿನಿಮಾ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವತ್ತು ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಕೂಡ ಕಂಬಳದ ಬಗ್ಗೆ. ಈ ಸಿನಿಮಾ ಮಾಡುವಾಗ ಸೌಜನ್ಯಕ್ಕಾದರೂ ರಿಷಬ್ ಶೆಟ್ಟಿ ನನ್ನನ್ನು ಕೇಳಬಹುದಿತ್ತು. ಆದರೆ ಕೇಳಿಲ್ಲ" ಎಂದು ಹೇಳಿದ್ದಾರೆ.

    ಸರಿಯಾದ ವ್ಯವಸ್ಥೆ ಇಲ್ಲ

    ಸರಿಯಾದ ವ್ಯವಸ್ಥೆ ಇಲ್ಲ

    "ಒಬ್ಬ ದೊಡ್ಡ ಹೀರೋಗೆ ಸಿನಿಮಾ ಘೋಷಣೆಯಾಗಿದೆ. ಆದರೂ ಇದನ್ನು ಹೇಳಿಕೊಳ್ಳಲು ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಸ್ಟೋರಿ ರಿಜಿಸ್ಟರ್ ಮಾಡಲು ಯಾವುದೇ ವ್ಯವಸ್ಥೆ ಇಲ್ಲ ನಿರ್ದೇಶಕ ಸಂಘ ಇಲ್ಲ. ಕಳೆದ ಮೂರು ವರ್ಷದಿಂದ ತುಂಬಾ ಕಷ್ಟಪಟ್ಟು ಕಥೆ ಮಾಡಿದ್ದೇನೆ. ಆದರೆ ನನ್ನನ್ನು ಕೇಳದೆ ಸಿನಿಮಾ ಅನೌನ್ಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ"

    ವೈರಮುಡಿ ಮಾಡಲ್ಲ ಎಂದ ಚಂದ್ರಶೇಖರ್

    ವೈರಮುಡಿ ಮಾಡಲ್ಲ ಎಂದ ಚಂದ್ರಶೇಖರ್

    "ಒಂದೇ ವಿಷಯದ ಮೇಲೆ ಸಿನಿಮಾ ಅನೇಕ ಸಿನಿಮಾಗಳು ಬಂದಿವೆ. ಆದರೆ ಕಂಬಳ ವಿಭಿನ್ನವಾದ ವಿಷಯ. ಒಂದು ವಿಷಯದ ಬಗ್ಗೆ ಸಿನಿಮಾ ಬಂದಮೇಲೆ ನಾನು ಮತ್ತದೆ ವಿಷಯದ ಮೇಲೆ ಸಿನಿಮಾ ಮಾಡಲ್ಲ. ಸದ್ಯಕ್ಕೆ ವೈರಮುಡಿ ಮಾಡುವುದಿಲ್ಲ. ಕಾಂತಾರ ಬಿಡುಗಡೆಯಾದ ಮೇಲೆ ಹೇಗಿದೆ ಎಂದು ನೋಡುತ್ತೀನಿ" ಎಂದು ಹೇಳಿದ್ದಾರೆ.

    English summary
    Rathavara fame director Chandrasekhar Bandiyappa upset on Rishabh Shetty's Kantara movie.
    Saturday, August 7, 2021, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X