For Quick Alerts
  ALLOW NOTIFICATIONS  
  For Daily Alerts

  'ಸ್ಪೈಡರ್ ಮ್ಯಾನ್' ಚಿತ್ರದಲ್ಲಿ ಕೆಲಸ ಮಾಡಿದ್ದವರೇ ಕನ್ನಡದ ಈ ಚಿತ್ರಕ್ಕೂ ಕೆಲಸ ಮಾಡಿದ್ದಾರಂತೆ

  |

  ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಚಿತ್ರಗಳು ಬರುತ್ತಿರುವುದು ಒಂದು ಟ್ರೆಂಡಿಂಗ್ ಅದು ಕೂಡ ವಿಭಿನ್ನ ರೀತಿಯಲ್ಲಿ ಕಥೆಗಳನ್ನು ಹೇಳುವುದರ ಮೂಲಕವೇ ಅನ್ನೋದು ಖುಷಿಯ ವಿಚಾರ. ಇತ್ತೀಚೆಗೆ ಒಂದು ಸಿನಿಮಾ ಕೂಡ ಕೇವಲ ಲಿರಿಕಲ್ ಹಾಡಿನ ಮೂಲಕವೇ ಸದ್ದು ಮಾಡುತ್ತಿತ್ತು, ಅದುವೇ NRI ಕನ್ನಡಿಗರ ಪ್ರಾಮಾಣಿಕ ಪ್ರಯತ್ನ ಅನ್ನುವ ಟ್ಯಾಗ್ ಲೈನ್ ಇರುವ 'ರತ್ನಮಂಜರಿ' ಚಿತ್ರ.

  ಚಿತ್ರದ ಪ್ರೆಸ್ ಮೀಟ್ ನಲ್ಲಿ ಬಹುತೇಕ ಚಿತ್ರದ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು. ಮಾಧ್ಯಮ ಮಿತ್ರರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಚಟ್ ಪಟ್ ಅಂಥ ಉತ್ತರಿಸಿದರು ಹಾಗೆ ಎಲ್ಲ ಪ್ರಿಂಟ್ ಮೀಡಿಯಾ, ಡಿಜಿಟಲ್ ಮೀಡಿಯಾ, ಸಾಮಾಜಿಕ ಜಾಲತಾಣಗಳ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ತಿಳಿಸಿದರು.

  ಮೂರನೇ ವಾರಕ್ಕೆ ಮುನ್ನುಗಿದ 'ಒಂದ್ ಕಥೆ ಹೇಳ್ಲಾ' ಚಿತ್ರ

  ಚಿತ್ರದಲ್ಲಿ ಯಾರು 'ರತ್ನ ಮಂಜರಿ' ಅನ್ನುವುದೇ ಒಂದು ಸಸ್ಪೆನ್ಸ್ ಹಾಗೂ ಇದು ದೆವ್ವ, ದೇವರು, ಬುದ್ಧಿವಂತಿಕೆಯ ಸುತ್ತ ನಡುವೆಯ ಕಥೆ ಎಂದು ನಿರ್ದೇಶಕರಾದ ಪ್ರಸಿದ್ಧ್ ತಿಳಿಸಿದರು. ಇದು ನಾಯಕ ನಟನ ಪೋಟೋಗ್ರಾಫಿಕ್ ಮೆಮೋರಿಯ ಹಾಗೂ ಸಮಸ್ಯೆಯನ್ನು ಭೇದಿಸುವ ಕಥೆ ಇರುವ ಸಿನಿಮಾ ಎಂದರು. ಇದು ನಿರ್ದೇಶಕರ ಚೊಚ್ಚಲ ಸಿನಿಮಾವು ಹೌದು.

  ನಾಯಕ ನಟ ರಾಜ್ ಚರಣ್ ಮಾತನಾಡುತ್ತಾ ಚಿತ್ರದಲ್ಲಿ ಹಲವು ರಿಸ್ಕಿ ಫೈಟ್ ಗಳ ಬಗ್ಗೆ ಹಾಗೂ ಅವೆಂಜರ್ಸ್, ಸ್ಪೈಡರ್ ಮ್ಯಾನ್ ಚಿತ್ರಗಳಿಗೆ ಮಾಸ್ಕ್ ಮಾಡಿದ ತಂಡವೇ ಈ ಚಿತ್ರಕ್ಕೂ ಮಾಸ್ಕ್ ಗಳನ್ನು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು. ಈ ಚಿತ್ರದಲ್ಲಿ ಮಾಸ್ಕ ಕೂಡ ಒಂದು ಪ್ರಮುಖ ಪಾತ್ರ ವಹಿಸಿದವರ ಬಗ್ಗೆ ಹೇಳಿಕೊಂಡರು.

  ನಾಯಕಿ ಅಖಿಲ ಪ್ರಕಾಶ್ ಅವರು ಒಂದು NRI ಇಂಡೋ ವೆಸ್ಟರ್ನ್ ಫ್ಯಾಷನ್ ಡಿಸೈನರ್ ಆಗಿ ಪಾತ್ರ ನಿರ್ವಹಿಸಿರುವುದಾಗಿ ಹಾಗೂ USA , ಮಡಿಕೇರಿ ಚಿತ್ರೀಕರಣದ ಅನುಭವವನ್ನು ಹೇಳಿಕೊಂಡರು. ಇನ್ನೊಬ್ಬ ನಟಿ ಪಲ್ಲವಿ ಅವರು ಕೂಡ ಒಂದು ಪ್ರಮುಖ ಪಾತ್ರ ವಹಿಸಿದ್ದಾರೆ.

  ಚಿತ್ರದಲ್ಲಿ ನಾಲ್ಕು ಹಾಡಿಗಳಿದ್ದು ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿವೆ. ಚಿತ್ರಕ್ಕೆ ಹರ್ಷವರ್ಧನ್ ರಾಜ್ ಅವರು ಉತ್ತಮವಾದ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನು ನೀಡಿರುವುದರ ಪರಿಶ್ರಮ ಟೀಸರ್ ಹಾಗೂ ಹಾಡುಗಳನ್ನು ಕೇಳಿದಾಗ ಎದ್ದು ಕಾಣುತ್ತದೆ.

  ಚಿತ್ರದ ಛಾಯಾಗ್ರಾಹಕರಾದ ಪ್ರೀತಮ್ ತೆಗ್ಗಿನಮನೆ ಅವರು ಮಾತನಾಡುತ್ತಾ ಹೆಚ್ಚು ಮಳೆಯಲ್ಲಿ ಚಿತ್ರೀಕರಣ ಮಾಡುವ ಅವಶ್ಯಕತೆಯಿದ್ದೂ ಹಾಗೂ ಮಳೆಯು ಸಹಕಾರ ಮಾಡಿದ್ದನ್ನು ನೆನೆದರು. ಈ ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದರು.

  ಇನ್ನೂ ಚಿತ್ರದ ನಿರ್ಮಾಪಕರಾದ ಸಂದೀಪ್ ಕುಮಾರ್.ಎಸ್ ಹಾಗೂ ಸಂಕಲನಕಾರರಾದ ಪವನ್ ರಾಮ್ ಸೆಟ್ಟಿ ಅವರು ಮಾತನಾಡುತ್ತಾ ಒಂದೊಳ್ಳೆ ಚಿತ್ರ ಮಾಡಿದ್ದರ ಬಗ್ಗೆ ತಿಳಿಸಿದರು.

  ಈಗಾಗಲೇ ಚಿತ್ರತಂಡವು ಸೆನ್ಸಾರ್ ಗೆ ಅರ್ಜಿ ಹಾಕಿದ್ದು, ಏಪ್ರಿಲ್ 23 ರಂದು ಧ್ವನಿಸುರುಳಿ ಹಾಗೂ ಮೇ ನಲ್ಲಿ ಚಿತ್ರ ಬಿಡುಗಡೆಯಾಗುವುದಾಗಿ ಮಾಧ್ಯಮದವರಿಗೆ ತಿಳಿಸಿದರು.

  English summary
  'Ratnamanjari' kannada movie sogs will be releasing on April 23. The movie is a suspense it futures Raj Charan, Akil Prakash, and Pallavi Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X