For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಧನಂಜಯ್ 'ರತ್ನನ್ ಪ್ರಪಂಚ' ಸಿನಿಮಾದ ನಾಯಕಿ ರೆಬಾ

  |

  ದಕ್ಷಿಣ ಭಾರತದ ಖ್ಯಾತ ನಟಿ ರೆಬಾ ಮೋನಿಕಾ ಜಾನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಈ ನಟಿ ಮಲಯಾಳಂ ಮತ್ತು ತಮಿಳು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದಾರೆ. ನಟ ರಿಷಿ ಅಭಿನಯದ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟ ರೆಬಾ ಸದ್ಯ ಧನಂಜಯ್ ನಟನೆಯ ರತ್ನನ್ ಪ್ರಪಂಚ ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.

  ಇದೀಗ ರೆಬಾ ದಾಂಪತ್ಯ ಜೀವನಕ್ಕೆ ಕಾಲಿಡುವ ಬಗ್ಗೆ ಸುಳಿವು ನೀಡಿದ್ದಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಹಬ್ಬ ಆಚರಿಸಿಕೊಂಡ ನಟಿ ರೆಬಾ ಅದೇ ದಿನ ಭಾವಿ ಪತಿ ಜೋಮನ್ ಜೋಸೆಫ್ ಜೊತೆ ಎಂಗೇಜ್ ಆಗಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಡಾಲಿ ಧನಂಜಯ್ ಗೆ ಜೋಡಿಯಾದ 'ಬಿಗಿಲ್' ಸಿನಿಮಾದ ನಟಿಡಾಲಿ ಧನಂಜಯ್ ಗೆ ಜೋಡಿಯಾದ 'ಬಿಗಿಲ್' ಸಿನಿಮಾದ ನಟಿ

  ಹುಟ್ಟುಹಬ್ಬದ ದಿನವೇ ರೆಬಾಗೆ ಭಾವಿ ಪತಿ ಕಡೆಯಿಂದ ಸರ್ಪ್ರೈಸ್ ಗಿಫ್ಟ್ ಸಿಕ್ಕಿದ್ದು, ರೆಬಾ ಹುಟ್ಟುಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ರೆಬಾ ಭಾವಿ ಪತಿ ಜೋಮನ್ ಜೋಸೆಫ್ ಪ್ರಪೋಸ್ ಮಾಡಿ ಉಂಗುರ ಹಾಕುತ್ತಿರುವ ಫೋಟೋ ಈಗ ಎಲ್ಲಾ ಹರಿದಾಡುತ್ತಿದೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರೆಬಾ ಭಾವಿ ಪತಿ, ಲಾಕ್ ಡೌನ್ ಕಾರಣ ರೆಬಾರನ್ನು ಭೇಟಿಯಾಗಲು ಸಾಧ್ಯವಾಗಿರಲ್ಲ, ಸುಮಾರು 6 ತಿಂಗಳ ಬಳಿಕ ಭೇಟಿಯಾಗುತ್ತಿರುವುದಾಗಿ ಹೇಳಿದ್ದಾರೆ. ಅಂದಹಾಗೆ ರೆಬಾ ಮತ್ತು ಜೋಸೆಫ್ ಇಬ್ಬರದ್ದು ಅನೇಕ ವರ್ಷಗಳ ಪ್ರೀತಿ. ಇದೀಗ ಈ ಜೋಡಿ ಮದುವೆಯಾಗಲು ನಿರ್ಧರಿಸಿದೆ.

  ನಗಿಸೋಕೆ ಇನ್ನೊಂದು ದಾರಿ ಹಿಡಿದ ಸಿಲ್ಲಿಲಲ್ಲಿಯ ಮಂಜುಭಾಷಿಣಿ | Filmibeat Kannada

  ನಟಿ ರೆಬಾ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ನಟ ವಿಜಯ್ ನಟನೆಯ ಬಿಗಿಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರೆಬಾ ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಎಂಗೇಜ್ ಆಗಿರುವ ವಿಚಾರವನ್ನು ಬಹಿರಂಗ ಪಡಿಸಿರುವ ನಟಿ ರೆಬಾ ಮದುವೆ ಯಾವಾಗ ಎನ್ನುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

  English summary
  Ratnan Prapancha heroine Reba Monica John gets engaged with Joemon Joseph.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X