For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ರವೀನಾ ಟಂಡನ್ ಪಾತ್ರವೇನು? ಅವರೇ ಹೇಳಿದ್ದಾರೆ ನೋಡಿ

  |

  ಕೆಜಿಎಫ್ 2 ಸಿನಿಮಾ ದ ನಾಯಕ ಯಶ್ ಹಾಗೂ ವಿಲನ್ ಸಂಜಯ್ ದತ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ರವೀನಾ ಟಂಡನ್ ಬೇರೆಯದೇ ಕತೆ ಹೇಳುತ್ತಿದ್ದಾರೆ.

  Ambi-Vishnu|ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದ ಸುಮಲತಾ ಅಂಬರೀಶ್ | Filmibeat Kannada

  ಹೌದು, ಕೆಜಿಎಫ್ 2 ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ರವೀನಾ ಟಂಡನ್ ಹೇಳಿರುವ ಪ್ರಕಾರ, ಕೆಜಿಎಫ್ 2 ಸಿನಿಮಾದ ನಾಯಕ ಹಾಗೂ ವಿಲನ್ ಎರಡೂ ಅವರೇ ಅಂತೆ!

  ನಿಖಿಲ್ ಕುಮಾರಸ್ವಾಮಿ ಮದುವೆ ಟೀಕಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ರವೀನಾ ಟಂಡನ್ನಿಖಿಲ್ ಕುಮಾರಸ್ವಾಮಿ ಮದುವೆ ಟೀಕಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ರವೀನಾ ಟಂಡನ್

  ಹೌದು ಹೀಗೆಂದು ರವೀನಾ ಟಂಡನ್ ಅವರು ಮುಂಬೈನ ಮಾಧ್ಯಮಕ್ಕೆ ತಿಳಿಸಿದ್ದಾರೆ. ತಾವು ತೊಡಗಿಕೊಂಡಿರುವ ಕಾರ್ಯಗಳ ಬಗ್ಗೆ ಹೇಳಿರುವ ರವೀನಾ ಟಂಡನ್ ಕೆಜಿಎಫ್ 2 ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದ್ದು, ಅದರಲ್ಲಿ ನಾನೇ ಹೀರೋ ನಾನೇ ವಿಲನ್ ಎಂದು ಹೇಳಿದ್ದಾರೆ.

  ನಾನೇ ಹೀರೋ ನಾನೇ ವಿಲನ್: ರವೀನಾ

  ನಾನೇ ಹೀರೋ ನಾನೇ ವಿಲನ್: ರವೀನಾ

  'ಕೆಜಿಎಫ್ 2 ಸಿನಿಮಾದಲ್ಲಿ ನಾನು ರಾಜಕಾರಣಿಯ ಪಾತ್ರ ಮಾಡಿದ್ದೇನೆ, ಬಹಳ ಗಟ್ಟಿಯಾದ ಪಾತ್ರವದು, ಬಹಳ ಕುತೂಹಲದ ಕತಾ ಹಂದರ ಹೊಂದಿರುವ ಈ ಸಿನಿಮಾದ ನಾಯಕನೂ ನಾನೇ, ವಿಲನ್ ಸಹ ನಾನೇ' ಎಂದಿದ್ದಾರೆ ರವೀನಾ.

  ರಾಜಕಾರಣಿಯ ಪಾತ್ರದಲ್ಲಿ ರವೀನಾ ಟಂಡನ್

  ರಾಜಕಾರಣಿಯ ಪಾತ್ರದಲ್ಲಿ ರವೀನಾ ಟಂಡನ್

  ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಅವರು ರಮಿಕಾ ಸೇನ್ ಎಂಬ ರಾಜಕಾರಣಿಯ ಪಾತ್ರ ಮಾಡಿದ್ದಾರೆ. ಇಂದಿರಾ ಗಾಂಧಿ ಅವರಿಂದ ಪ್ರೇರಣೆ ಹೊಂದಿದ ಪಾತ್ರದಲ್ಲಿ ರವೀನಾ ನಟಿಸುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿದೆ.

  ನಿಖಿಲ್-ರೇವತಿ ಮದುವೆ ಬಗ್ಗೆ ಹೀಗ್ಯಾಕಂದರು ರವೀನಾ ಟಂಡನ್ನಿಖಿಲ್-ರೇವತಿ ಮದುವೆ ಬಗ್ಗೆ ಹೀಗ್ಯಾಕಂದರು ರವೀನಾ ಟಂಡನ್

  ಕೆಜಿಎಫ್ 2 ಚಿತ್ರೀಕರಣ ಬಹುತೇಕ ಪೂರ್ಣ

  ಕೆಜಿಎಫ್ 2 ಚಿತ್ರೀಕರಣ ಬಹುತೇಕ ಪೂರ್ಣ

  ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು, ಡಬ್ಬಿಂಗ್ ಸೇರಿದಂತೆ ಇನ್ನೂ ಕೆಲವು ಕಾರ್ಯಗಳು ಬಾಕಿ ಇದೆ. ಜೊತೆಗೆ ಸಂಜಯ್ ದತ್ ಅಭಿನಯದ ಕೆಲವು ದೃಶ್ಯಗಳ ಚಿತ್ರೀಕರಣ ಸಹ ಬಾಕಿ ಇದೆ ಎನ್ನಲಾಗುತ್ತಿದೆ.

  ಅಕ್ಟೋಬರ್ ಅಥವಾ ಡಿಸೆಂಬರ್ ನಲ್ಲಿ ಬಿಡುಗಡೆ

  ಅಕ್ಟೋಬರ್ ಅಥವಾ ಡಿಸೆಂಬರ್ ನಲ್ಲಿ ಬಿಡುಗಡೆ

  ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ ನಟಿಸಿರುವ ಕೆಜಿಎಫ್ 2 ಸಿನಿಮಾ ಅಕ್ಟೋಬರ್‌ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಮತ್ತೊಂದು ಮಾಹಿತಿ ಪ್ರಕಾರ, ಅಕ್ಟೋಬರ್‌ನಲ್ಲಿ ಆಗದಿದ್ದಲ್ಲಿ ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆಯಂತೆ.

  ಯಶ್ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ ಬಾಲಿವುಡ್ ತಾರೆ ರವೀನಾ ಟಂಡನ್ಯಶ್ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ ಬಾಲಿವುಡ್ ತಾರೆ ರವೀನಾ ಟಂಡನ್

  English summary
  Actress Raveena Tandon talks about her character in KGF 2 movie. She said I'm the and I'm villain of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X