'ಕೆಜಿಎಫ್-2' ಪಾತ್ರ ಸಿಕ್ಕಿದ್ದು ಹೇಗೆ? ಪ್ರಶಾಂತ್ ನೀಲ್ ಮತ್ತು ಸಿನಿಮಾದ ಬಗ್ಗೆ ರವೀನಾ ಟಂಡನ್ ಮಾತು
ರಾಕಿಂಗ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಸಿನಿಮಾತಂಡ ಟೀಸರ್ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ. ಚಿತ್ರದ ಟೀಸರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಹೌದು, ಜನವರಿ 8ರಂದು ಕೆಜಿಎಫ್-2 ಟೀಸರ್ ರಿಲೀಸ್ ಆಗುತ್ತಿದೆ.
Recommended Video

ಸದ್ಯ ಅಭಿಮಾನಿಗಳು ಕೆಜಿಎಫ್-2 ಟೀಸರ್ ಹೇಗಿರಲಿದೆ ಎನ್ನುವ ಕುತೂಹಲದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ರಮಿಕಾ ಸೇನ್ ಪಾತ್ರ ನಿರ್ವಹಿಸಿರುವ ಬಾಲಿವುಡ್ ನಟಿ ರವೀನಾ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ರವೀನಾ ಟಂಡನ್ ಕೆಜಿಎಫ್ ಸಿನಿಮಾ ಬಗ್ಗೆ ಮತ್ತು ಸಿನಿಮಾತಂಡದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ರವಿನಾ ಟಂಡನ್ ಹೇಳಿದ್ದೇನು?

ಮೊದಲ ಭಾಗ ನೋಡುವ ಮೊದಲೇ ಸಿನಿಮಾದ ಕಥೆ ವಿವರಿಸಿದ್ದರು
ಕೆಜಿಎಫ್ ಮೊದಲ ಭಾಗ ನೋಡುವ ಮೊದಲೇ ಎರಡನೇ ಭಾಗದ ಕಥೆ ಕೇಳಿ ಒಪ್ಪಿಕೊಂಡಿರವುದಾಗಿ ರವೀನಾ ಹೇಳಿದ್ದಾರೆ. 'ಸಿನಿಮಾದ ಕಥೆ ಕೇಳಿ ತುಂಬಾ ಇಷ್ಟವಾಯಿತು. ಸಿನಿಮಾತಂಡದ ಜೊತೆ ಮಾತನಾಡುತ್ತಿದ್ದೆ.ಮೊದಲ ಭಾಗವನ್ನು ನೋಡುವ ಮೊದಲೇ ನನಗೆ ಪ್ರಶಾಂತ್ ಕಥೆ ಬಗ್ಗೆ ವಿವರಣೆ ನೀಡಿದ್ದರು.'

ನಟಿಸಲು ಸಾಧ್ಯವಿಲ್ಲ ಎನ್ನಲು ಕಾರಣವಿರಲಿಲ್ಲ
'ಬಳಿಕ ಕೆಜಿಎಫ್ ಮೊದಲ ಭಾಗ ನೋಡಿದೆ. ನಿಜಕ್ಕೂ ಆ ಸಿನಿಮಾ ಅದ್ಭತವಾಗಿದೆ. ಹೊಸ ಯುಗದ ಸಿನಿಮಾ ವಿಧಾನವಾಗಿದೆ. ಇದೇನೇ ಇದ್ದರೂ ಕಥೆ ಮತ್ತು ನಿರೂಪಣೆಯೊಂದಿಗೆ ಕೆಜಿಎಫ್-2 ಹೇಗೆ ಹೊರಹೊಮ್ಮುತ್ತದೆ ಎಂಬುದು ಮುಖ್ಯವಾಗುತ್ತಿದೆ. ಇದರಲ್ಲಿ ನನ್ನ ಪಾತ್ರ ತುಂಬಾ ಆಸಕ್ತಿದಾಯಕವಾಗಿದೆ. ನಟಿಸುವುದಿಲ್ಲ ಎಂದು ಹೇಳಲು ಸಾಧ್ಯವಾಗಿಲ್ಲ.' ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್ ಬಗ್ಗೆ ರವೀನಾ ಟಂಡನ್ ಮಾತು
'ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಸಿನಿಮಾತಂಡದ ಬಗ್ಗೆ ಮಾತನಾಡಿದ ರವಿನಾ ಟಂಡನ್, ಪ್ರಶಾಂತ್ ಅವರ ಕೆಲಸ ತುಂಬಾ ಫವರ್ ಫುಲ್ ಆಗಿದೆ. ಅವರ ಕೆಲಸವೇ ಅವರನ್ನು ವಿಶೇಷ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಭಾವಿಸುತ್ತೇನೆ. ಅವರ ಶಾಂತವಾದ ಮನಸ್ಸಿನ ಹಿಂದೆ ಯಾವ ರೀತಿಯ ಯೋಚನೆಗಳು ಇವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

ಟೀಸರ್ ನೋಡಲು ಕಾತರರಾಗಿದ್ದಾರೆ ಚಿತ್ರಪ್ರಿಯರು
ಕೆಜಿಎಫ್-2 ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಸಹ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈಗಾಗಲೇ ಸಂಜಯ್ ದತ್ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸಿನಿಮಾತಂಡ ಅವರನ್ನು ಅದ್ದೂರಿಯಾಗಿ ಬೀಳ್ಕೊಟ್ಟಿದೆ. ಕೆಜಿಎಫ್-2 ಸದ್ಯ ಕೊನೆಯ ಹಂತದಲ್ಲಿದೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ 'ಕೆಜಿಎಫ್-2' ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಚಿತ್ರಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











