For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ ಭರ್ಜರಿ ಸುದ್ದಿ ನೀಡಿದ ಪ್ರಶಾಂತ್ ನೀಲ್-ರವಿ ಬಸ್ರೂರ್

  |

  ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತು ಭಾರಿ ಕುತೂಹಲ ಹುಟ್ಟುಹಾಕಿರುವ ನಿರ್ದೇಶಕ ಪ್ರಶಾಂತ್ ನೀಲ್, ಹೊಸ ವರ್ಷದ ಪ್ರಯುಕ್ತ ಪೋಸ್ಟರ್, ಟೀಸರ್ ಹಾಗೂ ಯಾವುದೇ ಅಪ್‌ಡೇಟ್ ಕೊಟ್ಟಿಲ್ಲ. ಯಶ್ ಅವರ ಬರ್ತಡೇಗೆ ಕೆಜಿಎಫ್ ಟೀಸರ್ ಬರುವುದು ಪಕ್ಕಾ ಎಂದು ಹೇಳಲಾಗಿದೆ.

  ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಸಲಾರ್ ಚಿತ್ರದ ಬಗ್ಗೆಯೂ ಹೊಸ ವರ್ಷಕ್ಕೆ ಯಾವುದೇ ಅಪ್‌ಡೇಟ್ ನೀಡುವ ಬಗ್ಗೆ ಹೇಳಿರಲಿಲ್ಲ. ಆದ್ರೆ, ಸರ್ಪ್ರೈಸ್ ಎನ್ನುವಂತೆ ಸಲಾರ್ ಚಿತ್ರದ ಬಗ್ಗೆ ದೊಡ್ಡ ಸುದ್ದಿಯನ್ನು ಘೋಷಿಸಿದ್ದಾರೆ. ಈ ವಿಷಯ ಕೇಳಿದ ಚಿತ್ರಪ್ರೇಮಿಗಳು ಸಲಾರ್ ಸಿನಿಮಾದ ಬಗ್ಗೆ ಥ್ರಿಲ್ ಹೆಚ್ಚಿಸಿಕೊಂಡಿದ್ದಾರೆ. ಮುಂದೆ ಓದಿ...

  ಸಲಾರ್ ಚಿತ್ರಕ್ಕೆ ರವಿ ಸಬ್ರೂರು ಸಂಗೀತ

  ಸಲಾರ್ ಚಿತ್ರಕ್ಕೆ ರವಿ ಸಬ್ರೂರು ಸಂಗೀತ

  ಕೆಜಿಎಫ್ ನಂತರ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಈ ಸುದ್ದಿಯನ್ನು ಸ್ವತಃ ಪ್ರಶಾಂತ್ ನೀಲ್ ಅವರೇ ಪ್ರಕಟಿಸಿದ್ದಾರೆ.

  'KGF-2' ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಕ್ತಾಯ; ಸಂಜಯ್ ದತ್ ರನ್ನು ಬೀಳ್ಕೊಟ್ಟ ಪ್ರಶಾಂತ್ ನೀಲ್ ತಂಡ'KGF-2' ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಕ್ತಾಯ; ಸಂಜಯ್ ದತ್ ರನ್ನು ಬೀಳ್ಕೊಟ್ಟ ಪ್ರಶಾಂತ್ ನೀಲ್ ತಂಡ

  ಪ್ರಶಾಂತ್ ಜೊತೆ ನಾಲ್ಕನೇ ಚಿತ್ರ

  ಪ್ರಶಾಂತ್ ಜೊತೆ ನಾಲ್ಕನೇ ಚಿತ್ರ

  ಪ್ರಶಾಂತ್ ನೀಲ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ ಉಗ್ರಂ ಸಿನಿಮಾಗೂ ರವಿ ಬಸ್ರೂರ್ ಅವರೇ ಸಂಗೀತ ನಿರ್ದೇಶನ ಮಾಡಿದ್ದರು. ನಂತರ ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೂ ಇವರೇ ಸಂಗೀತ ನೀಡಿದ್ದಾರೆ. ಈಗ ಸಲಾರ್ ಚಿತ್ರಕ್ಕೂ ರವಿ ಬಸ್ರೂರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  ಹಿನ್ನೆಲೆ ಸಂಗೀತದಲ್ಲಿ ಬಸ್ರೂರ್ ಸಕ್ಸಸ್

  ಹಿನ್ನೆಲೆ ಸಂಗೀತದಲ್ಲಿ ಬಸ್ರೂರ್ ಸಕ್ಸಸ್

  ರಾ ಸಿನಿಮಾಗಳು, ರೌಡಿಸಂ ಸಿನಿಮಾಗಳು ಹಾಗೂ ಥ್ರಿಲ್ಲಿಂಗ್ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡುವುದರಲ್ಲಿ ರವಿ ಬಸ್ರೂರ್ ಹೆಚ್ಚು ಸಕ್ಸಸ್ ಕಂಡಿದ್ದಾರೆ. ಕರ್ವ, ಮಫ್ತಿ, ಅಂಜನಿಪುತ್ರ, ಕೆಜಿಎಫ್, ಬಜಾರ್, ಉಪೇಂದ್ರ ನಟಿಸುತ್ತಿರುವ ಕಬ್ಜ ಚಿತ್ರಕ್ಕೂ ಬಸ್ರೂರ್ ಸಂಗೀತ ಒದಗಿಸುತ್ತಿದ್ದಾರೆ.

  ಪ್ರಶಾಂತ್ ನೀಲ್-ಪ್ರಭಾಸ್ 'ಸಲಾರ್' ಸಿನಿಮಾಗೆ ಕನ್ನಡದ ಛಾಯಾಗ್ರಾಹಕ ಎಂಟ್ರಿಪ್ರಶಾಂತ್ ನೀಲ್-ಪ್ರಭಾಸ್ 'ಸಲಾರ್' ಸಿನಿಮಾಗೆ ಕನ್ನಡದ ಛಾಯಾಗ್ರಾಹಕ ಎಂಟ್ರಿ

  ಭುವನ್ ಗೌಡ ಛಾಯಾಗ್ರಾಹಕ

  ಭುವನ್ ಗೌಡ ಛಾಯಾಗ್ರಾಹಕ

  ಪ್ರಶಾಂತ್ ನೀಲ್ ಅವರ ತಂಡದಲ್ಲಿ ಸತತವಾಗಿ ಕೆಲಸ ಮಾಡುವ ತಂತ್ರಜ್ಞರನ್ನೇ ಸಲಾರ್ ಚಿತ್ರಕ್ಕೂ ಉಳಿಸಿಕೊಳ್ಳಲಾಗುತ್ತಿದೆ. ರವಿ ಬಸ್ರೂರ್ ಅವರಿಗೂ ಮುಂಚೆ ಛಾಯಾಗ್ರಾಹಕ ಭುವನ್ ಗೌಡ ಕುರಿತು ಮಾಹಿತಿ ನೀಡಿದ್ದರು. ಸಲಾರ್ ಚಿತ್ರದಲ್ಲಿ ಕನ್ನಡಿಗ ಭುವನ್ ಗೌಡ ಕೆಲಸ ಮಾಡ್ತಿದ್ದಾರೆ.

  ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada
  ಜನವರಿಯಲ್ಲಿ ಸಲಾರ್ ಆರಂಭ

  ಜನವರಿಯಲ್ಲಿ ಸಲಾರ್ ಆರಂಭ

  ಡಿಸೆಂಬರ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮುಗಿಯಲಿದೆ ಎಂದು ಹೇಳಿದ್ದ ಪ್ರಶಾಂತ್ ನೀಲ್, ಜನವರಿ ಆರಂಭದಿಂದ ಸಲಾರ್ ಸಿನಿಮಾ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದರು. ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಸಲಾರ್ ಚಿತ್ರ ತಯಾರಾಗುತ್ತಿದೆ.

  'ಸಲಾರ್' ಚಿತ್ರದಲ್ಲಿ ಇಬ್ಬರು ನಾಯಕಿಯರು, ಒಬ್ಬರು ಬಾಲಿವುಡ್, ಇನ್ನೊಬ್ಬರು?'ಸಲಾರ್' ಚಿತ್ರದಲ್ಲಿ ಇಬ್ಬರು ನಾಯಕಿಯರು, ಒಬ್ಬರು ಬಾಲಿವುಡ್, ಇನ್ನೊಬ್ಬರು?

  English summary
  Kannada Successful music Director Ravi Basrur to compose music for Prabhas and Prashanth Neel project Salaar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X