ಹುಚ್ಚ ವೆಂಕಟ್ ಬಗ್ಗೆ ಆಘಾತಕಾರಿ ವಿಷ್ಯ ಬಹಿರಂಗಪಡಿಸಿದ ರವಿ ಬೆಳಗೆರೆ
Recommended Video
ಕಾಲಿಗೆ ಚಪ್ಪಲಿ ಇಲ್ಲದೆ, ಕೊಳಕು ಬಟ್ಟೆಯಲ್ಲಿ ಚೆನ್ನೈನಲ್ಲಿ ಸುತ್ತಾಡಿದ. ಮಡಿಕೇರಿಯಲ್ಲಿ ಕಾರಿನ ಗಾಜು ಪೀಸ್ ಪೀಸ್ ಮಾಡಿ ಸ್ಥಳಿಯರಿಂದ ಹೊಡೆತ ತಿಂದ. ನಂತರ ಮಂಡ್ಯದಲ್ಲಿ ಇದೇ ರೀತಿ ಜಗಳ ಮಾಡಿ ಜನರಿಂದ ಏಟು ತಿಂದ. ಇದೆಲ್ಲವನ್ನ ಗಮನಿಸಿ ಜನರು ಹುಚ್ಚ ವೆಂಕಟ್ ನಿಜವಾಗಲೂ ಹುಚ್ಚನಾಗಿದ್ದಾನೆ ಎನ್ನುತ್ತಿದ್ದಾರೆ.
ನಿಜಕ್ಕೂ ಹುಚ್ಚ ವೆಂಕಟ್ ಗೆ ಏನಾಗಿದೆ ಎಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಈ ಬಗ್ಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಅಘಾತಕಾರಿ ವಿಷಯವನ್ನ ಬಹಿರಂಗಪಡಿಸಿದ್ದಾರೆ.
ಹುಚ್ಚ ವೆಂಕಟ್ ಗೆ ಸಂಬಂಧಸಿದಂತೆ ಮನೋವೈದ್ಯರ ಬಳಿ ಚರ್ಚಿಸಿ, ಆತನಿಗೆ ಸಮಸ್ಯೆ ಏನು ಎಂಬುದರ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದಾರೆ. ರವಿ ಬೆಳಗೆರೆ ಹೇಳುವ ಪ್ರಕಾರ ವೆಂಕಟ್ ಅವರ ಆರೋಗ್ಯ ಪರಿಸ್ಥಿತಿ ಅಪಾಯದಲ್ಲಿದೆ. ಅಷ್ಟಕ್ಕೂ, ಬೆಳಗೆರೆ ಹೇಳಿದ್ದೇನು? ವೆಂಕಟ್ ಗೆ ಏನಾಗಿದೆ? ಮುಂದೆ ಓದಿ....

ತನ್ನ ಪ್ರಾಣವನ್ನ ತಾನೇ ತೆಗೆದುಕೊಳ್ಳಬಹುದು
ಹುಚ್ಚ ವೆಂಕಟ್ ಅವರ ನಡವಳಿಕೆ, ಅವರ ಗಲಾಟೆ, ರಂಪಾಟ ಎಲ್ಲವನ್ನ ನೋಡಿ ಅವನಿಗೆ ಹುಚ್ಚು ಹಿಡಿದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಪತ್ರಕರ್ತ ರವಿಬೆಳಗೆರೆ ಅವರು ಬೇರೆಯದ್ದೆ ವಿಷಯ ಹೇಳುತ್ತಿದ್ದಾರೆ. ''ಹುಚ್ಚ ವೆಂಕಟ್ ತನ್ನ ಪ್ರಾಣವನ್ನ ತಾನೇ ತೆಗೆದುಕೊಳ್ಳುವ ಸ್ಥಿತಿ ತಲುಪಬಹುದು'' ಎಂಬ ಆಘಾತಕಾರಿ ವಿಷಯವನ್ನ ಚರ್ಚೆ ಮಾಡಿದ್ದಾರೆ.

ಇದು ಅಪಾಯಕಾರಿ ರೋಗ
ಹುಚ್ಚ ವೆಂಕಟ್ ನೋಡಿ ಅವರೊಬ್ಬ ಸೈಕೋ, ಅವರಿಗೆ ಬೇರೆ ಏನೋ ಮಾನಸಿಕ ರೋಗ ಇದೆ ಎಂದು ಅನೇಕರು ಹೇಳುವಂತೆ ರವಿ ಬೆಳಗೆರೆ ಕೂಡ ಭಾವಿಸಿದ್ದರಂತೆ. ಆದರೆ, ವೈದ್ಯರ ಬಳಿ ಚರ್ಚಿಸಿದ ಬಳಿಕ ಮತ್ತು ವೆಂಕಟ್ ಅವರ ನಡವಳಿಕೆ ಗಮನಿಸಿದ ಬಳಿಕ ಅವರಿಗೆ 'esquizofrenia' ಎಂಬ ಕಾಯಿಲೆ ಇರಬಹುದು ಎಂಬ ಸಂಶಯ ಬಂದಿದೆ. ಇದು ಎರಡು ಬಗೆಯ ಅಪಾಯ ತರುತ್ತೆ. 'ಒಂದು ತನ್ನನ್ನ ತಾನೇ ಸಾಯಿಸಿಕೊಳ್ಳುವುದು, ಇನ್ನೊಂದು ಬೇರೆಯವರನ್ನ ಕೊಲ್ಲುವುದು' ಎಂದು ಬೆಳಗರೆ ವಿಶ್ಲೇಷಿಸಿದ್ದಾರೆ. ಈ ಬಗ್ಗೆ ಮನೋವೈದ್ಯರನ್ನ ಸಂಪರ್ಕಿಸಿ ಗಂಭೀರವಾಗಿ ಚರ್ಚೆ ಕೂಡ ಮಾಡಿದ್ದಾರಂತೆ.

ಭ್ರಮೆಯಲ್ಲಿ ಬದುಕುತ್ತಿದ್ದಾರಂತೆ ವೆಂಕಟ್
''ಹುಚ್ಚ ವೆಂಕಟ್ ಅವರು ಭ್ರಮಾಲೋಕದಲ್ಲಿ ಇದ್ದಾರೆ. ಅದನ್ನ ಸಮಾಜ ಅರಿತುಕೊಳ್ಳಬೇಕಿದೆ. ಪಾಕಿಸ್ತಾನದಲ್ಲಿ ಹುಚ್ಚ ವೆಂಕಟ್ ಸೇನೆ ಇದೆ ಎನ್ನುವುದು, ಒಬಾಮ ನನ್ನ ಸ್ನೇಹಿತ ಎನ್ನುವುದು ಇದೆಲ್ಲವೂ ಅದರ ಲಕ್ಷಣ. ಉಳಿದಂತೆ ಜ್ಞಾನ ಇದೆ. ಒಳ್ಳೆಯ ವಿಷಯಗಳನ್ನ ಮಾತಾನಾಡ್ತಾನೆ. ಇಂಗ್ಲಿಷ್ ಭಾಷೆ ಚೆನ್ನಾಗಿದೆ'' ಎಂದು ಬೆಳಗೆರೆ ಅಭಿಪ್ರಾಯ ಪಟ್ಟಿದ್ದಾರೆ.

'ಹುಚ್ಚ' ಎಂಬ ಪದ ತೆಗೆದು ಹಾಕಿ
''ವೆಂಕಟ್ ಹುಚ್ಚ ಅಲ್ಲ. ನೀವು ಆ ದೃಷ್ಟಿಯಿಂದ ನೋಡುವುದನ್ನ ಬಿಡಿ. ನಿಮ್ಮ ನಿಘಂಟಿನಲ್ಲಿ ಹುಚ್ಚ ಎಂಬ ಪದವನ್ನ ತೆಗೆದು ಹಾಕಿ. ಭ್ರಮೆ ಕಾಯಿಲೆಯಿಂದ ಬಳಲುತ್ತಿದ್ದಾನೆ. ಅದು ಬೆಳೆದು ಬಂದು ಈ ಸ್ಥಿತಿಗೆ ನಿಂತಿದೆ. ಆತನಿಗೆ ಚಿಕಿತ್ಸೆ ಬೇಕಾಗಿದೆ. ಅವನೊಬ್ಬ ರೋಗಿ'' ಎಂದು ರವಿ ಬೆಳಗೆರೆ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾಜ ತಿಳಿವಳಿಕೆಯಿಂದ ವರ್ತಿಸಬೇಕಾಗಿದೆ
''ಹುಚ್ಚ ವೆಂಕಟ್ ವಿಚಾರದಲ್ಲಿ ನಮ್ಮ ಸಮಾಜ ತಿಳಿವಳಿಕೆಯಿಂದ ವರ್ತಿಸಬೇಕಾಗಿದೆ. ಅವನೊಬ್ಬ ರೋಗಿ, ಆತನಿಗೆ ಬೇಕಾದ ಚಿಕಿತ್ಸೆ ಕೊಡಿಸಬೇಕು. ಇಂತಹ ಘಟನೆಗಳು ಸಂಭವಿಸಿದಾಗ ಪೊಲೀಸರು ಕೂಡಲೇ ಗಮನಹರಿಸಿ, ಆಸ್ಪತ್ರೆಗೆ ಸೇರಿಸಬೇಕು. ಹುಚ್ಚ ವೆಂಕಟ್ ಅವರು ತುಂಬಾ ಶುದ್ಧ. ಹೆಣ್ಣು ಮಕ್ಕಳ ಬಗ್ಗೆ ಗೌರವಿದೆ. ಇದೆಲ್ಲವನ್ನ ಅರಿತು ಅಂತವರ ಬಗ್ಗೆ ಸ್ವಲ್ಪ ತಾಳ್ಮೆಯಿಂದ ನಡೆದುಕೊಳ್ಳಬೇಕು'' ಎಂದು ತಿಳಿಸಿದ್ದಾರೆ.

ನಮ್ಮಂತೆ ಬದುಕಲು ಬಿಡಿ
''ಹುಚ್ಚ ವೆಂಕಟ್ ಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಆತನನ್ನು ಮನರಂಜನೆಗಾಗಿ ಬಳಸಬೇಡಿ. ಆಡಿಕೊಂಡು ನಗಬೇಡಿ. ನಮ್ಮ ನಿಮ್ಮಂತೆಯೇ ಬದುಕಲು ಅವಕಾಶ ಮಾಡಿಕೊಡಿ'' ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











