For Quick Alerts
  ALLOW NOTIFICATIONS  
  For Daily Alerts

  ರವಿಬೋಪಣ್ಣ ಟೀಸರ್: ಕ್ರೇಜಿಸ್ಟಾರ್ ಸ್ಟೈಲಿಶ್, ಕಿಚ್ಚನ ಫ್ಯಾನ್ಸ್ ಗೆ ನಿರಾಸೆ

  |

  ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡುತ್ತಿರುವ ರವಿ ಬೋಪಣ್ಣ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮೇಕಿಂಗ್ ಹಂತದಿಂದಲೂ ಕುತೂಹಲ ಹುಟ್ಟಿಹಾಕಿರುವ ಈ ಸಿನಿಮಾ ಟೀಸರ್ನಲ್ಲೂ ಮೋಡಿ ಮಾಡಿದೆ.

  ರವಿಚಂದ್ರನ್ ಅವರ ಲುಕ್, ಆ ಸ್ಟೈಲಿಶ್ ಗಡ್ಡ ಸಿನಿಮಾದ ಹೈಲೈಟ್. ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಹೊಸ ರೀತಿಯ ಮನರಂಜನೆ ನೀಡಲಿದ್ದಾರೆ ಎಂಬುದಕ್ಕೆ ಟೀಸರ್ ಸಾಥ್ ನೀಡಿದೆ.

  ಸಂಕ್ರಾಂತಿಗೆ ಬರ್ತಿದೆ ಸುದೀಪ್ ಅಭಿನಯದ ಎರಡು ಸಿನಿಮಾಗಳ ಟೀಸರ್ಸಂಕ್ರಾಂತಿಗೆ ಬರ್ತಿದೆ ಸುದೀಪ್ ಅಭಿನಯದ ಎರಡು ಸಿನಿಮಾಗಳ ಟೀಸರ್

  ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಹುಶಃ ಈ ಟೀಸರ್ ನಲ್ಲಿ ಸುದೀಪ್ ಅವರ ಪಾತ್ರದ ಝಲಕ್ ಕೂಡ ಕಾಣಬಹುದು ಎಂದು ಅಂದುಕೊಂಡಿದ್ದ ಸುದೀಪ್ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗಿದೆ. ಯಾಕಂದ್ರೆ, ಟೀಸರ್ ನಲ್ಲಿ ಸುದೀಪ್ ದೃಶ್ಯ ಇರಲಿಲ್ಲ.

  ಸಂಕ್ರಾಂತಿಗೆ ಬರ್ತಿದೆ ಸುದೀಪ್ ಅಭಿನಯದ ಎರಡು ಸಿನಿಮಾಗಳ ಟೀಸರ್ಸಂಕ್ರಾಂತಿಗೆ ಬರ್ತಿದೆ ಸುದೀಪ್ ಅಭಿನಯದ ಎರಡು ಸಿನಿಮಾಗಳ ಟೀಸರ್

  ಇನ್ನುಳಿದಂತೆ ರವಿಚಂದ್ರನ್ ಅವರ ಎಂಟ್ರಿ, ಅವರ ಸ್ಟೈಲ್ ಗೆ ಸುದೀಪ್ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ರವಿಚಂದ್ರನ್ ಅವರೇ ಸಂಗೀತ ನೀಡಿದ್ದಾರೆ. ಸರ್ಕಾರ್ ಅಜಿತ್ ಬಂಡವಾಳ ಹಾಕಿದ್ದಾರೆ.

  ಬಹುತೇಕ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ವರ್ಷದ ಮೊದಲಾರ್ಧದಲ್ಲಿ ಈ ಸಿನಿಮಾ ತೆರೆಗೆ ಬರಬಹುದು. ಇದರ ಜೊತೆಗೆ ರವಿಚಂದ್ರ ಮತ್ತು 'ರಾಜೇಂದ್ರ ಪೊನ್ನಪ್ಪ' ಸಿನಿಮಾಗಳು ಸಜ್ಜಾಗುತ್ತಿದೆ.

  English summary
  Kannada actor Ravichandran and Kiccha Sudeep starrer Ravi Bopanna teaser released. the movie directed by ravichandran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X