ಅಂದು ಸುದೀಪ್ ಗೆ ವಿಲನ್ ಆಗಿದ್ದ ಈ ನಟ ಈಗ ದರ್ಶನ್ ಗೆ ವಿಲನ್

Recommended Video

Ravi Kishan Paying Important Role In Darshan Robert Movie | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರು, ಹೈದರಾಬಾದ್, ವಾರಾಣಸಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿರುವ ಚಿತ್ರತಂಡ ಈಗ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

ಚಿತ್ರತಂಡದಿಂದ ಈಗ ಮತ್ತೊಂದು ಬಿಗ್ ಬ್ರೇಕಿಂಗ್ ಸುದ್ದಿ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ರಾಬರ್ಟ್ ಚಿತ್ರಕ್ಕೆ ಮತ್ತೋರ್ವ ಖ್ಯಾತ ನಟ ಸೇರ್ಪಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭೋಜಪುರಿಯ ಖ್ಯಾತ ನಟ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅಬ್ಬರಿಸುತ್ತಿರುವ ರವಿ ಕಿಶನ್ ಈಗ ಚಾಲೆಂಜಿಂಗ್ ಸ್ಟಾರ್ ಎದುರು ತೊಡೆತಟ್ಟಿ ನಿಲ್ಲಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ರವಿ ಕಿಶನ್ ಹಿಂದಿ, ಭೋಜಪುರಿ ಭಾಷೆಯಲ್ಲಿ ಅಭಿನಯಿಸಿರುವ ರವಿ ಕಿಶನ್ ಅಪರೂಪಕ್ಕೊಮ್ಮೆ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. ಮೊದಲ ಬಾರಿಗೆ ರವಿ ಕಿಶನ್ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ವಿಲನ್ ಆಗಿ ಬಣ್ಣಹಚ್ಚಿದ್ದಾರೆ.

Ravi Kishan May Paying Important Role In Darshan Starrer Robert Movie

ಅಂದ್ಹಾಗೆ ರಾಬರ್ಟ್ ಚಿತ್ರದಲ್ಲಿ ಈಗಾಗಲೆ ಖ್ಯಾತ ವಿಲನ್ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೀಗ ರವಿ ಕಿಶನ್ ಹೆಸರು ಕೂಡ ಕೇಳಿ ಬರುತ್ತಿದೆ. ಆದ್ರೆ ಇದು ನಿಜಾನಾ ಅಥವಾ ಗಾಳಿ ಸುದ್ದಿಯ ಎನ್ನುವುದನ್ನು ಚಿತ್ರತಂಡ ಕನ್ಫರ್ಮ್ ಮಾಡಬೇಕಿದೆ.

ದರ್ಶನ್ ಸದ್ಯ ಸ್ವಿಡ್ಜರ್ಲ್ಯಾಂಡ್ ನಲ್ಲಿದ್ದಾರೆ. ಒಡೆಯ ಚಿತ್ರದ ಹಾಡಿನ ಚಿತ್ರೀಕರಣಕ್ಕೆಂದು ದರ್ಶನ್ ಮತ್ತು ತಂಡ ಸ್ವಿಡ್ಜರ್ಲ್ಯಾಂಡ್ ನಲ್ಲಿ ಬೀಡು ಬಿಟ್ಟಿದ್ದಾರೆ. ಒಡೆಯ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆ ಮತ್ತೆ ರಾಬರ್ಟ್ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ. ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bhojpuri famous actor Ravi Kishan may playing important role in darshan starrer Robert movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X