ದರ್ಶನ್ 'ಕುರುಕ್ಷೇತ್ರ'ದ ಚಿತ್ರದ 'ಶಕುನಿ' ಲುಕ್ ರಿವಿಲ್
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರ್ತಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ಅದ್ಧೂರಿ ತಾರಾಗಣ ಇದೆ. ದರ್ಶನ್, ರಾಕ್ ಲೈನ್ ವೆಂಕಟೇಶ್, ಮೇಘನಾರಾಜ್, ಶಶಿಕುಮಾರ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ಅಂಬರೀಶ್ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ.
ಇವರುಗಳ ಜೊತೆಯಲ್ಲಿ ವಿಲನ್ ರವಿಶಂಕರ್ 'ಶಕುನಿ' ಪಾತ್ರವನ್ನ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ರವಿಶಂಕರ್ ಅವರ ಫಸ್ಟ್ ಲುಕ್ ಫೋಟೋವನ್ನು ರಿಲೀಸ್ ಮಾಡಿದ್ದರು. ಆದ್ರೀಗ, ಕುರುಕ್ಷೇತ್ರ ಚಿತ್ರದಲ್ಲಿ ರವಿಶಂಕರ್ ಅವರ ನೈಜ ಗೆಟಪ್ ಬಹಿರಂಗವಾಗಿದೆ. ಅಭಿಮಾನಿಗಳ ಜೊತೆಯಲ್ಲಿ ನಟ ರವಿಶಂಕರ್ ಶಕುನಿ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಲೀಕ್ ಆಗಿವೆ.
ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ರವಿಶಂಕರ್ ನೋಡಿ ಖುಷಿ ಪಟ್ಟಿದ್ದ ಅಭಿಮಾನಿಗಳಿಗೆ ಬೇರೆಯದ್ದೇ ಲುಕ್ ನಲ್ಲಿ ರವಿಶಂಕರ್ ರನ್ನ ನೋಡೋವ ಅವಕಾಶ 'ಕುರುಕ್ಷೇತ್ರ' ಚಿತ್ರದ ಮೂಲಕ ಸಿಗಲಿದೆ. 'ಶಕುನಿ' ಗೆಟಪ್ ನಲ್ಲಿ ರವಿಶಂಕರ್ ಹೇಗಿದ್ದಾರೆ? ಶಕುನಿ ಕ್ಯಾರೆಕ್ಟರ್ ಗಾಗಿ ರವಿಶಂಕರ್ ಮಾಡಿಕೊಂಡ ತಯಾರಿಗಳೇನು? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಸಂಪೂರ್ಣ ಮಾಹಿತಿಗಾಗಿ, ಮುಂದೆ ಓದಿ

ಖಡಕ್ ಲುಕ್ ನಲ್ಲಿ ರವಿಶಂಕರ್
'ಕೆಂಪೇಗೌಡ' ಸಿನಿಮಾ ಮೂಲಕ ಆರುಮುಗ ರವಿಶಂಕರ್ ಅಂತಾನೇ ಖ್ಯಾತಿ ಪಡೆದಿರುವ ನಟ ರವಿಶಂಕರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾದಲ್ಲಿ ಶಕುನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರವಿಶಂಕರ್ ಲುಕ್ ರಿವಿಲ್ ಆಗಿದ್ದು ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

ಅದ್ಭುತವಾಗಿದೆ ರವಿಶಂಕರ್ ಲುಕ್
ನಟ ರವಿಶಂಕರ್ ಯಾವುದೇ ಪಾತ್ರಕ್ಕಾಗಲಿ ಸಾಕಷ್ಟು ತಯಾರಿ ಮಾಡಿಕೊಳ್ತಾರೆ. ಪ್ರತಿ ಸಿನಿಮಾವನ್ನೂ ಮೊದಲ ಚಿತ್ರ ಎಂದು ಪರಿಗಣಿಸುವ ನಟ ರವಿಶಂಕರ್. ಕೆಲ ಚಿತ್ರಗಳ ಕ್ಯಾರೆಕ್ಟರ್ ಗಳಿಗಾಗಿ ತಾವೇ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿಕೊಂಡಿರೋದು ಉಂಟು.

ವಿಭಿನ್ನ ಪಾತ್ರಗಳಲ್ಲಿ ರವಿಶಂಕರ್
ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ ನಟ ರವಿಶಂಕರ್. ಇತ್ತೀಚೆಗಷ್ಟೇ ಬಿಡುಗಡೆಯಾದ 'ಕಾಲೇಜ್ ಕುಮಾರ' ಸಿನಿಮಾದಲ್ಲಿ ತಂದೆಯ ಪಾತ್ರವನ್ನ ನಿರ್ವಹಿಸಿದ್ದರು. ಕಾಲೇಜ್ ಕುಮಾರನ ಪಾತ್ರವನ್ನ ಪ್ರೇಕ್ಷಕರಷ್ಟೇ ಅಲ್ಲದೆ ಸಿನಿಮಾರಂಗದ ಅನೇಕರು ಮೆಚ್ಚಿಕೊಂಡಿದ್ದರು.

ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಕಲಾವಿದ
ಕನ್ನಡ ಚಿತ್ರರಂಗದ ಪ್ರತಿ ನಿರ್ದೇಶಕನು ರವಿಶಂಕರ್ ಗಾಗಿ ಒಂದು ಪಾತ್ರ ತಮ್ಮ ಚಿತ್ರದಲ್ಲಿ ಮೀಸಲಿಡುತ್ತಿದ್ದಾರೆ. ಕನ್ನಡ ಚಿತ್ರಗಳ ಜೊತೆಯಲ್ಲಿ ರವಿಶಂಕರ್ ತೆಲುಗು ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. 'ಕುರುಕ್ಷೇತ್ರ', 'ಉಪ್ಪಿ-ರುಪ್ಪಿ', 'ರಾಜರಥ', 'ಕನಕ' ಹೀಗೆ ರವಿಶಂಕರ್ ಅಭಿನಯದ ಇನ್ನೂ ಅನೇಕ ಚಿತ್ರಗಳು ತೆರೆಗೆ ಬರಬೇಕಿವೆ.


Click it and Unblock the Notifications











