For Quick Alerts
  ALLOW NOTIFICATIONS  
  For Daily Alerts

  ವರ್ಮಾ ಚಿತ್ರಕ್ಕೆ 'ಪವರ್' ತುಂಬಿದ ಆರ್ಮುಗಂ ರವಿಶಂಕರ್

  |

  ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರ ಬಹುದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಎನ್.ಟಿ.ಆರ್ ಕುರಿತು ಯಾರಿಗೂ ಗೊತ್ತಿಲ್ಲದ ಸತ್ಯ ಸಂಗತಿಗಳನ್ನ ಈ ಸಿನಿಮಾದಲ್ಲಿ ಹೇಳುತ್ತೇನೆ ಎಂದಿರುವ ವರ್ಮಾ ಇಡೀ ಟಾಲಿವುಡ್ ನಲ್ಲೇ ಸಂಚಲನ ಸೃಷ್ಟಿಸಿದ್ದಾರೆ.

  ಇದೀಗ, ವರ್ಮಾ ಅವರ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕೆ ಕನ್ನಡದ ಖ್ಯಾತ ಖಳನಟ ರವಿಶಂಕರ್ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಹಾಡುಗಳು ಮೂಲಕ ಕುತೂಹಲ ಮೂಡಿಸಿರುವ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದ ಹಾಡೊಂದಕ್ಕೆ ರವಿಶಂಕರ್ ಧ್ವನಿಯಾಗಿದ್ದು, ಇತ್ತೀಚಿಗಷ್ಟೆ ರೆಕಾರ್ಡಿಂಗ್ ಮುಗಿಸಿದ್ದಾರೆ.

  ಮಚ್ಚು ಹಿಡಿದು ವರ್ಮ ಎಚ್ಚರಿಕೆ ನೀಡಿದ್ದು ಯಾರಿಗೆ? ಮಚ್ಚು ಹಿಡಿದು ವರ್ಮ ಎಚ್ಚರಿಕೆ ನೀಡಿದ್ದು ಯಾರಿಗೆ?

  ಸಿರಶ್ರೀ ಅವರು ಬರೆದಿರುವ ಸಾಹಿತ್ಯಕ್ಕೆ, ಕಲ್ಯಾಣಿ ಮಲ್ಲಿಕ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಈ ಹಾಡನ್ನ ರವಿಶಂಕರ್ ಹಾಡಿದ್ದಾರೆ. ಬಹುಶಃ ಈ ಹಾಡು ಎನ್.ಟಿ.ಆರ್ ಚಿತ್ರದ ಪ್ರಮುಖ ಅಕರ್ಷಣೆಯಾಗಬಹುದು. ಅಷ್ಟರಮಟ್ಟಿಗೆ ಸದ್ದು ಮಾಡ್ತಿದೆ.

  ಈ ಹಿಂದೆ 'ಅರುಂಧತಿ' ಚಿತ್ರದಲ್ಲಿ ಸೋನುಸೂದ್ ಗೆ ಡಬ್ ಮಾಡಿದ್ದ ರವಿಶಂಕರ್, ಬಳಿಕ ತೆಲುಗಿನಲ್ಲಿ ಅಷ್ಟಾಗಿ ಕಾಣಿಸಿಲ್ಲ. ಇದೀಗ, ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದ ಹಾಡಿನ ಮೂಲಕ ಮತ್ತೆ ಟಾಲಿವುಡ್ ನಲ್ಲಿ ಘರ್ಜಿಸಿದ್ದಾರೆ.

  ಯಾರ್ ಏನೇ ಹೇಳಿದ್ರು 'ಈ ವಿಷ್ಯ'ದಲ್ಲಿ ರಾಮ್ ಗೋಪಾಲ್ ವರ್ಮಾ 'ಗ್ರೇಟ್'.! ಯಾರ್ ಏನೇ ಹೇಳಿದ್ರು 'ಈ ವಿಷ್ಯ'ದಲ್ಲಿ ರಾಮ್ ಗೋಪಾಲ್ ವರ್ಮಾ 'ಗ್ರೇಟ್'.!

  ಪ್ರೇಮಿಗಳ ದಿನದ ವಿಶೇಷವಾಗಿ ಫೆಬ್ರವರಿ 14ಕ್ಕೆ ಲಕ್ಷ್ಮೀಸ್ ಎನ್.ಟಿ.ಆರ್ ಟ್ರೈಲರ್ ರಿಲೀಸ್ ಆಗುತ್ತಿದ್ದು, ಸಿನಿಮಾ ಬಿಡುಗಡೆ ದಿನಾಂಕವನ್ನ ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದಾರೆ. ಇನ್ನುಳಿದಂತೆ ಎನ್.ಟಿ.ಆರ್ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದನ ಬಗ್ಗೆಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಎನ್.ಟಿ.ಆರ್ ಪತ್ನಿ ಲಕ್ಷ್ಮಿ ಪಾತ್ರದಲ್ಲಿ ಕನ್ನಡದ ಯಜ್ಞಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

  English summary
  Bommali Ravi Shankar singing a thunderous song in Jubilee Studio for Lakshmis NTR lyrics penned by sirasri and music by kalyani malik.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X