ಸಂಜನಾ ವಿಷ್ಯದಲ್ಲಿ ಶ್ರುತಿ ಎಂಟ್ರಿಯಾಗಿದ್ದಕ್ಕೆ 'ಡೆಡ್ಲಿ' ಡೈರೆಕ್ಟರ್ ಫುಲ್ ಗರಂ.!

Recommended Video

ನಿರ್ದೇಶಕ ರವಿ ಶ್ರೀವತ್ಸ ಮೇಲೆ ಆರೋಪ ಹೊರಿಸಿದ ಸಂಜನಾ ಗಲ್ರಾಣಿ | ಶ್ರುತಿ ಹರಿಹರನ್ ಸಾಥ್ | Filmibeat Kannada

'ಗಂಡ ಹೆಂಡತಿ' ಚಿತ್ರದ ನಟಿ ಸಂಜನಾ ನಿರ್ದೇಶಕ ರವಿ ಶ್ರೀವತ್ಸ ಅವರ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಚಿತ್ರೀಕರಣದ ವೇಳೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕರ ಶ್ರೀವತ್ಸ ಸಂಜನಾ ಅವರಿಗೆ ತಿರುಗೇಟು ನೀಡಿದ್ದಾರೆ.

ಆಕೆಯ ಆರೋಪ ಸುಳ್ಳು, ಪ್ರಚಾರಕ್ಕಾಗಿ ಹೀಗೆ ಮಾಡ್ತಿದ್ದಾರೆ, ಮೀಟೂ ಅಭಿಯಾನವನ್ನ ದುರಪಯೋಗ ಮಾಡಿಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ನಟಿ ಶ್ರುತಿ ಹರಿಹರನ್ ಗೂ ಡೆಡ್ಲಿ ಡೈರೆಕ್ಟರ್ ಕ್ಲಾಸ್ ತೆಗೆದುಕೊಂಡರು.

'ಗಂಡ ಹೆಂಡತಿ' ಸಿನಿಮಾ ನಮ್ಮದು, ಸಂಜನಾ ಆರೋಪ ಮಾಡ್ತಿದ್ದಾರೆ, ಮಧ್ಯದಲ್ಲಿ ಬರಲು ನೀವು ಯಾರು.? ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಶ್ರುತಿ ಅವರ ಮೀಟೂ ಅಭಿಯಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಮುಂದೆ ಓದಿ....

ಸಂಜನಾಗೆ ಬೆಂಬಲ ನೀಡಿದ್ದ ಶ್ರುತಿ

ಸಂಜನಾಗೆ ಬೆಂಬಲ ನೀಡಿದ್ದ ಶ್ರುತಿ

ಸಂಜನಾ ಅವರು ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ ನಂತರ, ಶ್ರುತಿ ಹರಿಹರನ್ ಸಂಜನಾಗೆ ಬೆಂಬಲ ಸೂಚಿಸಿದರು. ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಶ್ರುತಿ 'ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ, ನಟಿಯ ಒಪ್ಪಿಗೆ ಇಲ್ಲದೇ ಯಾವುದೇ ರೋಮ್ಯಾಟಿಂಕ್ ಸೀನ್ ಮಾಡಲು ಸಾಧ್ಯವಿಲ್ಲ. ರವಿಶ್ರೀವತ್ಸ Timesup ಎಂದು' ಟ್ವೀಟ್ ಮಾಡಿದ್ದರು.

ಕಿಡಿ ಕಾರಿದ ಶ್ರೀವತ್ಸ

ಕಿಡಿ ಕಾರಿದ ಶ್ರೀವತ್ಸ

ಶ್ರುತಿ ಹರಿಹರನ್ ಅವರೇ ಯಾವಾಗ ಚಿತ್ರರಂಗಕ್ಕೆ ಬಂದ್ರಿ, ಒಬ್ಬ ನಿರ್ದೇಶಕರಿಗೆ ಹೇಳಬೇಕೆಂದು ಗೊತ್ತಿಲ್ಲ. ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಅಮ್ಮ-ತಾಯಿ ಅಂತ ಗೌರವ ಕೊಟ್ರೆ ಹೀಗೆ. ನಿಮಗೆ ನಾನೇಮ್ಮ ಮಾಡಿದೆ. ಇದು ನಮ್ಮ ಮತ್ತು ಸಂಜನಾ ಅವರ ಮಧ್ಯೆ ಇರೋ ವಿಷ್ಯ. ನೀವು ಯಾರು.? ಎಂದು ಪ್ರಶ್ನಿಸಿದ್ದಾರೆ.

ಇದೆಲ್ಲವೂ ಪ್ರಚಾರ ಅಷ್ಟೇ

ಇದೆಲ್ಲವೂ ಪ್ರಚಾರ ಅಷ್ಟೇ

ಫೈರ್, ಮೀಟೂ, ಇನ್ನೊಂದು ಏನೂ ಬೇಕಾದರೂ ಮಾಡಿಕೊಳ್ಳಿ. ಬಹುಶಃ ಇದೆಲ್ಲವೂ ಪ್ರಚಾರಕ್ಕಾಗಿ ಮಾಡ್ತಿದ್ದಾರೆ ಅನಿಸುತ್ತಿದೆ ಅಷ್ಟೇ. ಇದು ಕೂಡ ನಿರ್ದೇಶಕರ ಸಂಘದ ಗಮನಕ್ಕೆ ತಂದಿದ್ದೇನೆ'' ಎಂದು ಹಿರಿಯ ನಿರ್ದೇಶಕ ರವಿಶ್ರೀವತ್ಸ ಅಭಿಪ್ರಾಯ ಪಟ್ಟಿದ್ದಾರೆ.

ಮೀಟೂ ಪ್ರಚಾರ ಮಾಡ್ತಿರುವ ಶ್ರುತಿ

ಮೀಟೂ ಪ್ರಚಾರ ಮಾಡ್ತಿರುವ ಶ್ರುತಿ

ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್, ಉಳಿದ ನಟಿಯರಿಗೆ ಸಪೋರ್ಟ್ ಮಾಡ್ತಿದ್ದಾರೆ. ಧೈರ್ಯವಾಗಿ ಮುಂದೆ ಬಂದು ಹೇಳಿ ಎಂದು ಕರೆ ನೀಡಿದ್ದಾರೆ. ಇನ್ನು ಈ ಅಭಿಯಾನವನ್ನ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ, ತಮ್ಮ ಟ್ವಿಟ್ಟರ್ ನಲ್ಲಿ ಮೀಟೂ ಅಭಿಯಾನದ ವಿಷ್ಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಂಜನಾ ಏನಂದ್ರು.?

ಸಂಜನಾ ಏನಂದ್ರು.?

ಸದ್ಯ ಅಮೇರಿಕಾದಲ್ಲಿರುವ ಸಂಜನಾ ಅವರು ಶ್ರೀವತ್ಸ ಅವರ ಪ್ರತ್ಯಾರೋಪಗಳನ್ನ ಅಲ್ಲೆಗಳೆದಿದ್ದಾರೆ. ನಾನು ಹೇಳಿದ ಆರೋಪಗಳಲ್ಲೆವೂ ಸತ್ಯ, ನಾನು ಅದನ್ನ ನಿರೂಪಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸುತ್ತಿರುವ ಜನ ಪರ-ವಿರೋಧದ ಚರ್ಚೆ ಮಾಡ್ತಿದ್ದಾರೆ.

More from Filmibeat

English summary
Ganda hendathi director ravi srivastava has react on sruthi hariharan me too allegations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X