For Quick Alerts
  ALLOW NOTIFICATIONS  
  For Daily Alerts

  ಮುತ್ತಪ್ಪ ರೈ ಬಯೋಪಿಕ್; 3 ಪಾರ್ಟ್ ನಲ್ಲಿ ತಯಾರಾಗುತ್ತಿದೆ 'ಎಂಆರ್' ಸಿನಿಮಾ

  By ಫಿಲ್ಡ್ ಡೆಸ್ಕ್
  |

  ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಬಯೋಪಿಕ್ ಬರುತ್ತೆ ಎನ್ನುವ ಸುದ್ದಿ ಅನೇಕ ಸಮಯದಿಂದ ಸದ್ದು ಮಾಡುತ್ತಿದ್ದು. ಆದರೆ ಕಾರಣಾಂತರಗಳಿಂದ ಸಿನಿಮಾ ಪ್ರಾರಂಭವಾಗಿರಲಿಲ್ಲ. ಇದೀಗ ರೈ ಜೀವನಾಧಾರಿತ ಚಿತ್ರಕ್ಕೆ ಕಾಲಕೂಡಿಬಂದಿದೆ.

  ಇತ್ತೀಚಿಗಷ್ಟೆ ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾಗೆ ಮುಹೂರ್ತ ನೆರವೇರಿದೆ. ಅಂದಹಾಗೆ ರೈ ಬಯೋಪಿಕ್ ಮಾಡುವ ಧೈರ್ಯ ಮಾಡಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ. ಚಿತ್ರಕ್ಕೆ ಎಂ ಆರ್ ಟೈಟಲ್ ಫಿಕ್ಸ್ ಆಗಿದ್ದು, ಸೌಭಾಗ್ಯ ಲಕ್ಷ್ಮೀ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಡೆಡ್ಲಿಸೋಮ ಚಿತ್ರದ ನಿರ್ಮಾಪಕ ಶುಭರಾಜಣ್ಣ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

  ವಿಶೇಷ ಎಂದರೆ ನಿರ್ಮಾಪಕರ ಮಗ ದೀಕ್ಷಿತ್, ಮುತ್ತಪ್ಪ ರೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಫೋಟೋಶೂಟ್ ಮಾಡಿಸುವ ಜೊತೆಗೆ ನಾಯಕನ ಪರಿಚಯ ಕೂಡ ಮಾಡಿಸಲಾಗಿದೆ.

  ಎಂಆರ್ ಸಿನಿಮಾ 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗಲಿದ್ದು, ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಮುತ್ತಪ್ಪ ರೈ ಬಯೋಪಿಕ್ ಮಾಡಬೇಕು ಎನ್ನುವ ಪ್ರಯತ್ನ ಹಲವು ವರ್ಷಗಳ ಹಿಂದೆಯೇ ನಡೆದಿತ್ತು. ಸುದೀಪ್ ನಟನೆಯಲ್ಲಿ ಅಪ್ಪ ಎನ್ನುವ ಹೆಸರಿನಲ್ಲಿ ಸಿನಿಮಾ ಅನೌನ್ಸ ಆಗಿತ್ತು. ಬಳಿಕ ಸುದೀಪ್ ಬದಲಿಗೆ ವಿವೇಕ್ ಒಬೆರಾಯ್ ಆಯ್ಕೆಯಾಗಿದ್ದರು ಆದರೆ ಸಿನಿಮಾ ಪ್ರಾರಂಭದಲ್ಲೇ ನಿಂತುಹೋಗಿತ್ತು.

  ಯಶ್ ಅಭಿಮಾನಿಗಳಿಗೆ ಖಡಕ್ ಉತ್ತರ ಕೊಟ್ಟ ಜಗ್ಗೇಶ್ ಅಭಿಮಾನಿಗಳು | Filmibeat Kannada

  ಇದೀಗ ನಿರ್ದೇಶಕ ರವಿ ಶ್ರೀವತ್ಸ ರೈ ಬಯೋಪಿಕ್ ಮಾಡಲು ನಿರ್ಧರಿಸಿದ್ದು, ಮುಹೂರ್ತ ಕೂಡ ಮಾಡಿದ್ದಾರೆ. ರೈ ಕುರಿತು ಸಿನಿಮಾ ಮಾಡಬೇಕು ಎನ್ನುವುದು ರವಿ ಶ್ರೀವತ್ಸ ಅವರ 20 ವರ್ಷದ ಕನಸಂತೆ. ಈ ಬಗ್ಗೆ ಮುತ್ತಪ್ಪ ರೈ ಅವರಿಗೆ ಕೆಲವು ವರ್ಷಗಳ ಹಿಂದೆಯೇ ಹೇಳಿದ್ದರಂತೆ, ರೈ ಕೂಡ ಮೆಚ್ಚಿಕೊಂಡಿದ್ದರು ಎನ್ನುತ್ತಾರೆ ರವಿ ಶ್ರೀವಾತ್ಸ.

  English summary
  Kannada Director Ravi srivatsa is directing biopic of Muthappa Rai titled MR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X